ತಿರುಪತಿ ದರ್ಶನ ಇನ್ನಷ್ಟು ಸುಲಭ, ವಾಟ್ಸಾಪ್ನಲ್ಲೇ ಟಿಕೆಟ್ ಬುಕಿಂಗ್! ನಂಬರ್ ಇಲ್ಲಿದೆ, ಈಗಲೇ ಸೇವ್ ಮಾಡ್ಕೊಳ್ಳಿ!
ಆಂಧ್ರಪ್ರದೇಶ ಸರ್ಕಾರ 'ಮನ ಮಿತ್ರ' ಅಡಿ ಹೊಸ ಸೇವೆಗಳನ್ನು ವಾಟ್ಸಾಪ್ನಲ್ಲಿ ತಂದಿದೆ. ವಿಜಯವಾಡದ ದುರ್ಗಾ ಮಲ್ಲೇಶ್ವರ ಸ್ವಾಮಿ, ಶ್ರೀಶೈಲ, ಶ್ರೀಕಾಳಹಸ್ತಿ, ಸಿಂಹಾಚಲ, ಅನ್ನವರಂ, ದ್ವಾರಕಾ ತಿರುಮಲ ದೇವಸ್ಥಾನಗಳ ಸೇವೆಗಳು ಸೇರಿವೆ.

ತಿರುಮಲ ತಿರುಪತಿ
ಆಂಧ್ರ ಸರ್ಕಾರ ವಾಟ್ಸಾಪ್ ಮೂಲಕ ಸರ್ಕಾರಿ ಸೇವೆಗಳನ್ನು 'ಮನ ಮಿತ್ರ'ದಡಿಯಲ್ಲಿ ಚಾಲೂ ಮಾಡಿದೆ. ತಿರುಮಲ ದರ್ಶನ ಟಿಕೆಟ್ ಬುಕಿಂಗ್ ಕೂಡ ಈಗ ಲಭ್ಯ.

ತಿರುಮಲ ತಿರುಪತಿ
ಟಿಟಿಡಿ ಸೇವೆಗಳು ವಾಟ್ಸಾಪ್ನಲ್ಲಿ ಶೀಘ್ರದಲ್ಲೇ ಲಭ್ಯ. ಟಿಕೆಟ್, ರೂಂ ಬುಕಿಂಗ್, ದೇಣಿಗೆ ಸೇರಿದಂತೆ ಹಲವು ಸೇವೆಗಳು ಲಭ್ಯವಾಗಲಿವೆ.
ತಿರುಮಲ ತಿರುಪತಿ
9552300009ಕ್ಕೆ 'ಹಾಯ್' ಎಂದು ಮೆಸೇಜ್ ಮಾಡಿ. ಆಪ್ಶನ್ನಲ್ಲಿ ಟೆಂಪಲ್ ಬುಕಿಂಗ್ ಸರ್ವೀಸಸ್ ಆಯ್ಕೆ ಮಾಡಿ. ಚಾಟ್ಬಾಟ್ ಮಾಹಿತಿ ನೀಡುತ್ತದೆ.
ವಾಟ್ಸಾಪ್ ಸಹಾಯ
ಪಾವತಿಯ ನಂತರ ಟಿಕೆಟ್ ನಿಮ್ಮ ವಾಟ್ಸಾಪ್ ನಂಬರ್ಗೆ ಬರುತ್ತದೆ. ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಹೋಗಬಹುದು.
ಇದನ್ನು ಓದಿ: APTDC ತಿರುಪತಿಯಿಂದ ಹೊಸ ಬಸ್ ಪ್ಯಾಕೇಜ್ಗಳು!
ಶೀಘ್ರದಲ್ಲೇ ರೈಲು ಸೇವೆ
ಕೇಂದ್ರದ ಅನುಮತಿ ಪಡೆದು ರೈಲು ಟಿಕೆಟ್ ಬುಕಿಂಗ್ ಕೂಡ 'ಮನ ಮಿತ್ರ'ದಲ್ಲಿ ಸೇರಿಸಲು ಪ್ರಯತ್ನಿಸುತ್ತೇವೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಎಲ್ಲಾ ಸರ್ಕಾರಿ ಸೇವೆಗಳು
ಜನವರಿ 30 ರಂದು ಆರಂಭವಾದ ವಾಟ್ಸಾಪ್ ಸೇವೆಗಳ ಮೂಲಕ 2.64 ಲಕ್ಷ ವ್ಯವಹಾರಗಳು ನಡೆದಿವೆ. 45 ದಿನಗಳಲ್ಲಿ 161 ಹೊಸ ಸೇವೆಗಳನ್ನು ಸೇರಿಸುವ ಗುರಿ ಹೊಂದಲಾಗಿದೆ.