ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ಯುವತಿಯ ಮದುವೆಗೆ ಪಾಪ್ ತಾರೆ ಜಸ್ಟೀನ್ ಬೀಬರ್ ಅಚ್ಚರಿಯ ಭೇಟಿ ನೀಡಿದ್ದು, ಈ ಭೇಟಿಯ ವೀಡಿಯೋ ವೈರಲ್ ಆಗಿದೆ.
ಕೆಲವು ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರು ಸಂಗೀತಾ ದಿಗ್ಗಜ್ಜರನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಿರುತ್ತಾರೆ. ಅವರನ್ನೊಮ್ಮೆ ಭೇಟಿ ಯಾಗುವುದೇ ತಮ್ಮ ಜೀವನದ ಉದ್ದೇಶ ಎಂಬಂತೆ ಕೆಲವರು ಭಾವಿಸುತ್ತಾರೆ. ಒಂದೇ ಒಂದು ಸಲ ತಮ್ಮ ನೆಚ್ಚಿನ ತಾರೆಯರನ್ನು ನೋಡಬೇಕು ಎಂದು ಅವರು ಹಾತೊರೆಯುತ್ತಾರೆ. ಇಂತಹ ಹುಚ್ಚು ಅಭಿಮಾನಿಗಳಿಗೆ ಕೆಲವೊಮ್ಮೆ ಅವರ ನೆಚ್ಚಿನ ತಾರೆಯರು ಸರ್‌ಪ್ರೈಸ್ ನೀಡೋದು ಇದೆ. ಅದೇ ರೀತಿ ಇಲ್ಲೊಂದು ಕಡೆ ಪಾಪ್ ಗಾಯಕ ಜಸ್ಟೀನ್ ಬೀಬರ್ ತನ್ನ ಅಭಿಮಾನಿಯೊಬ್ಬಳ ಮದ್ವೆ ದಿನ ಸರ್‌ಪ್ರೈಸ್ ಆಗಿ ಭೇಟಿ ಕೊಟ್ಟಿದ್ದು, ತನ್ನ ನೆಚ್ಚಿನ ಸಂಗೀತ ದಿಗ್ಗಜ್ಜನನ್ನು ಕಂಡ ವಧುವಿನ ಖುಷಿ ಹೇಳತೀರದಾಗಿದೆ. ಜಸ್ಟೀನ್ ಬೈಬರ್ ಭಾರತೀಯ ವಧುವೊಬ್ಬಳ ಮದುವೆಗೆ ರಹಸ್ಯವಾಗಿ ಭೇಟಿ ನೀಡಿದ್ದು, ಆತನನ್ನು ನೋಡಿ ವಧು ಅಚ್ಚರಿಯಿಂದ ಪ್ರತಿಕ್ರಿಯಿಸಿದ ರೀತಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಈ ವೀಡಿಯೋವನ್ನು ಸ್ವತಃ ವಧು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದ, ವೀಡಿಯೋ ಭಾರಿ ವೈರಲ್ ಆಗಿದೆ.
ಭಾರತೀಯ ಯುವತಿ ಮದ್ವೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟು ಅಚ್ಚರಿ ಮೂಡಿಸಿದ ಜಸ್ಟೀನ್ ಬೀಬರ್
ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ಭಾರತೀಯ ಮೂಲದ ಯುವತಿಯ ಮದುವೆಗೆ ಪಾಪ್ ತಾರೆ ಜಸ್ಟೀನ್ ಬೀಬರ್ ಸರ್‌ಪ್ರೈಸ್ ವಿಸಿಟ್ ಕೊಟ್ಟು ಅಲ್ಲಿದ್ದವರನ್ನೆಲ್ಲಾ ಅಚ್ಚರಿಪಡಿಸಿದ್ದಾರೆ. ಅಲ್ಲಿದ್ದ ಎಲ್ಲರೂ ಪಾಪ್ ಗಾಯಕನೇ ಸ್ವತಃ ಮದುವೆಗೆ ಬಂದಿರುವುದನ್ನು ನೋಡಿ ತಮ್ಮ ಕಣ್ಣುಗಳನ್ನೇ ನಂಬದಾಗಿದ್ದಾರೆ. ಜಸ್ಟೀನ್ ಬೀಬರ್ ಅವರ ಭೇಟಿ ಅಲ್ಲಿ ಸೇರಿದ ವಧುವಿನ ನೆಂಟರಿಸ್ಟರು ಬಂಧುಗಳಿಗೆ ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡಿದೆ. ವಧುವಿನ ಗೆಳತಿಯರು ಬಂಧುಗಳು ಗಾಯಕ ಜಸ್ಟೀನ್ ಬೀಬರ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಮದುವೆ ಮನೆಯಲ್ಲಿ ಪಾಪ್‌ತಾರೆಯನ್ನು ನೋಡಿ ಶಾಕ್ ಆದ ವಧು
ಈ ಮದುವೆಗೆ ಬಂದ ಬೀಬರ್ ಸಾಮಾನ್ಯ ಧಿರಿಸು ಧರಿಸಿದ್ದರು. ಬಿಳಿ ಬಣ್ಣದ ಟೀ ಶರ್ಟ್ ಅದಕ್ಕೆ ಮ್ಯಾಚ್ ಆಗುವಂತೆಹ ನೀಲಿ ಶಾರ್ಟ್ಸ್, ಇದಕ್ಕೆ ಮ್ಯಾಚ್ ಆಗುವಂತೆ ಜಾಕೆಟ್ ಧರಿಸಿದ್ರು. ಇತ್ತ ವಧು ಸಂಪ್ರದಾಯಿಕ ಹಸಿರು ಸೀರೆ ಉಟ್ಟು ಚಿನ್ನಾಭರಣ ಧರಿಸಿ ಕೈಗೆ ಕಲೀರಾವನ್ನು ಧರಿಸಿದ್ದರು. ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರೊಬ್ಬ ಸಿಹಿಯಾದ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಹುಡುಗಿ ತುಂಬಾ ಅದೃಷ್ಟವಂತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಆಕೆಗೆ ಸಿಕ್ಕ ಒಳ್ಳೆಯ ಸರ್‌ಪ್ರೈಸ್ ಹಾಗೂ ಅತ್ಯುತ್ತಮ ಮದುವೆ ಗಿಫ್ಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಓಹ್, ಇದು ತುಂಬಾ ಸೊಗಸಾಗಿದೆ. ನಾನು ಅವಳಾಗಿದ್ದರೆ ನಾನು ಅಳುತ್ತಿದ್ದೆ ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ. ಈ ನಡುವೆ ಅನೇಕರು ಜಸ್ಟೀನ್ ಬೀಬರ್ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಒಳಉಡುಪು ಕಾಣುವಷ್ಟು ಕೆಳಗೆ ಜೀನ್ಸ್ ಚಡ್ಡಿ ಧರಿಸಿದ್ದು ಇದಕ್ಕೆ ಕಾರಣ. ಎಲ್ಲರ ಮುಂದೆ ಒಮ್ಮೆಯಾದೂ ನಿಮ್ಮ ಈ ಚಡ್ಡಿ ಜಾರಿ ಹೋಗಲಿ ಎಂದು ಬಯಸುವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ನನ್ನ ಮದುವೆಯಲ್ಲಿ ಎಲ್ಲಾದರೂ ಈ ರೀತಿ ಆತ ಅಚ್ಚರಿಯ ವಿಸಿಟ್ ಕೊಟ್ಟರೆ ಗಂಡನ ಬಿಟ್ಟು ಆತನ ಹಿಂದೆ ಹೋಗುವೆ ಎಂದು ಹುಚ್ಚು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಜಸ್ಟೀನ್ ಬೀಬರ್ ಫ್ಯಾನ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಭಾರತೀಯ ಯುವತಿಯ ಮದುವೆಗೆ ಜಸ್ಟೀನ್ ಬೀಬರ್ ಸರ್‌ಪ್ರೈಸ್ ವಿಸಿಟ್ ಕೊಟ್ಟರು, ಇದಾದ ನಂತರ ನನಗೆ ಮದುವೆಯಾಗುವುದಕ್ಕೆ ಮನಸ್ಸಾಗುತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಕೂದಲು ರಹಿತ ನಾಯಿಗೆ ಅನಸ್ಥೇಸಿಯಾ ನೀಡದೇ ಟ್ಯಾಟೂ ಹಾಕಿ ಕ್ರೌರ್ಯ: ವೀಡಿಯೋಗೆ ಭಾರಿ ಆಕ್ರೋಶ
ಇದನ್ನೂ ಓದಿ: ವಿದೇಶಿ ಪ್ರವಾಸಿಗರಿಂದಲೂ ಲಂಚ ಪಡೆದು ದೇಶದ ಮರ್ಯಾದೆ ಕಳೆದ ಟ್ರಾಫಿಕ್ ಪೊಲೀಸರು
