ಗಣೇಶನ ಮೂರ್ತಿಯ ಮಡಿಲಲ್ಲಿ ಬೆಕ್ಕೊಂದು ನಿದ್ರಿಸಿರುವ ವೀಡಿಯೋ ವೈರಲ್ ಆಗಿದೆ. ಮಾಲೀಕನ ಮುದ್ದಾಟಕ್ಕಾಗಿ ಮಗುವಿನೊಂದಿಗೆ ನಾಯಿಯೊಂದು ಸ್ಪರ್ಧಿಸುವ ಮತ್ತೊಂದು ವೀಡಿಯೋ ಕೂಡ ವೈರಲ್ ಆಗಿದೆ.

ಗಣೇಶನ ಮಡಿಲಲ್ಲಿ ಸುಖ ನಿದ್ದೆಗೆ ಜಾರಿದ ಬೆಕ್ಕು:

ಗಣೇ್ಶ ಚತುರ್ಥಿಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶವೇ ಗಣೇಶನ ಹಬ್ಬಕ್ಕೆ ಸಜ್ಜುಗೊಳ್ಳುತ್ತಿದೆ. ಈಗಾಗಲೇ ಅನೇಕರು ತಮ್ಮ ಮನೆಗಳಲ್ಲಿ ಗ್ರಾಮಗಳಲ್ಲಿ ಗಲ್ಲಿ ಕೇರಿಗಳಲ್ಲಿ ಗಣೇಶನನ್ನು ಕೂರಿಸುವುದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಕೆಲವರು ಈಗಾಗಲೇ ಗಣೇಶನ ಮೂರ್ತಿಗಳನ್ನು ತಮ್ಮ ತಮ್ಮ ಪ್ರದೇಶಗಳಿಗೆ ತೆಗೆದುಕೊಂಡು ಬಂದು ಆಚರಣೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಗಣೇಶ ಮೂರ್ತಿಯ ಮಡಿಲಲ್ಲಿ ಬೆಕ್ಕೊಂದು ಸುಖನಿದ್ದೆಗೆ ಜಾರಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ವೀಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಭಾರತದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್‌ 6ರವೆರೆಗ ಸುಮಾರು 10 ದಿನಗಳ ಕಾಲ ವಿಘ್ನ ನಿವಾರಕನ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೀಗೆ ಗಣೇಶನ ಹಬ್ಬಕ್ಕಾಗಿ ನಿರ್ಮಾಣ ಮಾಡಿದ ಪ್ರತಿಮೆಯ ಕೈಗಳ ಮೇಲೆ ಬೆಕ್ಕೊಂದು ಸುಖ ನಿದ್ದೆಗೆ ಜಾರಿದೆ. ಬೆಕ್ಕು ದೇವರ ಮಡಿಲನ್ನೇ ತನ್ನ ನಿದ್ರೆಗೆ ಆಯ್ಕೆ ಮಾಡಿಕೊಂಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಮಾಲೀಕನ ಮುದ್ದಾಡಲು ಪುಟ್ಟ ಮಗುವಿನೊಂದಿಗೆ ಶ್ವಾನದ ಸ್ಪರ್ಧೆ

ಹಾಗೆಯೇ ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ಪ್ರೀತಿಗಾಗಿ ನಾಯಿ ಹಾಗೂ ಮಗುವಿನ ಸ್ಪರ್ಧೆಯ ವೀಡಿಯೋ ಭಾರಿ ವೈರಲ್ ಆಗಿದೆ. ಸಾಮಾನ್ಯವಾಗಿ ಮನೆ ಮಾಲೀಕರು ತನ್ನ ಸಾಕಿದ ವ್ಯಕ್ತಿಯ ಮೇಲೆ ಪ್ರಾಣಿಗಳು ಅದರಲ್ಲೂ ವಿಶೇಷವಾಗಿ ನಾಯಿಗಳು ಅಪಾರವಾದ ನಿಯತ್ತು ಹಾಗೂ ಪ್ರೀತಿಯನ್ನು ಹೊಂದಿರುತ್ತವೆ. ಮಾಲೀಕನಿಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಈ ನಾಯಿಗಳು ಖಿನ್ನತೆಗೆ ಜಾರುತ್ತವೆ. ಇನ್ನು ಮನೆ ಮಾಲೀಕ ದಿನವೂ ಕಚೇರಿಗೆ ಹೋಗಿ ಕೆಲಸ ಮಾಡಿ ಸಂಜೆ ಬರುವವನಾಗಿದ್ದರೆ ಆತನಿಗಾಗಿ ಆತನ ನಾಯಿ ಕಾಯುವ ರೀತಿಯೇ ಬೇರೆ ರೀತಿಯಾಗಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ನಾಯಿಯೊಂದು ಮಾಲೀಕ ಆಗಮಿಸಿ ಬಾಗಿಲು ತೆಗೆಯುವುದಕ್ಕಾಗಿಯೇ ಕಾಯುತ್ತಿದ್ದು, ಮಾಲೀಕ ಬಾಗಿಲು ತೆರೆದ ತಕ್ಷಣ ಆತನ ಮೇಲೆ ಎರಡು ಕೈಯಿಟ್ಟು ಮುದ್ದಾಡಿ ತನ್ನ ಖುಷಿ ವ್ಯಕ್ತಪಡಿಸುತ್ತಿದೆ.

ಬರೀ ಇಷ್ಟೇ ಅಲ್ಲ ನಾಯಿಯ ಜೊತೆ ಆ ವ್ಯಕ್ತಿಯ ಪುಟ್ಟ ಮಗು ಕೂಡ ತನ್ನ ಅಪ್ಪ ಬರುವುದನ್ನು ಕಾಯುತ್ತಾ ಕುಳಿತಿದೆ. ಅಪ್ಪನನ್ನು ನೋಡಿ ಮಗುವೂ ಕೂಡ ಅವರತ್ತ ಓಡಿ ಹೋಗುತ್ತದೆ. ಆದರೆ ಈ ನಾಯಿ ಮರಿ ಮಾತ್ರ ಮಗುವಿಗೂ ಅಪ್ಪ ಮುದ್ದಾಡುವುದಕ್ಕೆ ಜಾಗ ಬಿಡದಂತೆ ತಾನೇ ಸಂಪೂರ್ಣವಾಗಿ ಮಾಲೀಕನ ಮೇಲೆ ಹಾರುತ್ತಾ ಆವರಿಸಿಕೊಳ್ಳುತ್ತದೆ. ಆ ವ್ಯಕ್ತಿ ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ತನ್ನ ಮೇಲೆ ಎರಡು ಕಾಲಿಟ್ಟು ಕೆನ್ನೆ ನೆಕ್ಕುತ್ತಿರುವ ಬಾಯಿಯೊಂದು ಬಾರದ ಮೂಕ ಪ್ರಾಣಿ ನಾಯಿಯನ್ನು ತಬ್ಬಿಕೊಳ್ಳುತ್ತಾರೆ. ಮಗುವನ್ನು ಎತ್ತಿಕೊಂಡಿದ್ದ ಅವರು ಅಲ್ಲೇ ನೆಲದ ಮೇಲಿದ್ದ ಬೆಡ್‌ ಮೇಲೆ ಮೊಣಕಾಲೂರಿ ಕುಳಿತರೆ ಅವರ ಸುತ್ತಾ ಒಂದು ಸುತ್ತು ಬಂದ ನಾಯಿ ಮತ್ತೆ ಒಂದು ಕಡೆ ಮಗುವಿದ್ದರೆ ಮತ್ತೊಂದು ಕಡೆ ತಾನು ನಿಂತುಕೊಂಡು ತನ್ನ ಮಾಲೀಕನನ್ನು ಮುದ್ದಾಡುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ನಾಯಿಯ ಪ್ರೀತಿಗೆ ಭಾವುಕರಾಗಿದ್ದಾರೆ.

ಡಿಯೋ ನೋಡಿದ ಒಬ್ಬರು ಪ್ರೀತಿಗಾಗಿ ಇಬ್ಬರು ಒಡಹುಟ್ಟಿದ್ದವರ ಮಧ್ಯೆ ಫೈಟ್ ಎಂದು ಕಾಮೆಂಟ್ ಮಾಡಿದ್ದಾರೆ. ನಾಯಿಗಳ ಪ್ರೀತಿ ಸಹಜತೆಯಿಂದ ಬರುತ್ತದೆ, ಮಗುವಿನ ಪ್ರೀತಿಯನ್ನು ಮನುಷ್ಯರು ಕಲಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಪ್ರೀತಿ ಗಳಿಸುವ ಈ ವ್ಯಕ್ತಿ ಒಬ್ಬ ಶ್ರೀಮಂತ ವ್ಯಕ್ತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಮಗುವಿಗಿಂತ ನಿಮ್ಮ ನಾಯಿ ನಿಮ್ಮ ಆಗಮನವನ್ನು ಹೆಚ್ಚು ಸಂಭ್ರಮಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಾಯಿಯೊಂದಿಗೆ ಪುಟ್ಟ ಮಗುವಿನ ಆಟ

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಇನ್ನೊಂದು ನಾಯಿ ಹಾಗೂ ಮಗುವಿನ ವಿಡಿಯೋ ಇಲ್ಲಿದೆ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆಯೇ ವರ್ತಿಸುತ್ತವೆ ಅವರಿಗೆ ಬಹಳ ಕಾಳಜಿ ತೋರಿಸುತ್ತವೆ. ಮಕ್ಕಳ ಆಟಕ್ಕೆ ಒಳ್ಳೆಯ ಪಾರ್ಟನರ್‌ಗಳಾಗಿಬಿಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ನಾಯೊ ಹಾಗೂ ತಮ್ಮ ಮಗುವಿನ ಒಡನಾಟದ ವೀಡಿಯೋವನ್ನು ಪೋಷಕರು ಹಂಚಿಕೊಂಡಿದ್ದಾರೆ ವೀಡಿಯೋದಲ್ಲಿ ಅವರು ಹೀಗೆ ಬರೆದಿದ್ದಾರೆ. ಕಳೆದ ಒಂದು ಗಂಟೆಯಿಂದಲೂ ಅವಳು(ಮಗು) ಖಾಲಿ ಪಾತ್ರೆ ಹಿಡಿದುಕೊಂಡು ಆತನಿಗೆ(ನಾಯಿಗೆ) ಊಟ ತಿನಿಸುತ್ತಿದ್ದಾಳೆ. ಹಾಗೂ ಆತನೂ ಕಾಣದ ಆಹಾರವನ್ನು ಅವಳಿಗಾಗಿ ತಿಂದಂತೆ ನಟಿಸುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮಗುವೊಂದು ಖಾಲಿ ಪಾತ್ರೆ ಹಿಡಿದುಕೊಂಡು ನಾಯಿಗೆ ಊಟ ಕೊಟ್ಟಂತೆ ಮಾಡ್ತಿದ್ದರೆ, ಆ ಹಸ್ಕಿ ತಳಿಯ ನಾಯಿ ಮಗು ಕೊಟ್ಟ ಆಹಾರವನ್ನು ತಿಂದಂತೆ ಮಾಡ್ತಿದೆ.

View post on Instagram

View post on Instagram

ಇದನ್ನೂ ಓದಿ: ಸಿಟಿಸ್ಕ್ಯಾನ್‌ ವೇಳೆ ಬಳಸುವ ಕಂಟ್ರಾಸ್ಟ್ ಏಜೆಂಟ್‌ ರಿಯಾಕ್ಷನ್‌ನಿಂದ 21ರ ಯುವತಿ ಸಾವು

ಇದನ್ನೂ ಓದಿ: Summon Modeನಲ್ಲಿದ್ದ ಟಾಟಾ ಹ್ಯಾರಿಯರ್‌ ಇವಿ ಕಾರು ಇದಕ್ಕಿದ್ದಂತೆ ರಿವರ್ಸ್ ಬಂದು ಮಾಲೀಕ ಸಾವು