ಒಂದು ಮಿಲಿಯನ್ ಡಾಲರ್‌ಗೆ ಮಾರಾಟವಾಗದ ಮನೆಯನ್ನು ಲಾಟರಿ ಮೂಲಕ ಎರಡು ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ ಮನೆ ಮಾಲೀಕ. ಹಾಗಿದ್ರೆ ಆತ ಮಾಡಿದ್ದೇನು ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ…
ಒಂದು ಕಡೆ ಕೋಟ್ಯಾಂತರ ಮೊತ್ತದ ಹಣ ಒಂದು ಕಡೆ ಬುದ್ಧಿ ಇವರೆಡರಲ್ಲಿ ಯಾವುದನ್ನೂ ಆಯ್ಕೆ ಮಾಡುವಿರಿ ಎಂದರೆ ಬಹುತೇಕರು ಬುದ್ಧಿ ಇದೆ ಹಣವೇ ಬೇಕು ಎಂದು ಆಯ್ಕೆ ಮಾಡಬಹುದು. ಆದರೆ ಶ್ರೀಮಂತಿಕೆಗಿಂತ ಬುದ್ಧಿವಂತಿಕೆ ಎಷ್ಟು ಅಗತ್ಯ ಎಂಬುದು ಆಗಾಗ ಸಾಬೀತಾಗುತ್ತಿರುತ್ತದೆ. ಶ್ರೀಮಂತಿಕೆ ಇದ್ದರೂ ಕೆಲವೊಮ್ಮೆ ಅದನ್ನು ಹೇಗೆ ಹೂಡಿಕೆ ಮಾಡಬೇಕು ಎಂಬ ಬುದ್ಧಿ ಇಲ್ಲದಿದ್ದರೆ ಎಂತಹ ಶ್ರೀಮಂತಿಕೆ ಇದ್ದರೂ ಕಡಿಮೆಯೇ. ಬುದ್ಧಿ ಇದ್ದರೆ ಬಡವನಾದರು ಶ್ರೀಮಂತನಾಗಬಹುದು. ಆದರೆ ಬುದ್ಧಿ ಇಲ್ಲದೇ ಹೋದರೆ ಹಿರಿಯರು ಕೂಡಿಟ್ಟ ಎಂತಹ ಆಸ್ತಿ ಇದ್ದರೂ ಅದು ನಿಧಾನವಾಗಿ ಕರಗುತ್ತಾ ಬರುವುದು. ಅದೇ ರೀತಿ ಬುದ್ಧಿವಂತಿಕೆ ಎಷ್ಟು ಮುಖ್ಯ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಮನೆ ಮಾಲೀಕನ ಸ್ಮಾರ್ಟ್ ಐಡಿಯಾಗೆ ನೆಟ್ಟಿಗರ ಸೆಲ್ಯೂಟ್:
ಅಂದಹಾಗೆ ಈ ಘಟನೆ ಎಲ್ಲಿ ನಡೆದಿರುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಕೆಲವು ಸೋಶಿಯಲ್ ಮೀಡಿಯಾ ಖಾತೆಗಳು, ಅಮೆರಿಕಾದಲ್ಲಿ ಎಂದರೆ ಮತ್ತೆ ಕೆಲವರು ಈ ಘಟನೆ ನಡೆದಿರುವುದು ಯುಕೆಯಲ್ಲಿ ಎಂದು ಹೇಳುತ್ತಾರೆ. ಆದರೆ ಆ ಬುದ್ಧಿವಂತ ಎಲ್ಲಿಯವನಾದರೇನು ಅವನ ಬುದ್ಧಿವಂತಿಕೆ ಮಾತ್ರ ಈಗ ಭಾರಿ ಸದ್ದು ಮಾಡುತ್ತಿದೆ. ಹಾಗಿದ್ದರೆ ಆತ ಮಾಡಿದ್ದೇನು? ಇಲ್ಲಿದೆ ನೋಡಿ ಸ್ಟೋರಿ...
ಅಂದಹಾಗೆ ಈತನ ಹೆಸರು ಡಸ್ಟಿನ್ ಲಾ, ಈತ ತನ್ನ ಮನೆಯನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ. ತಾನು ತನ್ನ ಮನೆಯನ್ನು 1 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುವುದಾಗಿ ಆತ ಹೇಳಿಕೊಂಡಿದ್ದ. ಆದರೆ ಈ ಮನೆ ದುಬಾರಿ ಅನಿಸಿತೋ ಏನೋ ಯಾರೊಬ್ಬರೂ ಈ ಮನೆಯನ್ನು ಖರೀದಿ ಮಾಡುವುದಕ್ಕೆ ಮುಂದಾಗಲಿಲ್ಲ, ಆದರೆ ಜನ ಖರೀದಿ ಮಾಡದೇ ಹೋದರೆ ಏನಂತೆ ಡಸ್ಟಿನ್ ಲಾ ಮಾತ್ರ ಸುಮ್ಮನೇ ಕೂರಲಿಲ್ಲ, ಹೊಸದೊಂದು ಐಡಿಯಾದೊಂದಿಗೆ ಆತ ಜನರ ಮುಂದೆ ಬಂದ.
ಏನದು ಮನೆ ಮಾಲೀಕನ ಸ್ಮಾರ್ಟ್ ಐಡಿಯಾ?
ಲಾಟರಿ, ಹೌದು ಕೇವಲ ಒಂದು ಡಾಲರ್ ಮೌಲ್ಯದ ಲಾಟರಿ ಟಿಕೆಟನ್ನು ಈತ ಲಕ್ಷಾಂತರ ಪ್ರಿಂಟ್ ಹಾಕಿದ. ಇದರಲ್ಲಿ ಸುಮಾರು ಎರಡು ಮಿಲಿಯನ್ ಡಾಲರ್ ಲಾಟರಿಯನ್ನು ಆತ ಮಾರಾಟ ಮಾಡಿದ. ನೀವೇ ಈಗ ಲೆಕ್ಕೆ ಹಾಕಿ ಒಂದು ಲಾಟರಿ ಟಿಕೆಟ್‌ಗೆ ಒಂದು ರೂಪಾಯಿ ಅಂತಹ ಎರಡು ಮಿಲಿಯನ್ ಲಾಟರಿ ಟಿಕೆಟನ್ನು ಆತ ಮಾರಾಟ ಮಾಡಿದ ಎಂದರೆ ಹಣ ಎಷ್ಟಾಯ್ತು ಸುಮಾರು ಎರಡು ಮಿಲಿಯನ್ ರೂಪಾಯಿಗಳು. ಹೌದು ಹೀಗೆ ಆತ ಸುಮಾರು 2 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ. ಆತನ ಮನೆಗೆ ಆತ ಅಂದಾಜಿಸಿದ ಬೆಲೆ ಕೇವಲ 1 ಮಿಲಿಯನ್ ಡಾಲರ್. ಆದರೆ ಆತನಿಗೆ ಈಗ ಆತನ ಹಣವೂ ಸಿಕ್ತು ಮನೆಯೂ ಸೇಲಿನ ಬದಲು ಲಾಟರಿ ಮೂಲಕ ಗೆದ್ದ ಅದೃಷ್ಟಶಾಲಿಯ ಕೈ ಸೇರಿತು. ಹೇಗಿದೆ ನೋಡಿ ಈತನ ಐಡಿಯಾ...!
ಮನೆಯನ್ನು ಲಾಟರಿ ಮೂಲಕ ಸೇಲ್ ಮಾಡುವುದಕ್ಕಾಗಿ ಆತ ಜನರ ಮುಂದೆಯೇ ಲಾಟರಿ ಟಿಕೆಟ್‌ಗಳ ಡ್ರಾ ಮಾಡಿದ. ಗೆದ್ದ ಅದೃಷ್ಟಶಾಲಿ ವಿಜೇತನಿಗೆ ಆತ ತನ್ನ ಮನೆಯನ್ನು ಹಸ್ತಾಂತರಿಸಿದ. ಈತನ ಈ ಬುದ್ಧಿವಂತಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಅನೇಕರು ಈತನ ಬುದ್ಧಿವಂತಿಕೆಯನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲವರು ಯಾವುದೇ ಲೈಸೆನ್ಸ್ ಮಾಡದೇ ಲಾಟರಿ ಟಿಕೆಟ್ ಮಾಡಿದ್ದು ಅಕ್ರಮ ಕೆಲಸ ಎಂದರೆ ಮತ್ತೆ ಕೆಲವರು ಆತನ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಆತನಿಗೆ ತನ್ನ ಮನೆ ತಾನು ಬಯಸಿದ್ದಕ್ಕಿಂತಲೂ ಹೆಚ್ಚಿನ ದರಕ್ಕೆ ಸೇಲ್ ಆಯ್ತು, ಇತ್ತ ಕೊಂಡವನಿಗೂ ಅದು ಅದೃಷ್ಟದ ಉಡುಗೊರೆಯಂತೆ ಬಂತು. ಒಟ್ಟಿನಲ್ಲಿ ಬುದ್ಧಿವಂತಿಕೆ ಇದ್ದರೆ ಏನು ಮಾಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಸಂಕಷ್ಟದ ಸಮಯದಲ್ಲೂ ಬಾಲಕನ ದೊಡ್ಡತನ: ಪ್ರವಾಹ ಪೀಡಿತ ಪಂಜಾಬ್‌ನ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಪೋಷಕರು ಮನೆಯಲ್ಲಿಲ್ಲದ ವೇಳೆ ದುರಂತ: ಲೋಡೆಡ್ ಗನ್ ಜೊತೆ ಆಟ, ಟ್ರಿಗರ್ ಒತ್ತಿದ ಬಾಲಕ ಸಾವು
