UFC ಫೈಟರ್ ವಿಡಿಯೋದಿಂದ ಭಾರಿ ಸಂಚಲನ, ಜೆಕ್ ರಿಪಬ್ಲಿಕ್‌ನಲ್ಲಿ ಆರಂಭಗೊಂಡಿತಾ ಬಿಜೆಪಿ? ಚಾಂಪಿಯನ್ ರಸ್ಲರ್ ಜಿರಿ ಪ್ರೊಚಾಝ್ಕ ಈ ಕುರಿತು ಕೆಲ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಝೆಕ್ ರಾಜ್ಯದಲ್ಲಿ ಬಿಜೆಪಿ ಶಾಖೆ ಆರಂಭಗೊಂಡಿತಾ?
ಝೆಕ್ ರಿಪಬ್ಲಿಕ್ (ಅ.16) ಸೋಶಿಯಲ್ ಮೀಡಿಯಾದಲ್ಲಿ ಇದೀಗ ಬಿಜೆಪಿ ಶಾಖೆ ಝೆಕ್ ರಿಪಬ್ಲಿಕ್‌ನಲ್ಲಿ ಆರಂಭಗೊಂಡಿತಾ? ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಯುಎಫ್‌ಸಿ ಫೈಟರ್ ಜಿರಿ ಪ್ರೊಚಾಝ್ಕ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಹಲವು ಪೋಸ್ಟ್. ಬಿಜೆಪಿ ಹೆಸರಿನ ಬ್ಯಾಂಡ್, ಟಿ, ಶರ್ಟ್ ಧರಿಸಿ ವಿಡಿಯೋ, ಫೋಟೋ ಪೋಸ್ಟ್ ಮಾಡಿದ್ದಾರೆ. ಲೆಟ್ಸ್ ಗೋ ಬಿಜೆಪಿ ಅನ್ನೋ ಟ್ಯಾಗ್ ಲೈನ್ ಇರುವ ಟಿ ಶರ್ಟ್‌ಗಳು ಭಾರತೀಯರ ಗಮನಸೆಳೆದಿದೆ. ಹಲವರು ಏನಿದು ಎಂದು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಝೆಕ್ ರಿಪಬ್ಲಿಕ್‌ನಲ್ಲಿ ಬಿಜೆಪಿ ಶಾಖೆ ಆರಂಭಗೊಂಡಿತಾ ಎಂದು ಪ್ರಶ್ನಿಸಿದ್ದಾರೆ. ಇದರ ಅಸಲಿ ಕತೆಯೇನು?
ಜಿರಿ ಪ್ರೊಚಾಝ್ಕ್ ಪೋಸ್ಟ್ ಅಸಲಿ ಕತೆಯೇನು?
ಜಿರಿ ಪ್ರೊಚಾಝ್ಕ್ ತಮ್ಮ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಬಿಜೆಪಿ ಭಾರಿ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿಯೇ ಭಾರತೀಯರ ಗಮನಸೆಳೆದಿದೆ. ಆದರೆ ಇದು ಜಿರಿ ಪ್ರೊಚಾಝ್ಕ್ ಅವರ ಬ್ರ್ಯಾಂಡ್ ಪ್ರಾಡಕ್ಟ್. ರಸ್ಲರ್ ಸೇರಿದಂತೆ ಜಿಮ್ ಅಭ್ಯಾಸ ಮಾಡುವವರು, ಬಾಡಿ ಬಿಲ್ಡರ್ ಸೇರಿದಂತೆ ಕಟ್ಟು ಮಸ್ತಾದ ದೇಹ ಹಾಗೂ ಆರೋಗ್ಯಕ್ಕಾಗಿ ಹಲವು ಉತ್ಪನ್ನಗಳನ್ನು ಜಿರಿ ಪ್ರೊಚಾಝ್ಕ್ ಹೊರತಂದಿದ್ದಾರೆ. ಇವೆಲ್ಲವೂ ಬಿಜೆಪಿ ಬ್ರ್ಯಾಂಡ್ ಅಡಿಯಲ್ಲಿದೆ. ಬಿಜೆಪಿ ಸ್ಟೋರ್‌ಗಳು ಆರಂಭಗೊಂಡಿದೆ. ಪ್ರೊಟೀನ್ ಪೌಡರ್, ಪೌಷ್ಠಿಕಾಂಶದ ಪೌಡರ್ ಸೇರಿದಂತೆ ಹಲವು ಉತ್ಪನ್ನಗಳು ಜಿರಿ ಪ್ರೊಚಾಝ್ಕ್ ಅವರ ಬಿಜೆಪಿ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಿದೆ.
ಬಿಜೆಪಿ ಅನ್ನೋ ಹೆಸರು ಯಾಕೆ?
ಜಿರಿ ಪ್ರೊಚಾಝ್ಕ್ ಬ್ರ್ಯಾಂಡ್ ಬಿಜೆಪಿ ಎಂದು ಹಸರಿಟ್ಟಿದ್ದೇಕೆ? ಅನ್ನೋ ಕುತೂಹಲ ಹಲವರಲ್ಲಿ ಮೂಡಿದೆ. ಇದು ಝೆಕ್ ಭಾಷೆಯಲ್ಲಿರುವ ಮೂರು ಪದಗಳ ಶಾರ್ಟ್ ಫಾರ್ಮ್. ಬಾಂಬೆ ಜಾಕ್ ಪಿಕಾ (Bomby Jak Pica)ಅನ್ನೋ ಪದಗಳ ಮೊದಲ ಅಕ್ಷರ ತೆಗೆದು ಬಿಜೆಪಿ ಎಂದು ಹೆಸರಿಡಲಾಗಿದೆ.
ಜೆಕ್ ರಿಪಬ್ಲಿಕ್ ಬಿಜೆಪಿ ಎಂದು ಹಲವರ ಕಮೆಂಟ್
ಅಸಲಿ ಕತೆ ಬೇರೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಜೆಕ್ ರಿಪಬ್ಲಿಕ್‌ನಲ್ಲಿ ಬಿಜೆಪಿ ಶಾಖೆ ಅನ್ನೋ ರೀತಿಯಲ್ಲೂ ಹರಿದಾಡುಚ್ಚಿದೆ. ಹಲವರು ಬಿಜೆಪಿ ಫಾರ್ ಇಂಡಿಯಾ ಬಳಿಕ ಇದೀಗ ಬಿಜೆಪಿ ಫಾರ್ ಝೆಕ್ ರಿಪಬ್ಲಿಕ್ ಎಂದು ತಮಾಷೆ ಮಾಡಿದ್ದಾರೆ. ಜಿರಿ ಪ್ರೊಚಾಝ್ಕ್ ಬಿಜೆಪಿ ಬ್ರ್ಯಾಂಡ್ ಪೋಸ್ಟ್ ಬರೋಬ್ಬರಿ 2.8 ಮಿಲಿಯನ್ ವೀವ್ಸ್ ಪಡೆದಿದೆ. ಈ ಪೈಕಿ ಬಹುತೇಕ ವೀವ್ಸ್ ಹಾಗೂ ಲೈಕ್ಸ್ ಭಾರತದಿಂದಲೇ ಬಂದಿದೆ.
