ರೀಲ್ಸ್ ಮಾಡುವ ಭರದಲ್ಲಿ ಯುವಕನೊಬ್ಬ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡು, ತಕ್ಷಣ ಪ್ಯಾಂಟ್ ಬಿಚ್ಚಿ ಪ್ರಾಣಾಪಾಯದಿಂದ ಪಾರಾದ ಘಟನೆ ವೈರಲ್ ಆಗಿದೆ. ಇದೇ ರೀತಿ ಸೀರೆಗೆ ಬೆಂಕಿ ಹಚ್ಚಿಕೊಂಡು ರೀಲ್ಸ್ ಮಾಡಿದ ಯುವತಿಯ ವಿಡಿಯೋ ಕೂಡ ವೈರಲ್ ಆಗಿದೆ.

Reels With Fire: ಇಂದಿನ ಯುವ ಸಮುದಾಯಕ್ಕೆ ಫೇಮಸ್ ಆಗಬೇಕು ಮತ್ತು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಮಹದಾಸೆಯನ್ನು ಹೊಂದಿರುತ್ತಾರೆ. ಕಡಿಮೆ ಸಮಯದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಇಂದಿನ ಯುವ ಸಮುದಾಯ ಸೋಶಿಯಲ್ ಮೀಡಿಯಾದ ಮೊರೆ ಹೋಗುತ್ತಾರೆ. ಎಲ್ಲರಿಗಿಂತ ಭಿನ್ನವಾಗಿ ವಿಡಿಯೋ ಮಾಡಲು ಪ್ರಯತ್ನಿಸುತ್ತಾರೆ. ಈ ವಿಡಿಯೋಗಳಿಂದ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇಂತಹ ವಿಡಿಯೋಗಳಿಂದ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅಪಾಯಕಾರಿ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಬೆಂಕಿ ವಿಡಿಯೋ ಮಾಡಲು ಹೋಗಿ ಪ್ಯಾಂಟ್ ಬಿಚ್ಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ.

ಪ್ಯಾಂಟ್ ಕಳಚಿ ಪ್ರಾಣಾಪಾಯದಿಂದ ಪಾರಾದ ಯುವಕ

ಯುವಕನೋರ್ವ ಹಾಡು ಹೇಳುತ್ತಾ ರೀಲ್ಸ್ ಮಾಡುತ್ತಿರುತ್ತಾನೆ. ಈ ವೇಳೆ ಯುವಕ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯನ್ನು ಹಚ್ಚಿಕೊಳ್ಳುವ ಮುನ್ನ ಯುವಕ ಮುಂಜಾಗ್ರತ ಕ್ರಮವಾಗಿ ಕೆಲವು ಕೆಮಿಕಲ್ ಬಳಸಿದಂತೆ ಕಾಣಿಸುತ್ತದೆ. ಆದ್ರೆ ಸಮಯ ಕಳೆದಂತೆ ಬೆಂಕಿಯ ತೀವ್ರತೆ ಯುವಕನ ದೇಹಕ್ಕೆ ತಾಗಿದೆ. ಇದರಿಂದ ಕೂಡಲೇ ಎಚ್ಚೆತ್ತ ಯುವಕ ಪ್ಯಾಂಟ್ ಕಳಚಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಯುವಕನ ಅಪಾಯಕಾರಿ ರೀಲ್ಸ್ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @kirawontmiss ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 2.7 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿವೆ. ಈ ವಿಡಿಯೋ ಪೋಸ್ಟ್‌ಗೆ ಇದೇ ರೀತಿಯ ಹಲವು ವಿಡಿಯೋಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಕೊರಳಲ್ಲಿ ಇನ್ನರ್‌ವೇರ್‌ ಬ್ಯಾಗ್; "ಗಂಡ ಮನೆಯಲ್ಲಿ ಹುಡುಕ್ತಿರ್ಬೇಕು" ಅನ್ನೋದಾ ಜನ್ರು?

Scroll to load tweet…

ಸೀರೆಗೆ ಬೆಂಕಿ ಹಚ್ಚಿಕೊಂಡು ಯುವತಿಯ ಡ್ಯಾನ್ಸ್

ಯುವತಿಯೊಬ್ಬಳು ಸೀರೆಗೆ ಬೆಂಕಿ ಹಚ್ಚಿಕೊಂಡಿರುವ ವಿಡಿಯೋವೊಂದು ಭಾರತದಲ್ಲಿ ವೈರಲ್ ಆಗುತ್ತಿದೆ. ಸೋನು ಯಾದವ್ ಹೆಸರಿನ ಎಕ್ಸ್ ಖಾತೆಯಲ್ಲಿ ಯುವತಿಯ ಪೋಸ್ಟ್ ಮಾಡಲಾಗಿದೆ. ದಿವಾನಿ ಮೇ ದಿವಾನಿ ಸಾಜನ್ ಕೀ ದಿವಾನಿ ಹಾಡಿಗೆ ಯುವತಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋಗೆ ಈವರೆಗೆ 70 ಸಾವಿರಕ್ಕೂ ಅಧಿಕ ವ್ಯೂವ್ ಬಂದಿವೆ. ಒಂದು ವೇಳೆ ರಾಮಾಯಣ ಕಾಲದಲ್ಲಿ ಈ ರೀಲ್ಸ್ ಟ್ರೆಂಡಿಂಗ್‌ ಇದ್ದಿದ್ರೆ ಶ್ರೀರಾಮನು ಲಂಕಾ ದಹನ ಮಾಡಲು ಆಂಜನೇಯನ ಬದಲಾಗಿ ಈಕೆಯನ್ನು ಕಳುಹಿಸುತ್ತಿದ್ದನು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ಲೀಸ್ ನಮ್ಮನ್ನು ಬಿಟ್ಬಿಡಿ: ಸಂಬಂಧಿಕರ ಮಗಳನ್ನೇ ಪ್ರೀತಿಸಿ ಓಡಿಹೋದ ಯುವತಿ

Scroll to load tweet…

Scroll to load tweet…