ಯುವತಿಯೊಬ್ಬಳು ಸಂಬಂಧಿಕರ ಮಗಳನ್ನೇ ಪ್ರೀತಿಸಿ ಮನೆಯಿಂದ ಓಡಿಹೋಗಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಇಬ್ಬರೂ ಜೊತೆಯಾಗಿಯೇ ಇರುವುದಾಗಿ ಪಟ್ಟು ಹಿಡಿದಿದ್ದಾರೆ. ಈ ಘಟನೆ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಅಂಬೇಡ್ಕರ್ ನಗರ: ಯುವತಿಯೊಬ್ಬಳಿಗೆ ಸಂಬಂಧಿಯ ಮಗಳ ಮೇಲೆ ಪ್ರೇಮಾಂಕುರವಾಗಿದ್ದು, ಇಬ್ಬರು ಮನೆಯಿಂದ ಓಡಿ ಹೋಗಿದ್ದರು. ಮನೆಯಿಂದ ಕಾಲ್ಕಿತ್ತಿದ್ದ ಯುವತಿಯರನ್ನು ಪೊಲೀಸರು ಪ್ರಯಾಗರಾಜ್‌ನಲ್ಲಿ ಇಬ್ಬರು ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯುವತಿಯರು ಪೊಲೀಸರ ಮುಂದೆಯೇ ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಂಡಿದ್ದು, ಬೇರೆಯಾಗಲ್ಲ ಎಂದು ಪಟ್ಟುಹಿಡಿದ್ದಾರೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ಪುರ ಕೋತವಾಲಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.
ಜೊತೆಯಾಗಿ ಓಡಾಡುತ್ತಿದ್ರು, ಒಂದೇ ತಿಂಗಳಲ್ಲಿ ಲವ್!
ಒಂದು ತಿಂಗಳ ಹಿಂದೆ ಅಜಂಗಢನಿಂದ ಯುವತಿಯೊಬ್ಬಳು ಸಂಬಂಧಿಯ ಮನೆಗೆ ಬಂದಿದ್ದಳು. ಈ ವೇಳೆ ಸಂಬಂಧಿಕರ ಮಗಳ ಮೇಲೆ ಯುವತಿಗೆ ಲವ್ ಆಗಿದೆ. ಕಳೆದ ಒಂದು ತಿಂಗಳಿನಿಂದ ಇಬ್ಬರು ಜೊತೆಯಲ್ಲಿಯೇ ತಿರುಗಾಡುತ್ತಿದ್ದರು. ಮನೆಯಿಂದ ಹೊರಗೆ ಎಲ್ಲೇ ಹೋಗಬೇಕಾದರೂ ಇಬ್ಬರು ಜೊತೆಯಾಗಿ ಹೋಗುತ್ತಿದ್ದರು. ಒಂದು ದಿನ ಜಬಲ್ಪುರದ ಮಾರುಕಟ್ಟೆಗೆ ತೆರಳೋದಾಗಿ ಹೇಳಿದ್ದ ಇಬ್ಬರು ಸ್ಕೂಟಿ ತೆಗೆದುಕೊಂಡು ಹೋದವರು ಮತ್ತೆ ಮನೆಗೆ ಹಿಂದಿರುಗಿಲ್ಲ.
ಪೋಷಕರಿಂದ ಮಿಸ್ಸಿಂಗ್ ಕಂಪ್ಲೇಂಟ್ ದಾಖಲು
ಮಕ್ಕಳು ಮನೆಗೆ ಹಿಂದಿರುಗಿ ಬಾರದ ಹಿನ್ನೆಲೆ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆಗಸ್ಟ್ 5ರಂದು ಸಂಬಂಧಿ ಯುವತಿ ನಮ್ಮ ಮನೆಗೆ ಬಂದಿದ್ದಳು. ಇದೀಗ ಮಗಳೊಂದಿಗೆ ಆಕೆಯೂ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ಪತ್ತೆಗೆ ಮುಂದಾಗಿದ್ದರು. ಇಬ್ಬರು ಯುವತಿಯರು ಪ್ರಯಾಗ್‌ರಾಜ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ನಾವು ಇಷ್ಟಪಟ್ಟೇ ಓಡಿ ಹೋಗಿದ್ದು!
ಇಬ್ಬರು ಯುವತಿಯರು ಸಲಿಂಗಿಗಳಾಗಿದ್ದು, ಮದುವೆ ಸಹ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಆದರೆ ಯುವತಿಯರು ಮದುವೆಯಾಗಿರುವ ಬಗ್ಗೆ ಪೊಲೀಸರು ದೃಢೀಕರಿಸಿಲ್ಲ. ನಾವಿಬ್ಬರು ನಮ್ಮಿಷ್ಟದಂತೆಯೇ ಓಡಿ ಹೋಗಿದ್ದೇವೆ. ನಾವಿಬ್ಬರು ಜೊತೆಯಲ್ಲಿಯೇ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಪೋಷಕರು ನಮ್ಮಿಬ್ಬರನ್ನು ದೂರ ಮಾಡುತ್ತಿದ್ದಾರೆ ಎಂದು ಯುವತಿಯರು ಆರೋಪಿಸಿದ್ದಾರೆ. ಠಾಣೆಯಿಂದ ಇಬ್ಬರನ್ನು ಪೋಷಕರು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಅಸ್ಥಿ ವಿಸರ್ಜಿಸಿ ಹಿಂದಿರುಗುತ್ತಿದ್ದ ಕಾರ್ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಸಾವು
ಅವರಿಬ್ಬರಿಗೂ ಮುಕ್ತ ಜೀವನ ನಡೆಸಲು ಅವಕಾಶ ನೀಡಿ
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಪ್ರೀತಿ ಅಂದ್ರೆ ಪ್ರೀತಿಯಾಗಿದ್ದು, ಅದು ಎಲ್ಲರ ಗೌರವಕ್ಕೆ ಅರ್ಹವಾಗಿದೆ. ಇಬ್ಬರು ಹುಡುಗಿಯರು ಸಾಮಾಜಿಕ ಒತ್ತಡದ ಹೊರತಾಗಿಯೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಧೈರ್ಯವನ್ನು ತೋರಿಸಿದ್ದಾರೆ. ಇವರಿಬ್ಬರನ್ನು ಶಿಕ್ಷಿಸುವ ಅಥವಾ ಅಪಹಾಸ್ಯ ಮಾಡುವ ಬದಲು ಮುಕ್ತವಾಗಿ ಜೀವನ ನಡೆಸಲು ಅವಕಾಶ ನೀಡಬೇಕು. ಪ್ರಾಮಾಣಿಕವಾಗಿ ಬದುಕುವ ಅವರ ಹಕ್ಕನ್ನು ಬೆಂಬಲಿಸಬೇಕು. ಎಲ್ಲಾ ರೂಪದಲ್ಲಿಯ ಪ್ರೀತಿಯನ್ನು ಸ್ವೀಕರಿಸೋದು ನಿಜವಾದ ಪ್ರಗತಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಅಪಘಾತದ ನಂತರ ನಾಪತ್ತೆಯಾಗಿದ್ದ ಟ್ರಕ್ ಚಾಲಕ ವಜಾಗೊಂಡಿದ್ದ IAS ಅಧಿಕಾರಿ ಪೂಜಾ ಖೇಡ್ಕರ್ ಮನೆಯಲ್ಲಿ ಪತ್ತೆ!
