Parenting Hacks: ಮನೆಯಲ್ಲಿ ಮಕ್ಕಳಿದ್ದರೆ ನಿಮಗೂ ಈ ಅನುಭವ ಆಗಿರುತ್ತದೆ. ಅದೇನಪ್ಪಾ ಅಂದ್ರೆ, ಮಕ್ಕಳನ್ನ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಎದ್ದೇಳಿಸುವಾಗ ಸುತರಾಂ ಏಳೋಕೆ ರೆಡಿ ಇರಲ್ಲ. ಆಗ..
ಇದು ಸೋಶಿಯಲ್ ಮೀಡಿಯಾ ಯುಗ. ಬಹುತೇಕ ಎಲ್ಲರೂ ಬಳಸುವುದು ಇದನ್ನೇ. ಮಕ್ಕಳು ಮತ್ತು ವೃದ್ಧರು ಸಹ ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಎಂದು ಆಕ್ಟಿವ್ ಆಗಿರುವುದನ್ನ ನೋಡಬಹುದು. ಕೆಲವೇ ಜನರು ಮಾತ್ರ ಅದರಿಂದ ದೂರವಿರಬಹುದು ಅಷ್ಟೇ. ನೀವು ಕೂಡ ಸಾಮಾಜಿಕ ಮಾಧ್ಯಮದಲ್ಲಿರುವವರಲ್ಲಿ ಒಬ್ಬರಾಗಿದ್ದರೆ ಈ ಜಗತ್ತಿನಲ್ಲಿ ನಡೆಯುವ ಯಾವುದೇ ವಿಚಿತ್ರ ಅಥವಾ ಅಸಾಮಾನ್ಯ, ಹಾಸ್ಯ, ಮನಕಲುಕುವ ಘಟನೆಯನ್ನ ಒಂದಲ್ಲ ಒಂದು ದಿನ ನೋಡಿರುತ್ತೀರಿ. ಸದ್ಯಕ್ಕೆ ಒಂದು ಗಮನಾರ್ಹವಾದ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ಅದನ್ನ ನೋಡಿದ ನಂತರ ನಿಮಗೆ ನಿಮ್ಮ ಮನೆಯ ಮಕ್ಕಳು ನೆನಪಾದರೆ ಆಶ್ಚರ್ಯವೇನಿಲ್ಲ ಬಿಡಿ.
ಮನೆಯಲ್ಲಿ ಮಕ್ಕಳಿದ್ದರೆ ನಿಮಗೂ ಈ ಅನುಭವ ಆಗಿರುತ್ತದೆ. ಅದೇನಪ್ಪಾ ಅಂದ್ರೆ, ಮಕ್ಕಳನ್ನ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಎದ್ದೇಳಿಸುವಾಗ ಸುತರಾಂ ಏಳೋಕೆ ರೆಡಿ ಇರಲ್ಲ. "ಒಂದೆರೆಡು ನಿಮಿಷ ಖಂಡಿತ ಏಳುತ್ತೇನೆ", "ಇನ್ನು ಟೈಂ ಆಗಿಲ್ಲ", "ನಾನು ಲೇಟಾಗಿ ಮಲಗಿದ್ದೇ ಗೊತ್ತಾ"?, "ಇವತ್ತು ನನಗೇನು ಕೆಲಸ ಇಲ್ಲ"..ಹೀಗೆ ಮಕ್ಕಳು ಕೊಡುವ ಕಾರಣ ಒಂದೆರಡಲ್ಲ. ನಮ್ಮ ತಂದೆ-ತಾಯಂದಿರು ಕೂಡ ಏನು ಕಡಿಮೆ ಇಲ್ಲ. ಕಾಲಕ್ಕೆ ತಕ್ಕಂತೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕೆಲವರು ಮಕ್ಕಳಿಗೆ ನಿಧಾನವಾಗಿ ತಣ್ಣೀರು ಎರಚಿ ಎಬ್ಬಿರಿಸಿದರೆ, ಮತ್ತೆ ಕೆಲವರು ಜೋರಾಗಿ ಸಾಂಗ್ ಹಾಕೋದು, ಜಾಗಟೆ ಬಾರಿಸುವುದು, ಗಂಟೆ ಬಾರಿಸುವುದು, ಲೈಟ್ ಆನ್ ಆಂಡ್ ಆಫ್ ಮಾಡುವುದು ಮಾಡುತ್ತಾರೆ.
ಕೆಲವು ಮನೆಯಲ್ಲಿಯಂತೂ ಮಕ್ಕಳನ್ನ ಬೆಳಗಿನ ಜಾವ ಎಬ್ಬಿರಿಸುವುದು ದೊಡ್ಡ ಕಾಯಕವೇ ಆಗಿರುತ್ತದೆ. ಸರಿಯಾಗಿ ಸಮಯ ನೋಡಿಕೊಂಡು ಅವರು ಏಳುವುದನ್ನ ನೋಡುತ್ತಲೇ ಇರುತ್ತಾರೆ. ಅವರು ದೊಡ್ಡವರಾಗಿದ್ದರೆ ಕಥೆ ಮುಗಿದೇ ಹೋಯ್ತು. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂಬುದು ಬಹುಶಃ ನಿಮಗೆ ಶೀರ್ಷಿಕೆ ನೋಡಿಯೇ ತಿಳಿದಿರುತ್ತದೆ ಅಥವಾ ಈ ವಿಡಿಯೋ ನೋಡಿದ್ಮೇಲೆ ನಮ್ಮ ಮಕ್ಕಳೇ ಬೆಟರ್ ಬಿಡ್ರಿ ಅಂದುಕೊಂಡರೂ ಆಶ್ಚರ್ಯವೇನಿಲ್ಲ. ಹಾಗಾದ್ರೆ ಈ ವೈರಲ್ ವಿಡಿಯೋದಲ್ಲಿ ಏನಿದೆ ನೀವು ಒಮ್ಮೆ ನೋಡಿ..
ವೈರಲ್ ವಿಡಿಯೋದಲ್ಲಿ ಏನಿದೆ?
ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬ್ಯಾಂಡ್ ಸದಸ್ಯರು ಮನೆಯ ಮೆಟ್ಟಿಲುಗಳನ್ನು ಹತ್ತುತ್ತಿರುವುದು ಕಂಡುಬರುತ್ತದೆ. ವಿಡಿಯೋ ಮಾಡುತ್ತಿರುವ ಮಹಿಳೆ ಅವರಿಗೆ ಈಗ ಪ್ಲೇ ಮಾಡಬೇಡಿ ಎಂದು ಹೇಳುತ್ತಾಳೆ. ಇದಾದ ನಂತರ, ಮಹಿಳೆ ಅವರನ್ನು ತನ್ನ ಮಕ್ಕಳು ಮಲಗಿರುವ ಕೋಣೆಗೆ ಕರೆದೊಯ್ಯುತ್ತಾಳೆ. ಈಗ ಕೋಣೆಗೆ ಪ್ರವೇಶಿಸಿದ ನಂತರ ಅವರು ಡ್ರಮ್ಸ್ ಇತ್ಯಾದಿಗಳನ್ನು ನುಡಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಮಕ್ಕಳು ಎಚ್ಚರಗೊಳ್ಳುತ್ತಾರೆ. ಆದರೆ ಅವರು ಮತ್ತೆ ಕಂಬಳಿಗಳಿಂದ ತಮ್ಮನ್ನು ಮುಚ್ಚಿಕೊಂಡು ಮಲಗುತ್ತಾರೆ. ಸ್ವಲ್ಪ ಸಮಯದ ನಂತರ ಓರ್ವ ಹುಡುಗಿ ಮಾತ್ರ ಎಚ್ಚರಗೊಳ್ಳುತ್ತಾಳೆ. ಆದರೆ ಇನ್ನೊಬ್ಬಳು ಅದನ್ನು ಲೆಕ್ಕಿಸುವುದೇ ಇಲ್ಲ. ಈಗ ವೈರಲ್ ಆಗಿರುವ ಕಾಮೆಂಟ್ಸ್ ಪ್ರಕಾರ, ಮಕ್ಕಳು ಬೆಳಗ್ಗೆಯಾಗಿದ್ದರೂ ಮಲಗೇ ಇದ್ದರು. ಆದ್ದರಿಂದ ಅವರ ತಾಯಿ ಅವರನ್ನು ಎಬ್ಬಿಸಲು ಬ್ಯಾಂಡ್‌ಗೆ ಕರೆ ಮಾಡಿದರು.
ಬಳಕೆದಾರರ ಕಾಮೆಂಟ್ಸ್
ನೀವು ಈಗಷ್ಟೇ ನೋಡಿದ ವಿಡಿಯೋವನ್ನು ಘಂಟಾ ಎಂಬ ಖಾತೆಯಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಶೀರ್ಷಿಕೆ 'ವರ್ಷದ ತಾಯಿ' ಎಂದು ಬರೆಯಲಾಗಿದೆ. ಈ ಸುದ್ದಿ ಬರೆಯುವವರೆಗೆ ಸುಮಾರು 10 ಸಾವಿರ ಜನರು ವಿಡಿಯೋ ಇಷ್ಟಪಟ್ಟಿದ್ದಾರೆ. ವಿಡಿಯೋವನ್ನು ನೋಡಿದ ನಂತರ ಜನರು "ಅಮ್ಮ ಡೇಂಜರ್", "ಸೋಮಾರಿಗಳೇ ಎಚ್ಚರಗೊಳ್ಳಿ, ಬೆಳಗಾಯ್ತು, ಅದು ತುಂಬಾ ಶಬ್ದ ಮಾಡುತ್ತಿದೆ", "ವಾಹ್, ಇದು ಏನೋ", "ಸಹೋದರ, ನಿಮ್ಮ ಅಜ್ಜಿಯರ ಬಗ್ಗೆ ಯೋಚಿಸಿ", "ಕಲಿಯುಗದ ಕುಂಭಕರ್ಣ" ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ