ಜಿಮ್ ತರಬೇತುದಾರನು ಯುವತಿಗೆ ಬಹಳ ವಿಶಿಷ್ಟ ರೀತಿಯಲ್ಲಿ ಪಾಠ ಕಲಿಸುವುದನ್ನು ಕಾಣಬಹುದು. ಇದರ ನಂತರ ಆಕೆ ಏನ್ಮಾಡ್ತಾಳೆ ಮುಂದೆ ನೋಡಿ...

ಈಗೀಗ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಇದು ಯಾವಾಗಲೋ ಒಮ್ಮೆ ಮಾತ್ರ ಮಾಡುವ ಕೆಲಸವಲ್ಲ, ಪ್ರತಿದಿನ ನಿಗಾ ಇಡಬೇಕು. ಇದಕ್ಕೆ ಸಮರ್ಪಣೆ ಮತ್ತು ಶಿಸ್ತು ಬೇಕು. ಹಾಗಾಗಿಯೇ ಇದು ಎಲ್ಲರಿಗೂ ಸುಲಭದ ಕೆಲಸವಲ್ಲ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಉತ್ತಮ ಆರೋಗ್ಯಕ್ಕಾಗಿ ಬಹಳ ಉತ್ಸಾಹದಿಂದ ಜಿಮ್‌ಗೆ ಹೋಗಲು ಪ್ರಾರಂಭಿಸಿದ್ದಾರೆ. ಹಾಗೆ ಹೋಗುವ ಕೆಲವು ಮಂದಿ ಕೆಲವೇ ದಿನಗಳಲ್ಲಿ ನಿರಾಶರಾಗುತ್ತಾರೆ ಮತ್ತು ಧೈರ್ಯ ಕಳೆದುಕೊಳ್ಳುತ್ತಾರೆ.

ಮತ್ತೆ ಕೆಲವರು ಹವ್ಯಾಸಕ್ಕಾಗಿ ಮಾತ್ರ ಜಿಮ್‌ಗೆ ಹೋಗುತ್ತಾರೆ, ವ್ಯಾಯಾಮದ ಬಗ್ಗೆ ಒಂಚೂರು ಗಂಭೀರವಾಗಿರುವುದಿಲ್ಲ. ಅಂತಹ ಜನರಿಗೆ, ಜಿಮ್ ತರಬೇತುದಾರರು ಕೆಲವೊಮ್ಮೆ ವಿಶಿಷ್ಟ ತಂತ್ರಗಳನ್ನು ಅಳವಡಿಸಿಕೊಡುತ್ತಾರೆ. ಇದರಿಂದ ವ್ಯಾಯಾಮ ಮಾಡುವ ವ್ಯಕ್ತಿಯು ಪ್ರೇರಣೆ ಪಡೆಯಬಹುದು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಒರ್ವ ಯುವತಿ ಮೊದಲಿಗೆ ತನ್ನ ಫೋನ್ ಕೊಟ್ಟು ಜಿಮ್ ತರಬೇತುದಾರರಿಗೆ ಸಹಾಯ ಮಾಡುವಂತೆ ಕೇಳುತ್ತಾಳೆ, ಜಿಮ್ ತರಬೇತುದಾರನು ಯುವತಿಗೆ ಬಹಳ ವಿಶಿಷ್ಟ ರೀತಿಯಲ್ಲಿ ಪಾಠ ಕಲಿಸುವುದನ್ನು ಕಾಣಬಹುದು. ಇದರ ನಂತರ ಆಕೆ ಏನ್ಮಾಡ್ತಾಳೆ ಮುಂದೆ ನೋಡಿ...

ವಿಡಿಯೋದಲ್ಲಿ ಏನಿದೆ?
ಇಂದು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ವಿಡಿಯೋಗಳನ್ನ ಶೇರ್ ಮಾಡಲಾಗುತ್ತೆ. ಆದರೆ ಕೆಲವು ವಿಡಿಯೋಗಳು ಮಾತ್ರ ಜನರ ಹೃದಯ ತಟ್ಟುತ್ತವೆ, ಕೊನೆಗೆ ವೈರಲ್ ಆಗುತ್ತವೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ ಅಂತೀರಾ..

ಮೊದಲಿಗೆ ಯುವತಿ ಜಿಮ್‌ನಲ್ಲಿ ಫೋನ್‌ನೊಂದಿಗೆ ಪುಲ್‌ಅಪ್‌ಗಳ ಮುಂದೆ ನಿಂತಿರುವುದನ್ನು ನಾವು ನೋಡುತ್ತೇವೆ. ಜಿಮ್ ತರಬೇತುದಾರ ಬಂದಾಗ, ಅವಳು ಅವನಿಗೆ ಫೋನ್ ಕೊಟ್ಟು ಸಹಾಯ ಮಾಡಲು ಕೇಳುತ್ತಾಳೆ. ನಂತರ ತರಬೇತುದಾರ ಅವಳ ಫೋನ್ ತೆಗೆದುಕೊಂಡು, ಜಿಮ್ ಸಾಧನವನ್ನು ಎತ್ತಿಕೊಳ್ಳಲು ಹೇಳುತ್ತಾನೆ. ಯುವತಿ ಫೋನ್ ಕೊಟ್ಟು ತೂಕವನ್ನು ಎತ್ತಲು ಪ್ರಾರಂಭಿಸಬೇಕು..ಆಗ ತರಬೇತುದಾರ ಆ ಫೋನ್ ಅನ್ನು ಆ ತೂಕದ ಮಷಿನ್ ಕೆಳಗೆ ಇಡುತ್ತಾನೆ.

ಆಗ ಯುವತಿ ಸಿಕ್ಕಿಹಾಕಿಕೊಳ್ಳುತ್ತಾಳೆ. ಅವಳು ಒಂದೇ ಬಾರಿಗೆ ಭಾರವನ್ನು ಬಿಡಲು ಸಾಧ್ಯವಿಲ್ಲ. ಏಕೆಂದರೆ ಅವಳ ಫೋನ್ ಮುರಿದುಹೋಗಬಹುದು. ಇದನ್ನು ತಿಳಿದ ಯುವತಿ ತರಬೇತುದಾರನ ಮುಂದೆ ಬೇಡಿಕೊಳ್ಳಲು ಪ್ರಾರಂಭಿಸುತ್ತಾಳೆ, "ಸರ್ ಸರ್, ಇರಲಿ ಸರ್, ಅದು ಮುರಿದು ಹೋಗುತ್ತದೆ" ಎನ್ನುತ್ತಾಳೆ. ಇದೇ ಸಮಯದಲ್ಲಿ ಜಿಮ್ ತರಬೇತುದಾರರು ಸ್ಟ್ರಿಕ್ಟ್ ಆಗಿ ಇರುವುದನ್ನ ಕಾಣಬಹುದು, ಅವರ ಬೋಧನಾ ತಂತ್ರ ಅನೇಕ ಜನರಿಗೆ ಹಿಡಿಸಿದೆ. ಮತ್ತೆ ಕೆಲವರಿಗೆ ನಗು ತರಿಸಿದೆ, ಸಿಟ್ಟೂ ಬರಿಸಿದೆ. ವಿಡಿಯೋಗೆ "ಹತಾಶೆಗೊಂಡ ಜಿಮ್ ತರಬೇತುದಾರ" ಎಂದು ಕ್ಯಾಪ್ಷನ್ ಸಹ ಕೊಡಲಾಗಿದೆ.

ವಿಡಿಯೋವನ್ನ ಇಶಿತಾ ಸೇಥಿ ಅವರು ತಮ್ಮ @eshitaasethi ಖಾತೆಯಿಂದ Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು ಇಲ್ಲಿಯವರೆಗೆ 4 ಕೋಟಿ 23 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಶಿತಾ ತಮ್ಮ ತಮ್ಮ ಜಿಮ್ ತರಬೇತುದಾರರನ್ನೂ ವಿಡಿಯೋದಲ್ಲಿ ಟ್ಯಾಗ್ ಮಾಡಲು ಕೇಳಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ಜನರು ನಗುವ ಇಮೋಜಿಗಳೊಂದಿಗೆ ಇಷ್ಟಪಟ್ಟಿದ್ದಾರೆ, ಕೆಲವರು ತರಬೇತುದಾರರ ಹತಾಶೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

View post on Instagram