ಇತ್ತೀಚಿನ ದಿನಗಳಲ್ಲಿ ಬೀಗಗಳು ತೆಳುವಾದ ಪ್ಲಾಸ್ಟಿಕ್ ಪದರ ಹೊಂದಿರುವುದರಿಂದ ಈ ವಿಧಾನವು ವರ್ಕ್ ಔಟ್ ಆಗುತ್ತದೆ ಎಂದು ಕಳ್ಳ ಹೇಳಿದ್ದಾನೆ.
ಇಂದು ಕಳ್ಳರು ಎಷ್ಟು ಬುದ್ಧಿವಂತರಾಗಿದ್ದಾರೆಂದರೆ ಯಾರಿಗೂ ತಿಳಿಯದಷ್ಟು ಹೈಟೆಕ್ ರೀತಿಯಲ್ಲಿ ಕದಿಯುತ್ತಾರೆ. ನಾವೆಲ್ಲಾ ಹೀಗೆ ಗೊಣಗಿಕೊಳ್ಳುತ್ತಾ ಕೂತಿರುವಾಗಲೇ ಕಳ್ಳನೊಬ್ಬ ಕದಿಯುವ ಟೆಕ್ನಿಕ್ ಅನ್ನು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದು, ಸದ್ಯ ಇದು ವೈರಲ್ ಆಗಿದೆ. ಇದನ್ನು ನೋಡಿದ ನಂತರ ನಿಮಗೂ ಒಂದು ಕ್ಷಣ ಏನು ಮಾತನಾಡಬೇಕೆಂದೇ ಗೊತ್ತಾಗಲ್ಲ, ಯಾಕಂದ್ರೆ ನಾವ್ಯಾರೂ ಈ ರೀತಿ ಅವರು ಕದಿಯಬಹುದು ಎಂಬುದರ ಬಗ್ಗೆ ಯೋಚಿಸಿರಲ್ಲ.
ಹೌದು, ವಿಡಿಯೋ ನೋಡಿದಾಗ ಕಳ್ಳನಿಂದ ಕಳ್ಳತನದ ಹೊಸ ವಿಧಾನ ಬೆಳಕಿಗೆ ಬಂದಿದೆ. ಅದರಲ್ಲಿ ಅವನು ನಾವು ಜನರ ಮನೆಗಳಿಂದ ಹೇಗೆ ಕದಿಯುತ್ತೇವೆ ಎಂಬುದನ್ನು ಸ್ವತಃ ಕ್ಯಾಮೆರಾದಲ್ಲಿ ತೋರಿಸಿದ್ದಾನೆ. ಈ ವಿಡಿಯೋ ನೋಡಿದ ನಂತರ ಜನರು ತಮ್ಮ ಮನೆಯ ಸುರಕ್ಷತೆಯ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ಏಕೆಂದರೆ ಅಷ್ಟು ಸುಲಭವಾಗಿ ಮನೆಯ ಬೀಗ ಒಡೆದರೆ ಮನೆ ಬಿಟ್ಟು ಆಚೆ ಹೋಗುವುದಕ್ಕೂ ಹೆದರಬೇಕಾದ ಪರಿಸ್ಥಿತಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಬೀಗಗಳು ತೆಳುವಾದ ಪ್ಲಾಸ್ಟಿಕ್ ಪದರ ಹೊಂದಿರುವುದರಿಂದ ಈ ವಿಧಾನವು ವರ್ಕ್ ಔಟ್ ಆಗುತ್ತದೆ ಎಂದು ಕಳ್ಳ ಹೇಳಿದ್ದಾನೆ. ಬೆಂಕಿ ಹತ್ತಿದಾಗ ಬೀಗ ಕರಗಿ ಸುಲಭವಾಗಿ ಓಪನ್ ಆಗುವುದನ್ನು ನೋಡಬಹುದು. ವಿಡಿಯೋದ ಕುರಿತು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಕಳ್ಳನು ಕೈಯಲ್ಲಿ ಪೆಟ್ರೋಲ್ ಅಥವಾ ಸೀಮೆಎಣ್ಣೆ ತುಂಬಿದ ಸಿರಿಂಜ್ ಹಿಡಿದು ಬೀಗದ ಬಳಿ ಕುಳಿತಿರುವುದು ಕಂಡುಬರುತ್ತದೆ. ಇದಾದ ನಂತರ ಅವನು ಅದನ್ನು ಬೀಗದೊಳಗೆ ಇಟ್ಟು ಲೈಟರ್ ಹಚ್ಚಿದ ತಕ್ಷಣ, ಒಳಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದಾಗಿ ಬೀಗದ ಕೆಲವು ಭಾಗ ಕರಗಲು ಪ್ರಾರಂಭಿಸುತ್ತದೆ ಮತ್ತು ಸ್ವಲ್ಪ ಎಳೆತದಿಂದ ಬೀಗ ತೆರೆಯುತ್ತದೆ.
ಇಲ್ಲಿದೆ ನೋಡಿ ವಿಡಿಯೋ..
ಅಂದಹಾಗೆ ಈ ವಿಡಿಯೋವನ್ನು flirting.lines ಎಂಬ ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ಇದು ಜನ ನೋಡುತ್ತಿದ್ದಂತೆ ವೈರಲ್ ಆಗಿದೆ. ಸದ್ಯ ಜನರು ಇದನ್ನು ನೋಡಿ ಶಾಕ್ ಆಗಿರುವುದಲ್ಲದೆ, ಮಿಶ್ರ ಪ್ರತಿಕ್ರಿಯೆ ಕೊಡುತ್ತಿದ್ದಾರೆ. "ನೀವು ಏನೇ ಹೇಳಿದರೂ ಇದೆಲ್ಲಾ ನೋಡಿದ ನಂತರ ನನಗೆ ಈಗ ತುಂಬಾ ಭಯವಾಗುತ್ತಿದೆ" ಎಂದರೆ, "ಜುಗಾಡ್ ಮೂಲಕ ಕಳ್ಳರು ಇಷ್ಟೊಂದು ಹೈಟೆಕ್ ಆಗುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ" ಎಂದು ಬಳಕೆದಾರರು ತಮ್ಮ ಅನಿಸಿಕೆಯನ್ನು ಹೊರಹಾಕಿದ್ದಾರೆ.
ಅಡುಗೆಮನೆಯಲ್ಲಿ ನೂಡಲ್ಸ್ ತಿಂದ ಹಾವು
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಷಯ ಯಾವ ಟೈಂನಲ್ಲಾದರೂ ವೈರಲ್ ಆಗಬಹುದು. ಇದಕ್ಕೆ ಯಾವುದೇ ಸಮಯದ ಮಿತಿ ಅಥವಾ ಮಾನದಂಡವಿಲ್ಲ. ಜನಕ್ಕೆ ಇಷ್ಟವಾದರೆ ಅಥವಾ ಅವರಿಗೆ ಶಾಕಿಂಗ್ ಎನಿಸುವಂತಹ ಯಾವುದಾದರೂ ಅಂಶ ಕಂಡುಬಂದರೆ ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತವೆ. ಕೆಲವೊಮ್ಮೆ ಫೋಟೋ, ಅದಕ್ಕೆ ಕೊಡುವ ಕ್ಯಾಪ್ಷನ್ ಸಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುವಂತೆ ಮಾಡುತ್ತದೆ. ಇದೀಗ ಅಂತಹುದೆ ವಿಡಿಯೋ ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ಎಂದಿಗೂ ಊಹಿಸದ ಹಾವಿನ ರೂಪವನ್ನು ಕಾಣಬಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಹಾವು ನೂಡಲ್ಸ್ ತಿನ್ನುವುದನ್ನು ಕಾಣಬಹುದು. ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಮೇಲೆ ಬಾಣಲೆ ಇದೆ. ಬಾಣಲೆಯಲ್ಲಿ ಬೇಯಿಸಿದ ನೂಡಲ್ಸ್ ಇಡಲಾಗಿದೆ. ಆದರೆ ಈ ಹಾವು ಸಾಮಾನ್ಯ ಹಾವಲ್ಲ. ಏಕೆಂದರೆ ಇದು ನೂಡಲ್ಸ್ ತಿನ್ನಲು ಇಷ್ಟಪಡುತ್ತದೆ. ಹೌದು, ಈ ಹಾವು ಬುಸ್ ಬುಸ್ ಶಬ್ದ ಮಾಡುವ ಮೂಲಕ ನೂಡಲ್ಸ್ ತಿನ್ನುವುದನ್ನು ಕಾಣಬಹುದು.