Secretly Taking Money: ಗಂಡನ ಜೇಬಿನಿಂದ ಹಣವನ್ನು ತೆಗೆದುಕೊಳ್ಳುವಾಗ ಒಂದು ವೇಳೆ ಸಿಕ್ಕಿಬಿದ್ದರೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಆ ಮಹಿಳೆ ತಿಳಿಸಿದ್ದಾರೆ.

ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಅವು ತುಂಬಾ ತಮಾಷೆಯಾಗಿರುತ್ತವೆ. ಅಂತಹ ಒಂದು ವಿಡಿಯೋ ಇತ್ತೀಚೆಗೆ ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ಮಹಿಳೆ "ಗಂಡನ ಜೇಬಿನಿಂದ ದುಡ್ಡನ್ನು ಹೇಗೆ ಎತ್ತಿಕೊಳ್ಳುವುದು"?. ಎಂಬುದನ್ನು ಹಾಸ್ಯಮಯ ರೀತಿಯಲ್ಲಿ ಹೇಳಿದ್ದಾರೆ. ಇದಲ್ಲದೆ, ಗಂಡನ ಜೇಬಿನಿಂದ ಹಣವನ್ನು ತೆಗೆದುಕೊಳ್ಳುವಾಗ ಒಂದು ವೇಳೆ ಸಿಕ್ಕಿಬಿದ್ದರೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆಯು ವೈವಾಹಿಕ ಜೀವನದಲ್ಲಿ ಗಂಡನ ಜೇಬು ಹೆಚ್ಚಾಗಿ ಹೆಂಡತಿಯರಿಗೆ ಒಂದು ನಿಧಿಯಾಗಿರುತ್ತದೆ ಎಂದು ಹಾಸ್ಯಮಯವಾಗಿ ವಿವರಿಸಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ಸಣ್ಣ ಖರ್ಚುಗಳಿಗಾಗಿ ಅಥವಾ ಅಗತ್ಯವಿದ್ದಾಗ ತಮ್ಮ ಕೈಗಳನ್ನು ಇಡುವುದೇ ಗಂಡನ ಜೇಬಿನಲ್ಲಿ. ಆದರೆ ಅವರು ಸಿಕ್ಕಿಬಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಿಕ್ಕಿಬಿದ್ದಾಗ ತಕ್ಷಣವೇ ನಾಟಕ ಮಾಡಿ ವಾತಾವರಣವನ್ನು ಹೇಗೆ ತಿಳಿಯಾಗಿಸಬಹುದು ಎಂಬುದನ್ನು ವಿವರಿಸಿದ್ದಾರೆ.

ವಿಡಿಯೋದ ಆರಂಭದಲ್ಲಿ ಆ ಮಹಿಳೆ "ಒಬ್ಬ ಸಹೋದರಿ, ನಾನು ಅವರ ಜೇಬಿನಿಂದ ಹಣ ತೆಗೆದ ತಕ್ಷಣ ತಿಳಿಯುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ" ಹಾಗಾಗಿ ಈ ಕಾಮೆಂಟ್ ಅನ್ನು ಉಲ್ಲೇಖಿಸಿ ಹೇಳುವುದಾದರೆ ಎನ್ನುತ್ತಾ..ನಗುತ್ತಾ.. ಗಂಡಂದಿರ ಈ ಅಭ್ಯಾಸ ಸಾಮಾನ್ಯ ಎಂದು ಹೇಳುತ್ತಾರೆ. ಜೊತೆಗೆ ತಮಾಷೆಯಾಗಿ ಪರಿಹಾರವನ್ನೂ ನೀಡಿದ್ದಾರೆ. ಗಂಡನ ಕೈಲಿ ಸಿಕ್ಕಿ ಬಿದ್ದರೆ ತಕ್ಷಣ ಮುಗ್ಧವಾಗಿ ವರ್ತಿಸಲು ಪ್ರಾರಂಭಿಸಿ ಎಂದಿದ್ದಾರೆ.

ಗಂಡ, "ನಾನೇ ಇಲ್ಲಿ ಹಣ ಇಟ್ಟಿದ್ದೆ" ಎಂದು ಹೇಳಿದ ತಕ್ಷಣ, ಅದು ಹೇಗೆ ಕಾಣೆಯಾಯ್ತು? ಎಂದು ಆ ಸಮಯದಲ್ಲಿ ನೀವು ಶಾಕ್ ಆಗಿ, ಆಶ್ಚರ್ಯದ ರೀತಿಯಲ್ಲಿ ಕೇಳಬೇಕು. ನಂತರ ನೀವು ನಿಜ ಹೇಳಬೇಕು. ಅದು ನನ್ನ ಹಣ ಎಂದು ನಾನು ಭಾವಿಸಿದೆ ಅಥವಾ ನಿಮ್ಮ ಹಣ ನಮ್ಮದು ಎಂದು ನೀವು ತಮಾಷೆಯಾಗಿ ಹೇಳಬಹುದು. ಬಿಡಿ, ಈಗ ಮನೆಯಲ್ಲಿ ದುಡ್ಡನ್ನ ಯಾರು ಇಡುತ್ತಾರೆ" ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೋವನ್ನು ಇನ್‌ಸ್ಟಾದಲ್ಲಿ ಕಾಂಚನ್‌ಶರ್ಮರಂಜನ್ ಎಂಬ ಖಾತೆಯಿಂದ ಶೇರ್ ಮಾಡಲಾಗಿದ್ದು, ಇದನ್ನು ಸಾವಿರಾರು ಜನರು ನೋಡಿ ಇಷ್ಟಪಟ್ಟಿದ್ದಾರೆ.

View post on Instagram

ಮಹಿಳೆಯ ಕೊರಳಲ್ಲಿ ಇನ್ನರ್‌ವೇರ್‌ ಬ್ಯಾಗ್

ಇಂತಹುದೇ ತಮಾಷೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್ ಬಳಕೆದಾರರಾದ ರಾಧಿಕಾರಿಯಾ ಕುಮಾವತ್ 5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಅವರು ಆಗಾಗ್ಗೆ ತಮಾಷೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಅವರು ಇನ್ನರ್‌ವೇರ್‌ನಿಂದ ಮಾಡಿದ ಬ್ಯಾಗ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ಬ್ಯಾಗ್ ಪುರುಷರ ಒಳ ಉಡುಪುಗಳಿಂದ ಮಾಡಲ್ಪಟ್ಟಿರುವುದರಿಂದ ವಿಶಿಷ್ಟವಾಗಿದೆ. ಇದು ಡಾಲರ್ ಕಂಪನಿಯ ಒಳ ಉಡುಪು, ಇದನ್ನು ಚೀಲವಾಗಿ ಅಂದರೆ ಬ್ಯಾಗ್ ಆಗಿ ಮಾಡಲಾಗಿದೆ. ಅದನ್ನು ದಾರದಿಂದ ಹೊಲಿಯುವ ಮೂಲಕ ಕುತ್ತಿಗೆಗೆ ನೇತು ಹಾಕಿಕೊಳ್ಳಲಾಗಿದೆ.

ಬ್ಯಾಗ್ ಅಗಿ ಮಾರ್ಪಟ್ಟ ಒಳ ಉಡುಪು

ಈ ಮೊದಲೇ ಹೇಳಿದ ಹಾಗೆ ಕಂಟೆಂಟ್ ಕ್ರಿಯೇಟರ್ ರಾಧಿಕಾ ತಮಾಷೆಯ ವಿಡಿಯೋವನ್ನ ಪೋಸ್ಟ್ ಮಾಡುತ್ತಾರೆ. ಅವರು ಈ ಒಳ ಉಡುಪುಗಳನ್ನು ಕೇವಲ ವಿಡಿಯೋ ಮಾಡುವ ಉದ್ದೇಶಕ್ಕಾಗಿ ತಯಾರಿಸಿದ್ದಾರೆಂದು ತೋರುತ್ತದೆ. ಬಹಳ ಸಂತೋಷದಿಂದ ತರಕಾರಿಗಳನ್ನು ಖರೀದಿಸಿ ನಂತರ ಅವುಗಳನ್ನು ತಮ್ಮ ಚೀಲದಲ್ಲಿ ಇಡುತ್ತಿದ್ದಾರೆ. ತರಕಾರಿ ಮಾರುವವರು ತರಕಾರಿಗಳನ್ನು ತೂಕದ ತಟ್ಟೆಯಿಂದ ನೇರವಾಗಿ ಅವರ ಚೀಲಕ್ಕೆ ಹಾಕುತ್ತಿದ್ದಾರೆ. ರಾಧಿಕಾ ಆಗಾಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಈ ರೀತಿ ತಮಾಷೆಯ ವಿಡಿಯೋ ಮಾಡುತ್ತಾರೆ.

ಇಲ್ಲಿದೆ ನೋಡಿ ವಿಡಿಯೋ 

View post on Instagram