Viral Video Explained: ಜನಕ್ಕೆ ಇಷ್ಟವಾದರೆ ಅಥವಾ ಅವರಿಗೆ ಶಾಕಿಂಗ್ ಎನಿಸುವಂತಹ ಯಾವುದಾದರೂ ಅಂಶ ಕಂಡುಬಂದರೆ ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತವೆ. ಇತ್ತೀಚಿನ ದಿನಗಳಲ್ಲಿ ಹಾವಿನ ತಮಾಷೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Viral video: ಅನೇಕ ರೀತಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಈ ವಿಡಿಯೋಗಳಲ್ಲಿ ಕೆಲವು ತುಂಬಾ ತಮಾಷೆಯಾಗಿರುತ್ತವೆ. ಇನ್ನು ಕೆಲವು ತುಂಬಾ ಭಯಾನಕವಾಗಿರುತ್ತವೆ. ವಿಶೇಷವಾಗಿ ಪ್ರಾಣಿ, ಪಕ್ಷಿಗಳ ವಿಡಿಯೋಗಳು ಬಳಕೆದಾರರಿಗೆ ಇಷ್ಟವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹಾವಿನ ತಮಾಷೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಹಾವೊಂದು ಪುಂಗಿ ನಾದಕ್ಕೆ ನೃತ್ಯ ಮಾಡುವುದನ್ನು ಕಾಣಬಹುದು. ಹಾವಿನ ನೃತ್ಯವನ್ನು ನೋಡಿದ ನಂತರ ನೀವು ಕೂಡ ನಗುತ್ತೀರಿ.
ಸಂತೋಷದಿಂದ ನೃತ್ಯ ಮಾಡಿದ ಹಾವು
ವೈರಲ್ ಆಗಿರುವ ವಿಡಿಯೋದಲ್ಲಿ, ಮೊದಲು ಹಾವಾಡಿಗನ ಪುಂಗಿ ನಾದಕ್ಕೆ ಹಾವು ನೃತ್ಯ ಮಾಡುವುದನ್ನು ಕಾಣಬಹುದು. ಇದಾದ ನಂತರ, ಒಬ್ಬ ವ್ಯಕ್ತಿ ಅದೇ ವಿಡಿಯೋವನ್ನು ಮತ್ತೊಂದು ಹಾವಿಗೆ ತೋರಿಸಿ ಹೀಗೆ ನೃತ್ಯ ಮಾಡಲು ಕೇಳುತ್ತಾನೆ. ಇದಾದ ನಂತರ, ಹಾವು ತನ್ನ ನಾಲಿಗೆಯನ್ನು ಹೊರತೆಗೆದು ಸಂತೋಷದಿಂದ ನೃತ್ಯ ಮಾಡುತ್ತದೆ ಮತ್ತು ಆ ವ್ಯಕ್ತಿಯೂ ಪುಂಗಿ ನುಡಿಸುವ ಹಾವಾಡಿಗನಂತೆ ವರ್ತಿಸುತ್ತಾನೆ.
ಜನ್ರಿಗೆ ಇಷ್ಟ ಆಯ್ತು ವಿಡಿಯೋ
ಈ ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾ ಇಷ್ಟಪಟ್ಟಿದ್ದಾರೆ. ಸುಮಾರು 6 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅನೇಕ ಜನರು ಕಾಮೆಂಟ್ ಮಾಡಿದ್ದಾರೆ, ಇದರಲ್ಲಿ ಜನರು ಹಾವಿನ ನೃತ್ಯವನ್ನು ಹೊಗಳುತ್ತಿದ್ದಾರೆ. ವಿಡಿಯೋ ಸುಮಾರು 2 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಮಾಡುವ ವ್ಯಕ್ತಿ ಆಗಾಗ್ಗೆ ಅಂತಹ ಹಾವುಗಳೊಂದಿಗೆ ವಿಡಿಯೋ ಮಾಡುತ್ತಲೇ ಇರುತ್ತಾನೆ.
ಇಲ್ಲಿದೆ ನೋಡಿ ವಿಡಿಯೋ
ಅಡುಗೆಮನೆಗೆ ಬಂದು ನೂಡಲ್ಸ್ ತಿಂದ ನಾಗಪ್ಪ
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಷಯ ಯಾವ ಟೈಂನಲ್ಲಾದರೂ ವೈರಲ್ ಆಗಬಹುದು. ಇದಕ್ಕೆ ಯಾವುದೇ ಸಮಯದ ಮಿತಿ ಅಥವಾ ಮಾನದಂಡವಿಲ್ಲ. ಜನಕ್ಕೆ ಇಷ್ಟವಾದರೆ ಅಥವಾ ಅವರಿಗೆ ಶಾಕಿಂಗ್ ಎನಿಸುವಂತಹ ಯಾವುದಾದರೂ ಅಂಶ ಕಂಡುಬಂದರೆ ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತವೆ. ಕೆಲವೊಮ್ಮೆ ಫೋಟೋ, ಅದಕ್ಕೆ ಕೊಡುವ ಕ್ಯಾಪ್ಷನ್ ಸಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುವಂತೆ ಮಾಡುತ್ತದೆ. ಇದೀಗ ಅಂತಹುದೆ ವಿಡಿಯೋ ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ಎಂದಿಗೂ ಊಹಿಸದ ಹಾವಿನ ರೂಪವನ್ನು ಕಾಣಬಹುದು.
ಕೆಲವರು ಹಾವನ್ನು ನೋಡುವುದಿರಲಿ ಹೆಸರು ಕೇಳಿಯೇ ಭಯಪಡುತ್ತಾರೆ. ಏಕೆಂದರೆ ಹಾವು ವಿಷಕಾರಿ ಜೀವಿಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲಿಯೂ ಕಾಳಿಂಗ ಸರ್ಪವನ್ನು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದೆಂದು ಹೇಳಲಾಗಿದೆ. ಆದರೆ ನಾವಿಂದು ಮಾತನಾಡುತ್ತಿರುವ ಹಾವು ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಹೇಗೆ ಅನ್ನೋದು ನಿಮಗಿಗಾಲೇ ಹೆಡ್‌ಲೈನ್ ನೋಡಿಯೇ ಗೊತ್ತಾಗಿರುತ್ತದೆ.
ಹೌದು, ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಹಾವು ನೂಡಲ್ಸ್ ತಿನ್ನುವುದನ್ನು ಕಾಣಬಹುದು. ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಮೇಲೆ ಬಾಣಲೆ ಇದೆ. ಬಾಣಲೆಯಲ್ಲಿ ಬೇಯಿಸಿದ ನೂಡಲ್ಸ್ ಇಡಲಾಗಿದೆ. ಆದರೆ ಈ ಹಾವು ಸಾಮಾನ್ಯ ಹಾವಲ್ಲ. ಏಕೆಂದರೆ ಇದು ನೂಡಲ್ಸ್ ತಿನ್ನಲು ಇಷ್ಟಪಡುತ್ತದೆ. ಹೌದು, ಈ ಹಾವು ಬುಸ್ ಬುಸ್ ಶಬ್ದ ಮಾಡುವ ಮೂಲಕ ನೂಡಲ್ಸ್ ತಿನ್ನುವುದನ್ನು ಕಾಣಬಹುದು.
ವಿಡಿಯೋ ನೋಡಿ ಸರ್‌ಪ್ರೈಸ್ ಆದ ಜನರು
ಈ ವಿಡಿಯೋ ನೋಡುತ್ತಿರುವ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಏಕೆಂದರೆ ಕಚ್ಚುವ ಈ ಜೀವಿ ಹೇಗೆ ಇಷ್ಟೊಂದು ಶಾಂತಿಯುತವಾಗಿ ನೂಡಲ್ಸ್ ತಿನ್ನುತ್ತಿದೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಕೆಲವರು ಇದು ಹಿಂದಿನ ಜನ್ಮದಲ್ಲಿ ಚೈನೀಸ್ ಆಗಿತ್ತೇನೋ ಎಂದು ಹೇಳುತ್ತಿದ್ದಾರೆ. ಅಂದಹಾಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagramನಲ್ಲಿ ayub_rider28_official.follow ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ಅಕೌಂಟ್ ಅರ್ಷದ್ ಅಲಿ ಎಂಬುವವರ ಹೆಸರಿನಲ್ಲಿದೆ.