ವೈರಲ್ ಆಗಿರುವ ವಿಡಿಯೋದಲ್ಲಿ ದೊಡ್ಡ ವೇದಿಕೆಯ ಮೇಲೆ 'ಉಯ್ ಅಮ್ಮ' ಹಾಡಿಗೆ ಯುವತಿಯೊಬ್ಬಳು ಆಕ್ಟಿವ್ ಆಗಿ ನೃತ್ಯ ಮಾಡುವುದನ್ನು ಕಾಣಬಹುದು. ಆದರೆ ಏತನ್ಮಧ್ಯೆ ಯಾರೂ ಊಹಿಸದ ಘಟನೆಯೊಂದು ನಡೆಯುತ್ತದೆ.
ಕಳೆದ ಕೆಲವು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಒಂದು ನೃತ್ಯದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ಜನರು ಆ ಯುವತಿಯ ಬುದ್ಧಿವಂತಿಕೆಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಅವರೇಕೆ, ನೀವೂ ಈ ವಿಡಿಯೋ ನೋಡಿದ ನಂತರ ಅದೇ ರೀತಿ ಪ್ರಶಂಸೆ ವ್ಯಕ್ತಪಡಿಸುತ್ತೀರಿ. ವೈರಲ್ ಆಗಿರುವ ವಿಡಿಯೋದಲ್ಲಿ ದೊಡ್ಡ ವೇದಿಕೆಯ ಮೇಲೆ 'ಉಯ್ ಅಮ್ಮ' ಹಾಡಿಗೆ ಯುವತಿಯೊಬ್ಬಳು ಆಕ್ಟಿವ್ ಆಗಿ ನೃತ್ಯ ಮಾಡುವುದನ್ನು ಕಾಣಬಹುದು. ಆದರೆ ಏತನ್ಮಧ್ಯೆ ಯಾರೂ ಊಹಿಸದ ಘಟನೆಯೊಂದು ನಡೆಯುತ್ತದೆ.
ಹೌದು, ಯುವತಿ ನೃತ್ಯ ಮಾಡುವಾಗ ಸ್ಕರ್ಟ್ ಇದಕ್ಕಿದ್ದಂತೆ ಬಿಚ್ಚಿ ಹೋಗುತ್ತದೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಹುಡುಗಿಯರು ನಾಚಿ ಅರ್ಧಕ್ಕೆ ನೃತ್ಯ ನಿಲ್ಲಿಸುವುದುಂಟು ಅಥವಾ ವೇದಿಕೆಯ ಹಿಂಭಾಗಕ್ಕೆ ಓಡುವುದುಂಟು. ಆದರೆ ಅದನ್ನ ಜಾಣ್ಮೆಯಿಂದ ನಿಭಾಯಿಸುವವರು ಕಡಿಮೆಯೇ. ನೀವೀಗ ನೋಡಲು ಹೊರಟಿರುವ ವಿಡಿಯೋದಲ್ಲಿ ಆ ಯುವತಿ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಾಳೆಂದರೆ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ.
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಅದೊಂದು ದೊಡ್ಡ ವೇದಿಕೆ. ಯುವತಿ ಬಹಳ ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾಳೆ. ಆದರೆ ಇದಕ್ಕಿದ್ದಂತೆ ಅವಳ ಸ್ಕರ್ಟ್ ಬಿಚ್ಚುತ್ತದೆ. ಆದರೆ ಅದನ್ನೇ ದೊಡ್ಡ ವಿಷಯವಾಗಿ ಪರಿಗಣಿಸದ ಹುಡುಗಿ ನೃತ್ಯವನ್ನು ಮುಂದುವರಿಸುತ್ತಾಳೆ. ತನ್ನ ಸ್ಕರ್ಟ್ ಕೆಳಗೆ ಬೀಳುವ ಮೊದಲು, ಇನ್ನೊಂದು ಕೈಯಿಂದ ಪಕ್ಕಕ್ಕೆ ಹಿಡಿದಿಟ್ಟುಕೊಂಡು ಹಾಡು ಮುಗಿಯುವ ತನಕ ಡ್ಯಾನ್ಸ್ ಮಾಡುವುದನ್ನ ಕಾಣಬಹುದು. ಕೇವಲ ಒಂದು ಕೈಯಲ್ಲಿ ಸ್ಕರ್ಟ್ ಹಿಡಿದು, ಯುವತಿ ಆ ಲೆವೆಲ್‌ಗೆ ನೃತ್ಯ ಮಾಡುತ್ತಾಳೆ ಎಂಬುದನ್ನು ಬಹುಶಃ ನಾವ್ಯಾರೂ ಉಹಿಸಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಅರ್ಧದಿಂದ ನೀವು ಆ ಹುಡುಗಿಯ ನೃತ್ಯ ನೋಡಿದರೆ ವೀಕ್ಷಕರಿಗೆ ಅಷ್ಟು ಸುಲಭಕ್ಕೆ ಆಕೆ ಏಕೆ ಹಾಗೆ ಮಾಡುತ್ತಿದ್ದಾಳೆ ಎಂಬುದು ಅರ್ಥವಾಗಲ್ಲ.
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋ ನೋಡಿದ ನಂತರ ಜನರು ಆ ಯುವತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಆಕೆಯ ನಮ್ರತೆ ಮತ್ತು ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ. "ಆ ಹುಡುಗಿಯ ಜಾಗದಲ್ಲಿ ಬೇರೆ ಯಾರಾದರೂ ಇದಿದ್ದರೆ ಖಂಡಿತ ಅವರು ಗಾಬರಿಯಾಗಿ ನೃತ್ಯ ಮಾಡುವುದನ್ನು ನಿಲ್ಲಿಸುತ್ತಿದ್ದರು. ಆದರೆ ಆಕೆ ಮುಜುಗರಪಡುವ ಬದಲು, ತನ್ನ ಪ್ರತಿಭೆಯನ್ನು ನಂಬಿ ಎಲ್ಲರ ಹೃದಯವನ್ನು ಗೆದ್ದಿದ್ದಾಳೆ" ಎಂದಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡುವಾಗ "ಸ್ಕರ್ಟ್ ಪಿನ್ ಇದ್ದಕ್ಕಿದ್ದಂತೆ ಸಡಿಲವಾದಾಗ ಓರ್ವ ಹುಡುಗಿ ಹೇಗೆ ಅದನ್ನು ಬುದ್ಧಿವಂತಿಕೆಯಿಂದ ಮ್ಯಾನೇಜ್ ಮಾಡಿದಳು" ಎಂದು ಕ್ಯಾಪ್ಷನ್ ಕೊಡಲಾಗಿದೆ.
ಒಟ್ಟಾರೆಯಾಗಿ ಈಗ ವೈರಲ್ ಆಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ವಾಸ್ತವವಾಗಿ, ಆ ಹುಡುಗಿ ತನ್ನ ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದು ಮತ್ತು ನೃತ್ಯವನ್ನು ಮುಂದುವರಿಸಿರುವುದನ್ನು ನೋಡಬಹುದು. ವಿಶೇಷವಾಗಿ ಈ ವಿಡಿಯೋ ಇನ್ ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜೊತೆಗೆ ಬಳಕೆದಾರರು ಹುಡುಗಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವೈರಲ್ ವಿಡಿಯೋ
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರೊ ಮತ್ತೊಂದು ವಿಡಿಯೋ
ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಬಳಕೆದಾರರಾದ ರಾಧಿಕಾರಿಯಾ ಕುಮಾವತ್ 5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಅವರು ಆಗಾಗ್ಗೆ ಇಂತಹ ತಮಾಷೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಅವರು ಇನ್ನರ್‌ವೇರ್‌ನಿಂದ ಮಾಡಿದ ಬ್ಯಾಗ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ಬ್ಯಾಗ್ ಪುರುಷರ ಒಳ ಉಡುಪುಗಳಿಂದ ಮಾಡಲ್ಪಟ್ಟಿರುವುದರಿಂದ ವಿಶಿಷ್ಟವಾಗಿದೆ. ಇದು ಡಾಲರ್ ಕಂಪನಿಯ ಒಳ ಉಡುಪು, ಇದನ್ನು ಚೀಲವಾಗಿ ಅಂದರೆ ಬ್ಯಾಗ್ ಆಗಿ ಮಾಡಲಾಗಿದೆ. ಅದನ್ನು ದಾರದಿಂದ ಹೊಲಿಯುವ ಮೂಲಕ ಕುತ್ತಿಗೆಗೆ ನೇತು ಹಾಕಿಕೊಳ್ಳಲಾಗಿದೆ.
ಈ ಮೊದಲೇ ಹೇಳಿದ ಹಾಗೆ ಕಂಟೆಂಟ್ ಕ್ರಿಯೇಟರ್ ರಾಧಿಕಾ ತಮಾಷೆಯ ವಿಡಿಯೋವನ್ನ ಪೋಸ್ಟ್ ಮಾಡುತ್ತಾರೆ. ಅವರು ಈ ಒಳ ಉಡುಪುಗಳನ್ನು ಕೇವಲ ವಿಡಿಯೋ ಮಾಡುವ ಉದ್ದೇಶಕ್ಕಾಗಿ ತಯಾರಿಸಿದ್ದಾರೆಂದು ತೋರುತ್ತದೆ. ಬಹಳ ಸಂತೋಷದಿಂದ ತರಕಾರಿಗಳನ್ನು ಖರೀದಿಸಿ ನಂತರ ಅವುಗಳನ್ನು ತಮ್ಮ ಚೀಲದಲ್ಲಿ ಇಡುತ್ತಿದ್ದಾರೆ. ತರಕಾರಿ ಮಾರುವವರು ತರಕಾರಿಗಳನ್ನು ತೂಕದ ತಟ್ಟೆಯಿಂದ ನೇರವಾಗಿ ಅವರ ಚೀಲಕ್ಕೆ ಹಾಕುತ್ತಿದ್ದಾರೆ. ರಾಧಿಕಾ ಆಗಾಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಈ ರೀತಿ ತಮಾಷೆಯ ವಿಡಿಯೋ ಮಾಡುತ್ತಾರೆ.