Lion Viral Video: ಮೊಸಳೆಯ ಹಠಾತ್ ಚಲನೆಯಿಂದ ಸಿಂಹ ಅನಿರೀಕ್ಷಿತವಾಗಿ ನಿಲ್ಲುತ್ತದೆ. ಕೊನೆಗೆ ನೀರಿನಲ್ಲಿ ಮೊಸಳೆ ಇದ್ದರೂ ಸಿಂಹವು ಹಿಂಜರಿಕೆಯಿಲ್ಲದೆ ನೀರಿಗೆ ಹಾರುತ್ತದೆ. ಕಾಡಿನ ರಾಜ ತಾನು ಯಾರಿಗೂ ಹೆದರುವುದಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. 

ನಾವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ವಿಡಿಯೋಗಳನ್ನ ನೋಡುತ್ತೇವೆ. ವಿಶೇಷವಾಗಿ ಪ್ರಾಣಿಗಳ ವಿಡಿಯೋ ಸಿಕ್ಕಾಪಟ್ಟೆ ಫೇಮಸ್ ಆಗ್ತವೆ. ಅಂತಹ ಒಂದು ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದ್ದು, ನಿಮ್ಮ ಎರಡೂ ಕಣ್ಣುಗಳು ಅರಳುವುದರಲ್ಲಿ ಸಂಶಯವೇ ಇಲ್ಲ. ವಿಡಿಯೋದಲ್ಲಿ ಕಾಡಿನ ರಾಜ ಸಿಂಹ ಮತ್ತು ಮೊಸಳೆಯನ್ನು ಚಿತ್ರಿಸಲಾಗಿದೆ. ಇವೆರಡೂ ಪರಸ್ಪರ ಎದುರಾಗಿ ಕಾಣಿಸಿಕೊಳ್ಳುತ್ತವೆ. ನದಿಯಲ್ಲಿ ಮೊಸಳೆ ಸ್ವಲ್ಪ ಸರಿದ ತಕ್ಷಣ ಸಿಂಹವು ಒಂದು ಕ್ಷಣ ದಿಗ್ಭ್ರಮೆಗೊಳ್ಳುತ್ತದೆ. ಆದರೆ ಮುಂದೆ ಏನಾಯಿತು ಎಂಬುದನ್ನ ನೋಡಿದ್ರೆ ನಿಮಗೇ ಸರ್‌ಪ್ರೈಸ್ ಆಗುತ್ತೆ. ಹಾಗಾದ್ರೆ ಈ ವಿಡಿಯೋದಲ್ಲಿ ಇರುವುದೇನು ನೋಡೋಣ…

ವಿಡಿಯೋದಲ್ಲಿ ಏನಿದೆ?

ಈ ವೈರಲ್ ವಿಡಿಯೋದಲ್ಲಿ ನೀರಿನಲ್ಲಿ ಮೊಸಳೆ ಮತ್ತು ದಡದಲ್ಲಿ ಸಿಂಹ ಕಾಣಿಸಿಕೊಂಡಿದೆ. ಸಿಂಹ ಸಮೀಪಿಸುತ್ತಿರುವುದನ್ನು ನೋಡಿ ಮೊಸಳೆ ಒಂದು ಕ್ಷಣ ಚಲಿಸುತ್ತದೆ. ಮೊಸಳೆಯ ಹಠಾತ್ ಚಲನೆಯಿಂದ ಸಿಂಹ ಅನಿರೀಕ್ಷಿತವಾಗಿ ನಿಲ್ಲುತ್ತದೆ. ಕೊನೆಗೆ ನೀರಿನಲ್ಲಿ ಮೊಸಳೆ ಇದ್ದರೂ ಸಿಂಹವು ಹಿಂಜರಿಕೆಯಿಲ್ಲದೆ ನೀರಿಗೆ ಹಾರುತ್ತದೆ. ಕಾಡಿನ ರಾಜ ತಾನು ಯಾರಿಗೂ ಹೆದರುವುದಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ಸಿಂಹ ನೀರಿಗೆ ಇಳಿದ ತಕ್ಷಣ ಒಂದು ಕ್ಷಣ ಮೊಸಳೆ-ಸಿಂಹ ಭೀಕರ ಕಾದಾಟದಲ್ಲಿ ತೊಡಗುತ್ತವೆ ಎಂದು ತೋರುತ್ತದೆ. ಆದರೆ ಅವು ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತವೆ. ಹೌದು. ವಿಡಿಯೋ ನೋಡುತ್ತಿದ್ದವರು ಅವೆರೆಡು ಮುಖಾಮುಖಿಯಾಗುವುದು ಅನಿವಾರ್ಯ ಎಂದು ಭಾವಿಸಿ ಉಸಿರು ಬಿಗಿಹಿಡಿದುಕೊಳ್ಳುತ್ತಾರೆ. ಆದರೆ ಕೆಲವು ಸೆಕೆಂಡುಗಳ ನಂತರ ಮೊಸಳೆ ನಿಧಾನವಾಗಿ ಹಿಂದೆ ಸರಿಯುತ್ತದೆ. ಸಿಂಹ ನಿಂತಲ್ಲೇ ನಿಲ್ಲುತ್ತೆ.

ಇಲ್ಲಿದೆ ನೋಡಿ ವೈರಲ್ ವಿಡಿಯೋ

ಈ ವಿಡಿಯೋವನ್ನ @wildfriends_africa ಎಂಬ ಖಾತೆಯು Instagram ನಲ್ಲಿ ಹಂಚಿಕೊಂಡಿದೆ. ಈ ಲೇಖನ ಬರೆಯುವ ಹೊತ್ತಿಗೆ, ವಿಡಿಯೋವನ್ನು 99,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 3,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವಿಡಿಯೋ ಕಾಣಿಸಿಕೊಂಡಾಗಿನಿಂದ ಸಾವಿರಾರು ಜನರು ಅದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

View post on Instagram

ಈ ಹಿಂದೆಯೂ ವೈರಲ್ ಆಗಿತ್ತು ಸಿಂಹದ ವಿಡಿಯೋ

ಸಿಂಹದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ದೇವಾಲಯದ ಹೊರಗೆ ಸಿಂಹವು ಸುಮ್ಮನೆ ಶಾಂತವಾಗಿ ಕುಳಿತಿರುವುದನ್ನು ನೋಡಿ ಪ್ರತಿಯೊಬ್ಬರೂ ದಂಗಾಗಿದ್ದಾರೆ. ಈ ದೃಶ್ಯ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೀಕ್ಷಣೆ ಮತ್ತು ಕಾಮೆಂಟ್ಸ್ ಗಳಿಸಿದೆ.

ವಿಶ್ವದ ಏಕೈಕ ಸ್ಥಳ
ಈ ವಿಡಿಯೋ ಗುಜರಾತ್‌ನ ಗಿರ್‌ನದ್ದು ಎಂದು ಹೇಳಲಾಗುತ್ತದೆ. ಗಿರ್‌ ಏಷ್ಯನ್ ಸಿಂಹಗಳ ಏಕೈಕ ನೈಸರ್ಗಿಕ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ. ಸಿಂಹಗಳು ಕಾಡಿನಲ್ಲಿ ಮುಕ್ತವಾಗಿ ಸಂಚರಿಸುವ ವಿಶ್ವದ ಏಕೈಕ ಸ್ಥಳ ಗಿರ್ ರಾಷ್ಟ್ರೀಯ ಉದ್ಯಾನವನವಾಗಿದೆ. ಗಿರ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಸಿಂಹವನ್ನು ನೋಡುವುದು ಆಶ್ಚರ್ಯವೇನಲ್ಲ. ಆದರೆ ರಾತ್ರಿಯ ಕತ್ತಲೆಯಲ್ಲಿ ತನ್ನ ವಿಡಿಯೋ ಮಾಡುತ್ತಿರುವ ವ್ಯಕ್ತಿಯನ್ನು ನೋಡಿಯೂ ಸದ್ದಿಲ್ಲದೆ ಕುಳಿತಿರುವುದು ಎಂಥವರನ್ನೂ ದಿಗ್ಭ್ರಮೆಗೊಳಿಸಿದೆ.

ಶಾಂತವಾಗಿ ಕುಳಿತ ಸಿಂಹ
ವಿಡಿಯೋದಲ್ಲಿ ಸಿಂಹವು ದೇವಾಲಯದ ಹೊರಗೆ ತುಂಬಾ ಶಾಂತವಾಗಿ ಕುಳಿತಿದೆ. ಆದರೆ ಅದರ ಕಣ್ಣುಗಳು ಕ್ಯಾಮೆರಾ ಮಾಡುವ ವ್ಯಕ್ತಿಯ ಕಡೆಗೆ ಹೋದ ತಕ್ಷಣ ಅದರ ಮುಖಭಾವದಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು. ಈ 27 ಸೆಕೆಂಡುಗಳ ವೈರಲ್ ದೃಶ್ಯದಲ್ಲಿ ಸಿಂಹವು ತುಂಬಾ ಶಾಂತವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಅದನ್ನು ವೀಕ್ಷಿಸಬಹುದು.

r/indiasocial ನ ರೆಡ್ಡಿಟ್ ಪುಟದಲ್ಲಿ, @UnknownGunman17 ಎಂಬ ಹೆಸರಿನ ಹ್ಯಾಂಡಲ್ 'ಗಿರ್ ದೇವಾಲಯದ ಬಳಿ ಸಿಂಹ' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದೆ. ಕೇವಲ 14 ಗಂಟೆಗಳ ಹಿಂದೆ ಹಂಚಿಕೊಂಡ ಈ ದೃಶ್ಯವು ಇಲ್ಲಿಯವರೆಗೆ ರೆಡ್ಡಿಟ್‌ನಲ್ಲಿ ಕನಿಷ್ಠ 3 ಸಾವಿರ ಅಪ್‌ಗಳನ್ನು ಮತ್ತು 200 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.

ಸಿಂಹದ ಈ ದೃಶ್ಯಗಳನ್ನು ನೋಡಿದ ನಂತರ, ರೆಡ್ಡಿಟ್‌ನ ಜನರು ಎರಡು ವಿಷಯಗಳನ್ನು ಹೇಳುತ್ತಿದ್ದಾರೆ. ಕೆಲವು ಬಳಕೆದಾರರು ವಿಡಿಯೋ ಮಾಡುವ ವ್ಯಕ್ತಿಗೆ ಅಲ್ಲಿಂದ ಓಡಿಹೋಗುವಂತೆ ಸಲಹೆ ನೀಡುತ್ತಿದ್ದರೆ, ಮತ್ತೊಂದೆಡೆ "ಕ್ಯಾಮೆರಾಮನ್ ಪ್ರತಿ ಬಾರಿ ಹೇಗೆ ತಪ್ಪಿಸಿಕೊಳ್ಳುತ್ತಾನೆ"? ಎಂದು ಬಳಕೆದಾರರು ಆಶ್ಚರ್ಯ ಪಡುತ್ತಿದ್ದಾರೆ. ಹಾಗೆಯೇ "ಸಹೋದರ, ಅವನು ನಿನ್ನನ್ನು ದಿಟ್ಟಿಸುತ್ತಿದ್ದಾನೆ. ನೀವು ದೇವಾಲಯದ ಹೊರಗೆ ಇದ್ದೀರಿ, ಒಳಗೆ ಅಲ್ಲ. ಅಲ್ಲಿಂದ ಓಡಿಹೋಗಿ" ಎಂದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ