ಪಂಚಾಂಗ: ಇಂದು ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿದರೆ ಅನುಕೂಲವಾಗುವುದು
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ. ಪಂಚಮಿ ತಿಥಿ, ಮೃಗಶಿರ ನಕ್ಷತ್ರ ಬಹಳ ಪ್ರಶಸ್ತವಾದವುಗಳು. ಮೃಗಶಿರ ನಕ್ಷತ್ರ ಬೇಟೆಗಾರನನ್ನು ಪ್ರತಿನಿಧಿಸುತ್ತದೆ. ಈಶ್ವರ ಕೂಡಾ ಬೇಟೆಗಾರನೇ. ಈ ಕಾಲ ಈಶ್ವರನನ್ನು ಪ್ರತಿನಿಧಿಸುತ್ತಿದೆ. ಈ ದಿನ ಈಶ್ವರನ ಆರಾಧನೆ, ಬಿಲ್ವಾರ್ಚನೆ ಮಾಡಿಸಿದರೆ ಬಹಳ ಅನುಕೂಲವಾಗುವುದು.