ಖಾಸಗಿ ಶಾಲಾ ವೆಹಿಕಲ್ಸ್‌ ಮೇಲೆ RTO ದಾಳಿ: ರೂಲ್ಸ್ ಬ್ರೇಕ್ ಮಾಡಿದ ವಾಹನಗಳು ಸೀಜ್ !

ಶಾಲೆಗೆ ತೆರಳುವ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಸುರಕ್ಷತೆಯೂ ಅಷ್ಟೇ ಮುಖ್ಯ.. ಆದ್ರೆ ಕೆಲವು ಪೋಷಕರು ಸ್ಕೂಲ್ ವ್ಯಾನ್ ಬಾಡಿಗೆ ಹೆಚ್ಚು ಅನ್ನೋ ಕಾರಣಕ್ಕೆ ಖಾಸಗಿ ವಾಹನಗಳ ಮೊರೆ ಹೋಗ್ತಾರೆ. ಆದ್ರೆ ಖಾಸಗಿ ವಾಹನ ಚಾಲಕರು ಮಾತ್ರ ಯಾವುದೇ ಸುರಕ್ಷತೆ ಮಾರ್ಗಸೂಚಿಯನ್ನ ಬಳಸೋದೆ ಇಲ್ಲ. ಇಂಥ ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸ್ತಿದ್ದಾರೆ. 

Bindushree N  | Published: Aug 23, 2023, 12:17 PM IST

ಇತ್ತೀಚೆಗೆ ಖಾಸಗಿ ಶಾಲಾ ವಾಹನ(School vehicles) ಚಾಲಕರ ನಿರ್ಲಕ್ಷ್ಯದ ಬಗ್ಗೆ ದೂರು ಬಂದ ಹಿನ್ನೆಲೆ, ಆರ್‌ಟಿಒ ಅಧಿಕಾರಿಗಳು(RTO Officers) ದಾಳಿ ನಡೆಸಿದ್ದಾರೆ. ಮಕ್ಕಳ ಬಗ್ಗೆ ಜಾಗೃತಿ ವಹಿಸದವರ ವಿರುದ್ಧ ಕಾರ್ಯಾಚರಣೆ ನಡೆಸಿ, ನಿಯಮ ಪಾಲಿಸದ 30ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ರು. ಖಾಸಗಿ ಶಾಲಾ ವಾಹನಗಳಿಗೆ ಮಾರ್ಗಸೂಚಿ ಹೊರಡಿಸಿರೋ ಆರ್‌ಟಿಒ ಅಧಿಕಾರಿಗಳು. ಶಾಲಾ ವಾಹನ ಹಳದಿ ಬಣ್ಣ(Yellow colour)  ಹೊಂದಿರಬೇಕು, ವಾಹನದ ದಾಖಲಾತಿ ಸರಿಯಾಗಿ ಇರಬೇಕು. ಶಾಲಾ ವಾಹನದಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯ, ಶಾಲಾ ವಾಹನಕ್ಕೆ ಜಿಪಿಎಸ್ ಕೂಡ ಅಳವಡಿಸಿರಬೇಕು. ವಾಹನದಲ್ಲಿ ಚಾಲಕನ ಜೊತೆ ಸಿಬ್ಬಂದಿ ಇರಬೇಕು. ಶಾಲಾ ವಾಹನದಲ್ಲಿ ಪ್ರಥಮ ಚಿಕಿತ್ಸೆ ಸಲಕರಣೆ ಕಡ್ಡಾಯವಾಗಿ ಇರಲೇಬೇಕು. ಶಾಲಾ ವಾಹನಕ್ಕೆ ಮಕ್ಕಳನ್ನು ಹೆಚ್ಚುವರಿಯಾಗಿ ತುಂಬುವಂತಿಲ್ಲ, ಶಾಲಾ ವಾಹನದ ಸೀಟ್‌ಗಳನ್ನು ಪರಿವರ್ತಿಸುವಂತಿಲ್ಲ ಎಂದಿದ್ದಾರೆ. ಖಾಸಗಿ ವಾಹನಗಳು ಈ ಯಾವುದೇ ನಿಯಮಾವಳಿ ಪಾಲಿಸದಿರುವುದು ಕಂಡು ಬಂದಿದೆ. ಕೋವಿಡ್ ಸಂಕಷ್ಟದಿಂದ ಖಾಸಗಿ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಎಲ್ಲೋ ಬೋರ್ಡ್ ಪರಿವರ್ತನೆಗೆ ಕಾಲಾವಾಕಾಶ ಬೇಕು ಎಂದು ಕೇಳಿಕೊಳ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಸಿಎಂ ಸಿದ್ದರಾಮಯ್ಯ ಕನಸಿನ ಕ್ಯಾಂಟೀನ್‌ಗೆ ವಿಘ್ನ: ತುಮಕೂರಿನಲ್ಲೇ 4 ಇಂದಿರಾ ಕ್ಯಾಂಟೀನ್ ಸ್ಥಗಿತ