ವಾಸ್ತು ಶಾಸ್ತ್ರದ (Vastu tips) ಪ್ರಕಾರ, ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳು ಇರಬಾರದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲು ಗೇಟ್  ವಾಸ್ತುವಿನ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

ವಾಸ್ತು ಪ್ರಕಾರ (Vastu tips) ಮನೆಯ ಕೋಣೆಗಳು ಸರಿಯಾದ ದಿಕ್ಕಿನಲ್ಲಿರಬೇಕು, ಹಾಗೇ ಮನೆಯ ಮುಖ್ಯದ್ವಾರ ಮತ್ತು ಗೇಟ್‌ ಬಗ್ಗೆ ಕೂಡ ನೀವು ಗಮನ ಹರಿಸದೇ ಇರುವಂತಿಲ್ಲ. ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮನೆಯ ಕಿಟಕಿಗಳು, ಬಾಗಿಲುಗಳು, ಪೂಜಾ ಸ್ಥಳ, ಅಡುಗೆಮನೆ, ಮಲಗುವ ಕೋಣೆ ಮತ್ತು ಸ್ನಾನಗೃಹ ಎಲ್ಲವೂ ಇರುವಂತೆ ಗೇಟಿನ ನಿರ್ವಹಣೆ ಬಗೆಗೆ ಕೂಡ ಕಾಳಜಿ ವಹಿಸಬೇಕು. ಹಾಗಾದರೆ ಮನೆಯ ಗೇಟ್‌ ಬಳಿ, ಅದರ ಮುಂದೆ, ಹಿಂದೆ, ಏನಿರಬೇಕು, ಏನಿರಬಾರದು? ಕೊಂಚ ನೋಡೋಣ ಬನ್ನಿ.

ವಾಸ್ತು ಪ್ರಕಾರ ಕೆಲ ವಸ್ತುಗಳು ಮನೆ ಅಥವಾ ಫ್ಲ್ಯಾಟ್‌ನ ಮುಖ್ಯ ಬಾಗಿಲಿನ ಹೊರಗಿದ್ದರೆ ಅಥವಾ ಎದುರಿಗಿದ್ದರೆ ಅದರ ದುಷ್ಪರಿಣಾಮವು ಮನೆಯ ಸದಸ್ಯರ ಮೇಲೆ ಆಗುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷ ಕಡಿಮೆ ಆಗಿ ಕಷ್ಟಗಳು ಹೆಚ್ಚಾಗುತ್ತದೆ. ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಮನೆಯ ಗೇಟ್​ ಬಳಿ ಕಸದ ಬುಟ್ಟಿ ಇಡಬಾರದು. ನೀವು ಅನಿವಾರ್ಯವಾಗಿ ಸಹ ಮನೆಯ ಗೇಟ್​ ಎದುರಿಗೆ ಕಸದ ಬುಟ್ಟಿ ಇದ್ದರೆ ಲಕ್ಷ್ಮಿಗೆ ಕೋಪ ಬರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ದೊಡ್ಡ ಕಲ್ಲು ಅಥವಾ ಕಂಬ ಇರಬಾರದು ಎನ್ನಲಾಗುತ್ತದೆ. ಇದರಿಂದ ನಿಮ್ಮ ಮನೆಗೆ ಬರುವ ಒಳ್ಳೆಯ ಶಕ್ತಿಗಳಿಗೆ ತಡೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆಗೆ ನಿಮ್ಮ ಮನೆಯ ಮುಂದೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಪಂಪ್ ಅಥವಾ ವಾಷರ್‌ಮನ್ ಅಂಗಡಿ ಇರಬಾರದು. ಇವುಗಳು ನಿಮ್ಮ ಆರ್ಥಿಕ ಸಮಸ್ಯೆಗಳನ್ನ ಹೆಚ್ಚು ಮಾಡುತ್ತದೆ.

ಗ್ಯಾರೇಜ್ ಅಥವಾ ಮೆಕ್ಯಾನಿಕ್‌ ಶಾಪ್‌ ಇರುವ ಕಡೆ ಯಾವುದೇ ಕಾರಣಕ್ಕೂ ನೀವು ಮನೆ ಮಾಡಬಾರದು. ಹಾಗೆಯೇ, ನಿಮ್ಮ ಮನೆಯ ಗೇಟಿನ ಎದುರು ಮೆಕ್ಯಾನಿಕ್‌ ಶಾಪ್‌ ಹಾಗೂ ಗ್ಯಾರೇಜ್​ ಬರಬಾರದು. ಇದರಿಂದ ಸಹ ವಾಸ್ತುದೋಷ ಉಂಟಾಗುತ್ತದೆ. ಅಲ್ಲದೇ, ಮನೆಯಲ್ಲಿ ಯಾವುದೇ ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ. ಇದಲ್ಲದೆ ಮನೆಯ ಸಂತೋಷ ಮತ್ತು ಶಾಂತಿ ಕೂಡ ಭಂಗವಾಗುತ್ತದೆ. ಅಲ್ಲದೇ, ನಿಮ್ಮ ಮನೆಯ ಸದಸ್ಯರ ನಡುವೆ ವೈಮನಸ್ಸು ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಮನೆಯ ಅಲಂಕಾರಕ್ಕಾಗಿ ಮನೆಯ ಹೊರಗಿನ ಮುಖ್ಯ ಬಾಗಿಲಿಗೆ ಅನೇಕ ಬಾರಿ ಬಳ್ಳಿ-ಗಿಡಗಳನ್ನು ಹಾಕುತ್ತೇವೆ, ಅದು ವಾಸ್ತು ಪ್ರಕಾರ ಒಳ್ಳೆಯದಲ್ಲ ಎನ್ನಲಾಗುತ್ತದೆ. ಬಳ್ಳಿಗಳನ್ನ ಹಾಕುವುದರಿಂದ ಮನೆಯಲ್ಲಿ ಅಕಾಲಿಕ ಸಮಸ್ಯೆಗಳು ಉಂಟಾಗಬಹುದು.ಇದಲ್ಲದೆ ಧನಹಾನಿಯಾಗುವ ಸಂಭವವಿದೆ. ಇದಲ್ಲದೆ ಮಾನಸಿಕ ಒತ್ತಡ ಸಹ ಹೆಚ್ಚಾಗುತ್ತದೆ. ಬದಲಾಗಿ ಮುಖ್ಯ ಬಾಗಿಲಿಗೆ ಸ್ಫಟಿಕದ ಚೆಂಡನ್ನು ಹಾಕಿ ಅಥವಾ ಮುಖ್ಯ ಬಾಗಿಲಿಗೆ ಕೆಂಪು ರಿಬ್ಬನ್ ಅನ್ನು ಕಟ್ಟಿದರೆ ಒಳ್ಳೆಯದು.

ಹಳೆಯ ಮತ್ತು ಹಾನಿಗೊಳಗಾದ ಮನೆ ಅಥವಾ ಮನೆಯ ಮುಂಭಾಗದಲ್ಲಿ ನಿಮ್ಮ ಮನೆ ಇದ್ದರೆ, ಅದು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೇ, ಇದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಇದು ನಿಮಗೆ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆಗಳನ್ನ ಉಂಟುಮಾಡುತ್ತದೆ. ಹಾಗೆಯೇ, ಯಾವುದೇ ಕಾರಣಕ್ಕೂ ಮನೆಯ ಗೇಟ್​ಗೆ ಗಣಪತಿಯ ಫೋಟೋ ಹಾಕಬೇಡಿ. ಇದರಿಂದ ಇಲ್ಲಸಲ್ಲದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಅದರ ಜೊತೆಗೆ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹಾಗೆಯೇ ಯಾವ ದೇವರ ಫೋಟೋ ತೂಗುಹಾಕುವುದು ಕೂಡ ಒಳಿತಲ್ಲ. ಫೋಟೋ ಕೂಡ ಅಗತ್ಯವಿಲ್ಲ.