Shrirasthu Shubhamasthu Serial Last Episode: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಮೀರಾ ಕೊನೆಗೂ ಮಾಧವ್‌ನ ಮನೆ ಸೇರುತ್ತಾಳಾ? ಶಾರ್ವರಿಯ ಅಂತ್ಯದ ಜೊತೆ ಸೀರಿಯಲ್‌ ಮುಗಿಯುತ್ತಿದೆಯಾ? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ( Shrirasthu Shubhamasthu Serial ) ಶಾರ್ವರಿಯ ನಿಜ ಬಣ್ಣ ಬಯಲಾಗಿದೆ. ಅವಳ ಕೂಡ ಸಿಕ್ಕಿದ್ದಾಳೆ. ಈಗ ಈ ಸೀರಿಯಲ್‌ ಅಂತ್ಯ ಆಗೋ ಟೈಮ್‌ ಬಂತಾ? ಹೌದು ತುಳಸಿ-ಮಾಧವ್‌ ಕುಟುಂಬ ಒಂದಾಗಿ ತುಂಬ ಚೆನ್ನಾಗಿ ಬದುಕುತ್ತಿದೆ. ಅವಿ-ಪೂರ್ಣಿಮಾಗೆ ಮಗಳು ಕೂಡ ಸಿಕ್ಕಿದ್ದಾಳೆ. ಈಗ ಮೀರಾ ಏನಾದರೂ ಮಾಧವ್‌ ಕುಟುಂಬ ಸೇರಿಕೊಂಡ್ರೆ ಸೀರಿಯಲ್‌ ಅಂತ್ಯ ಆದಂತೆ ಎಂದು ಅನಿಸುತ್ತದೆ.

ನಿಜಕ್ಕೂ ಈ ಸೀರಿಯಲ್‌ ಮುಗಿಯತ್ತಾ?

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಅವಿ-ಪೂರ್ಣಿ ಮಗಳು ಮೀರಾಳನ್ನು ಶಾರ್ವರಿ ಕಿಡ್ನ್ಯಾಪ್‌ ಮಾಡಿದ್ದಳು. ತನ್ನ ಅಕ್ಕ ಸತ್ತು ಹೋಗಿದ್ದಾಳೆ, ಅದಕ್ಕೆ ಮಾಧವನ ಕುಟುಂಬವೇ ಕಾರಣ ಅಂತ ಶಾರ್ವರಿ ನಂಬಿದ್ದಳು. ಈಗ ಅವಳಿಗೆ ತನ್ನ ಅಕ್ಕ ಬದುಕಿದ್ದಾಳೆ ಅಂತ ಅರ್ಥ ಆಗಿದೆ. ಈಗ ಅವಳನ್ನು ಕೂಡ ಅಪಹರಿಸಿದ್ದಳು. ಮಾಧವನ ಜೊತೆ ತನ್ನ ಅಕ್ಕನ ಮದುವೆ ಮಾಡಬೇಕು ಅಂತ ಶಾರ್ವರಿ ನೋಡುತ್ತಿದ್ದಾಳೆ. ಮಾಧವ್‌ ಕುಟುಂಬಕ್ಕೆ ಏನಾದರೂ ಆದರೆ ನಾನು ಸುಮ್ಮನಿರೋದಿಲ್ಲ ಅಂತ ರಾಧಾ ತನ್ನ ತಂಗಿಗೆ ಎಚ್ಚರಿಕೆ ಕೊಟ್ಟಿದ್ದಾಳೆ.

ಈಗ‌ ಯಾವ ಎಪಿಸೋಡ್ ಪ್ರಸಾರ ಆಗ್ತಿದೆ?

ತನ್ನ ಅಕ್ಕ ಸಿಕ್ಕರೂ ಕೂಡ, ನಾನು ಮೀರಾಳನ್ನು ನಿಮಗೆ ಕೊಡೋದಿಲ್ಲ ಅಂತ ಶಾರ್ವರಿ, ಮಾಧವ್‌ ಮನೆಯವರಿಗೆ ಹೇಳಿದ್ದಾಳೆ. “ಮಗಳಿಲ್ಲದೆ ನಾವಿಲ್ಲ, ನಮಗೆ ನಮ್ಮ ಮಗಳು ಬೇಕು” ಅಂತ ಅವಿನಾಶ್‌ ಬೇಡಿಕೊಂಡರೂ ಕೂಡ ಶಾರ್ವರಿ ಮಾತು ಕೇಳ್ತಿಲ್ಲ. ಈ ಧಾರಾವಾಹಿ ಕಥೆ ನೋಡಿದರೆ ಆದಷ್ಟು ಬೇಗ ಕೊನೆಯ ಎಪಿಸೋಡ್‌ ಪ್ರಸಾರ ಆಗಲಿದೆ ಎನ್ನಲಾಗ್ತಿದೆ. ಕಳೆದ ಮೇ ತಿಂಗಳಿನಲ್ಲಿ ಈ ಸೀರಿಯಲ್‌ ಅಂತ್ಯ ಆಗಲಿದೆ ಎನ್ನಲಾಗಿತ್ತು. ಆದರೆ ಅಂತ್ಯ ಕಂಡಿರಲಿಲ್ಲ. ಧಾರಾವಾಹಿ ಅಂತ್ಯ ಆಗುವ ಬಗ್ಗೆ ಈ ಸೀರಿಯಲ್‌ ಕಲಾವಿದರಾಗಲೀ, ವಾಹಿನಿಯಾಗಲಿ ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.

ಈ ಧಾರಾವಾಹಿ ಕಥೆ ಏನಾಗಿತ್ತು?

ಮಾಧವ್‌, ತುಳಸಿ ಇಬ್ಬರೂ ಕೂಡ ಸಂಗಾತಿಗಳನ್ನು ಕಳೆದುಕೊಂಡಿದ್ದರು. ಇವರಿಬ್ಬರ ಮಕ್ಕಳಿಗೂ ಮದುವೆ ಆಗಿವೆ, ಚೆನ್ನಾಗಿ ಬದುಕುತ್ತಿದ್ದಾರೆ. ಈ ವಯಸ್ಸಿನಲ್ಲಿ ಇವರಿಬ್ಬರಿಗೂ ಪರಿಚಯವಾಗಿ, ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ಮದುವೆಯಾದರು. ಈ ಜೋಡಿ ಮದುವೆಯಾಗಿದ್ದು, ಅವರ ಮಕ್ಕಳಿಗೆ ಇಷ್ಟವಿರಲಿಲ್ಲ. ಆಮೇಲೆ ತುಳಸಿ ಗರ್ಭಿಣಿ ಆಗಿ ಮೀರಾಳಿಗೆ ಜನ್ಮ ಕೊಡುತ್ತಾಳೆ. ಅವಿನಾಶ್-ಪೂರ್ಣಿಗೆ ಮಕ್ಕಳಿರೋದಿಲ್ಲ. ಈ ಮಗುವನ್ನು ಪೂರ್ಣಿಗೆ ಕೊಡಲಾಗುತ್ತದೆ. ಈಗ ಶಾರ್ವರಿ, ಮೀರಾಳನ್ನು ಕಿಡ್ನ್ಯಾಪ್‌ ಮಾಡಿದ್ದಾಳೆ. ಕೊನೆಗೂ ಮೀರಾ, ಮಾಧವ್‌ ಮನೆ ಸೇರುತ್ತಾಳಾ? ಶಾರ್ವರಿ ಕೊನೆಗೂ ಜೈಲು ಸೇರುತ್ತಾಳಾ ಎಂದು ಕಾದು ನೋಡಬೇಕಿದೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ತುಳಸಿ - ಸುಧಾರಾಣಿ

ಮಾಧವ್‌ - ಅಜಿತ್‌ ಹಂದೆ

ಶಾರ್ವರಿ - ಸಪ್ನಾ ದೀಕ್ಷಿತ್‌

ಪೂರ್ಣಿ- ಲಾವಣ್ಯಾ ಭಾರದ್ವಾಜ್‌

ರಾಧಾ- ಅರ್ಚನಾ ಉಡುಪ

ಸಮರ್ಥ್-‌ ದರ್ಶಕ್‌ ಗೌಡ

ಸಿರಿ- ಚಂದನಾ ರಾಘವೇಂದ್ರ