ಸ್ನೇಹಿತ್ ಹಾಗೂ ತನಿಷ್ಕಾ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಳೆಯಲ್ಲಿ ಮಿಂದೆದ್ದ ಅವರು, ಶೂಟಿಂಗ್ ಮಾಡುವ ವೇಳೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಿಹರ್ಸೆಲ್ ವಿಡಿಯೋ ಪೋಸ್ಟ್ ಮಾಡಿದ ಸ್ನೇಹಿತ್ ಹೇಳಿದ್ದೇನು? 

ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ಹಾಗೂ ನಟ ಸ್ನೇಹಿತ್ ಗೌಡ ಈಗ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಮಹಾನಟಿಯಲ್ಲಿ ಬ್ಯುಸಿಯಿದ್ದಾರೆ. ಮಹಾನಟಿ ಶೋನ ಸಾಂಗ್ ಶೂಟ್ ರೌಂಡ್ ಮುಗಿದಿದೆ. ತನಿಷ್ಕಾ ಹಾಗೂ ಸ್ನೇಹಿತ್ ಗೌಡ, ಸ್ವಾತಿ ಮುತ್ತಿನ ಮಳೆ ಹನಿಯೆ ಸಾಂಗ್ ಗೆ ರೋಮ್ಯಾಂಟಿಕ್ ಡಾನ್ಸ್ ಮಾಡಿದ್ದಾರೆ. ಈಗಾಗಲೇ ಪ್ರೇಕ್ಷಕರು ಟಿವಿಯಲ್ಲಿ ಈ ಸಾಂಗ್ ನೋಡಿ ಎಂಜಾಯ್ ಮಾಡಿದ್ದಾರೆ. ಸಾಂಗ್ ನಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸ್ನೇಹಿತ್ ಹಾಗೂ ತನಿಷ್ಕಾ, ಶೂಟಿಂಗ್ ಮಾಡುವಾಗ ಹೇಗಿದ್ರು? ಶೂಟಿಂಗ್ ವೇಳೆ ಏನೆಲ್ಲ ಕಷ್ಟವಾಯ್ತು ಎಂಬುದನ್ನು ಸ್ನೇಹಿತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. .

ಮಳೆಯಲ್ಲಿ ಡಾನ್ಸ್ ಮಾಡುವ ವೇಳೆ ಜಾರಿ ಬಿದ್ದ ತನಿಷ್ಕಾ : 

ತನಿಷ್ಕಾ ಹಾಗೂ ಸ್ನೇಹಿತ್ ಮಳೆಯಲ್ಲಿ ಡಾನ್ಸ್ ಮಾಡುವ ವೇಳೆ ಸಾಕಷ್ಟು ಕಸರತ್ತು ಮಾಡಿದ್ದಾರೆ. ಒಂದು ಬಾರಿ ತನಿಷ್ಕಾ ಜಾರಿ ಬಿದ್ರೆ ಇನ್ನೊಮ್ಮೆ ಸ್ನೇಹಿತ್ ಎಡವಿದ್ದಾರೆ. ಇದ್ರ ವಿಡಿಯೋ ಪೋಸ್ಟ್ ಮಾಡಿದ ಸ್ನೇಹಿತ್, ಮಳೆ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಅದುತೆರೆ ಮೇಲೆ ಕಾಣುವಷ್ಟು ರೋಮ್ಯಾಂಟಿಕ್ ಅಲ್ಲ. ಜಾರಿ ಬೀಳೋದು, ಚಳಿ, ನಡುಕ ಎಲ್ಲ ಇಲ್ಲಿರುತ್ತೆ. ಆದ್ರೆ ನಾವು ನಟರು ನಮ್ಮ ಕೆಲಸವನ್ನು ಪ್ರೀತಿಸುವ ಕಾರಣಕ್ಕಾಗಿ ಅದನ್ನು ನೀಡಲು ಪ್ರಯತ್ನಿಸುತ್ತೇವೆ ಅಂತ ಶೀರ್ಷಿಕೆ ಹಾಕಿದ್ದಾರೆ.

ಪುಟ್ಟಕ್ಕನ ಮಕ್ಕಳು ಕಂಠಿಗೆ ಶಿವಣ್ಣ ಸರ್ಪ್ರೈಸ್, ವೇದಿಕೆ ಮೇಲೆ ಬಿಗ್ ಅನೌನ್ಸ್ಮೆಂಟ್

ವಿಡಿಯೋ ನೋಡಿ ಫ್ಯಾನ್ಸ್ ಹೇಳಿದ್ದೇನು? : 

ಸ್ನೇಹಿತ್ ಗೌಡ, ಶೂಟಿಂಗ್ ವಿಡಿಯೋ ನೋಡಿದ ಫ್ಯಾನ್ಸ್, ಮಳೆ ಶೂಟಿಂಗ್ ಕಷ್ಟ ಎಂಬುದನ್ನು ಒಪ್ಕೊಂಡಿದ್ದಾರೆ. ಸ್ನೇಹಿತ್ ಶ್ರಮಕ್ಕೆ ಬೆನ್ನು ತಟ್ಟಿದ್ದಾರೆ. ಆದ್ರೆ ಸ್ನೇಹಿತ್ ಎಲ್ಲೂ ನಟಿ ತನಿಷ್ಕಾ ಹೆಸರು ಹೇಳಿಲ್ಲ ಎನ್ನುವ ನೋವು ಕೆಲ ಬಳಕೆದಾರರಿಗಿದೆ. ಇಲ್ಲಿ ಸ್ನೇಹಿತ್ ಗಿಂತ ತನಿಷ್ಕಾ ಶ್ರಮ ಹೆಚ್ಚಿದೆ. ಆದ್ರೆ ಅದನ್ನು ಸ್ನೇಹಿತ್ ಎಲ್ಲೂ ಹೇಳಿಕೊಂಡಿಲ್ಲ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಡಾನ್ಸ್ ಗೆ ಫುಲ್ ಮಾರ್ಕ್ಸ್ :

 ಭಾನುವಾರ ಮಹಾನಟಿ ಶೋನಲ್ಲಿ ಈ ಸಾಂಗ್ ನೋಡಿದ ಜಡ್ಜ್ಸ್ ಖುಷಿಯಾಗಿದ್ದರು. ತನಿಷ್ಕಾ ಡಾನ್ಸ್ ಬೆಂಕಿ ಎನ್ನುವ ಕಮೆಂಟ್ ಬಂದಿತ್ತು. ಶೂಟಿಂಗ್ ಮಾಡಿದ್ದ ತನಿಷ್ಕಾಗೆ ಜ್ವರ ಬಂದಿತ್ತಂತೆ. ಶೂಟಿಂಗ್ ಬಗ್ಗೆ ಹಾಡು ಕಟ್ಟಿ ಹೇಳಿದ್ದ ತನಿಷ್ಕಾ, ಚಳಿ, ನಡುಕ ಅಂದ್ರೂ ಮಾಸ್ಟರ್ ಬಿಡ್ಲಿಲ್ಲ. ಐಸ್ ವಾಟರ್ ಹಾಕಿದ್ರು ಅಂತ ತಮ್ಮ ನೋವು ತೋಡ್ಕೊಂಡಿದ್ರು.

ಕಾಂತಾರ ಚಾಪ್ಟರ್ 1 ಮಾತ್ರವಲ್ಲ... 2025ರಲ್ಲಿ ಇಷ್ಟೊಂದು ಸಿನಿಮಾಗಳು 500 ಕೋಟಿಗೂ ಹೆಚ್ಚು ಬಾಚಿವೆಯೇ?

ಏನು ಮಾಡ್ತಿದ್ದಾರೆ ಸ್ನೇಹಿತ್ ಗೌಡ? : 

ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸ್ನೇಹಿತ್ ಸ್ಟ್ರಾಟಜಿ ವರ್ಕ್ ಆಗಿರಲಿಲ್ಲ. ಅವರು 9ನೇ ವಾರವೇ ವಾಪಸ್ ಬಂದಿದ್ರು. ಬಿಗ್ ಬಾಸ್ ಶೋ ಮುಗಿದ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದ ರಕ್ಷಿತ್, ಮೈಕ್ರೋ ಸೀರೀಸ್ನಲ್ಲಿ ಬ್ಯುಸಿಯಿದ್ದಾರೆ. ಈಗಾಗಲೇ ಸೀರೀಸ್ ಶೂಟಿಂಗ್ ಪೂರ್ಣಗೊಂಡಿದೆ. ಇದಲ್ದೆ ಮಹಾನಟಿ ಶೋನಲ್ಲಿ ಸಾಂಗ್ ಶೂಟಿಂಗ್ ರೌಂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಚಿರವಾದ ನೆನಪು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸ್ನೇಹಿತ್ ಗೌಡ, ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟ ಮೊದಲ ಬಾರಿ ಕರ್ನಾಟಕಕ್ಕೆ ಮೈಕ್ರೋ ಸೀರೀಸ್ ಪರಿಚಯಿಸಿದ್ದಾರೆ. Marriage Deal now on Bullet ಹಾಗೂ My Fake Boyfriend is a Billionaire ನಲ್ಲಿ ಸ್ನೇಹಿತ್ ಕಾಣಿಸಿಕೊಂಡಿದ್ದಾರೆ.

View post on Instagram