ಗಂಡ: ಇವತ್ತೇನೋ ಸರಿ, ನೀನು ಯಾವತ್ತೂ ಬಿಗ್ ಬಾಸ್ ಮಿಸ್ ಮಾಡೋದೇ ಇಲ್ವಲ್ಲ ಯಾಕೆ? ಹೆಂಡತಿ: ಗೊತ್ತಿಲ್ಲ, ಯಾರು ಮನೆಯವ್ರನೆಲ್ಲಾ ಬಿಟ್ಟು ನೂರಾ ಎಂಟು ದಿನ ಆ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಬರ್ತಾರೆ ಅನ್ನೋದೇ ನಂಗೆ ಕುತೂಹಲ… ಗಂಡ: ಓ ಹಾಗೆ.. ನಾನು ಬೇರೇನೋ ಅಂದ್ಕೊಂಡಿದ್ದೆ… ಹೆಂಡತಿ: ಬೇರೇನೋ ಅಂದ್ರೆ..? 

ಪಕ್ಕದ ಮನೆಯಲ್ಲಿರೋ ನ್ಯೂ ಮಾರಿಡ್ ಕಪಲ್ ಬಿಗ್ ಬಾಸ್ ಸಂಭಾಷಣೆ!

ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boos Kannada 12) ಶುರು. ಈಗಾಗಲೇ ಸ್ಪರ್ಧಿಗಳು ಮನೆಯೊಳಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಬಿಗ ಬಾಸ್ ಶೋವನ್ನು, ಕಿರುತೆರೆ ವಿಕ್ಷಕರು ಅನ್ನೋದಕ್ಕಿಂತಲೂ ಹೆಚ್ಚಾಗಿ ಸಮಾಜದ ಬಹಳಷ್ಟು ಜನರು ನೋಡುತ್ತಾರೆ. ಯಾಕೆ ನೋಡ್ತಾರೆ? ಅದಕ್ಕೊಂದು ವೀಕ್ಷಕರ ವರ್ಗವೇ ಇದೆ ಯಾಕೆ? ಇಂತ ಪ್ರಶ್ನೆಗಳು ಹಲವರ ತಲೆಯಲ್ಲಿ ಓಡಾಡುತ್ತಿರಲಿಕ್ಕೆ ಸಾಕು. ಅದಕ್ಕೆ ಒಂದು ಉತ್ತರ ಇಲ್ಲಿದೆ ನೋಡಿ..!

ನಮ್ಮನೆ ಪಕ್ಕದ ಮನೆಯಲ್ಲಿರೋ ನ್ಯೂ ಮಾರಿಡ್ ಕಪಲ್ (ಹೊಸದಾಗಿ ಮದುವೆಯಾದ ಜೋಡಿ) ಈ ಬಿಗ್ ಬಾಸ್‌ ಶೋ ನೋಡುತ್ತ ರೂಮಿನಲ್ಲಿ ಮಾತನಾಡಿದ್ದು ಇದು. ಅವರ ಪ್ರಕಾರ, ಅವರಿಬ್ಬರ ಸಂಭಾಷಣೆಗಳನ್ನು, ಪೋಲಿ ಡೈಲಾಗ್‌ಗಳನ್ನು ಇನ್ಯಾರೂ ಕೇಳಿಸಿಕೊಂಡಿಲ್ಲ ಅಂತ.. ಆದ್ರೆ, ಅವರ ಮನೆ ಹಾಗೂ ಪಕ್ಕದ ಮನೆ ಬಾಗಿಲು-ಕಿಟಕಿಗಳೂ ತೆರೆದೇ ಇದೆ ಅನ್ನೋದು ಯಾಕೋ ಅವರ ಗಮನಕ್ಕೆ ಬಂದಂತಿಲ್ಲ. ಇರಲಿ ಬಿಡಿ, 'ಆಗಿದ್ದೆಲ್ಲಾ ಒಳ್ಳೆಯದಕ್ಕೇ, ಆಗೋದೆಲ್ಲಾ ಒಳ್ಳೆಯದಾಗೋದಕ್ಕೆ' ಅಂತ ಅಂದ್ಕೊಂಡು ಮುಂದಿನ ಕಥೆ ನೋಡಿ..

ಗಂಡ: ನೀನ್ಯಾಕೆ ಬೆಳಿಗ್ಗೆಯಿಂದ ಬಿಗ್ ಬಾಸ್ ಬಿಗ ಬಾಸ್ ಅಂದ್ಕೊಂಡು ಸಾಯ್ತಾ ಇದೀಯ?

ಹೆಂಡತಿ: ನಾನ್ ಬಿಡಿ, ನೀವ್ಯಾಕೆ ಇವತ್ತು ಕ್ರಿಕೆಟ್ಟು, ಫ್ರೆಂಡ್ಸ್ ಅಂದ್ಕೊಂಡು ಹೋಗಿಲ್ಲ? ಇವತ್ತು ಯಾವ್ ಫ್ರೆಂಡ್ ಬರ್ತ್ ಡೇನೂ ಇಲ್ವಾ?

ಗಂಡ: ಸಿಗೋದ್ ಒಂದಿನ ಹೆಂಡ್ತಿ ಜತೆ ಇರೋಣ ಅಂತ.. ಬಾರೇ.. ( ಅಂತ ತಬ್ಬಿಕೊಳ್ಳಲು ಹೋಗ್ತಾನೆ)

ಹೆಂಡತಿ: ಇರಿ ಸ್ವಲ್ಪ, ಯಾರೆಲ್ಲಾ ಮನೆಯೊಳಕ್ಕೆ ಹೋಗ್ತಾರೆ ಅಂತ ನೋಡ್ಕೊಂಡು ಆಮೇಲೆ..

ಗಂಡ: ಆಮೇಲ್ ಏನು..?

ಹೆಂಡತಿ: ಆಮೇಲ್ ಇನ್ನೇನು..? ಊಟ ಮಾಡೋಣ..

ಗಂಡ: ಸರಿ ಬಿಡು, ಊಟ ಅಂದ್ರೆ ಸಂಡೇ ಸ್ಪೆಷಲ್ ಊಟ ತಾನೆ?

ಹೆಂಡತಿ: ಸದಾಶಿವಂಗೆ ಅದೇ ಧ್ಯಾನ ಅನ್ನೋ ಹಾಗೆ ನಿಮ್ಗೆ ಸಂಡೆ ಬಂದ್ರೆ ಸಾಕು ಸ್ಪೆಷಲ್ ಊಟದ್ದೇ ಚಿಂತೆ..

(ಇಬ್ಬರೂ ಬಿಗ್ ಬಾಸ್ ನೋಡುತ್ತಿದ್ದಾರೆ)

ಗಂಡ: ಇವತ್ತೇನೋ ಸರಿ, ನೀನು ಯಾವತ್ತೂ ಬಿಗ್ ಬಾಸ್ ಮಿಸ್ ಮಾಡೋದೇ ಇಲ್ವಲ್ಲ ಯಾಕೆ?

ಹೆಂಡತಿ: ಅದೇನೋ ಗೊತ್ತಿಲ್ಲ, ಯಾರು ಮನೆಯವ್ರನೆಲ್ಲಾ ಬಿಟ್ಟು ನೂರಾ ಎಂಟು ದಿನ ಆ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಬರ್ತಾರೆ ಅನ್ನೋದೇ ನಂಗೆ ಕುತೂಹಲ..

ಗಂಡ: ಓ ಹಾಗೆ.. ನಾನು ಬೇರೇನೋ ಅಂದ್ಕೊಂಡಿದ್ದೆ..

ಹೆಂಡತಿ: ಬೇರೇನೋ ಅಂದ್ರೆ..?

ಗಂಡ: ಕಿಚ್ಚ ಸುದೀಪ್ ನೋಡೋಕೆ.. ಒಳ್ಳೋಳ್ಳೆ ಗಂಡ್ ಹೈಕ್ಳು ಬರ್ತಾರೆ, ಪೋಲಿ ಡೈಲಾಗ್ ಹೇಳ್ತಾರೆ.. ಒಂದೇ ಮನೆಲ್ಲಿ ಮಲಗ್ತಾರೆ.. ಅದಕ್ಕೇ ಅಂದ್ಕೊಂಡಿದ್ದೆ..

ಹೆಂಡತಿ: ಅದ್ಯಾಕೆ ಹಾಗೆ.. ನೀವು ಫೋನಲ್ಲೆಲ್ಲಾ ಮಾತಾಡೋ ಹಾಗೇ ಹೇಳ್ಬೇಕು ಅಂದ್ರೆ, ಅಲ್ಲಿ ಒಳ್ಳೊಳ್ಳೇ ಫಿಗರ್‌ಗಳು ಬರ್ತಾರೆ, ಚೆಂದಚೆಂದದ ಬಟ್ಟೆ ಹಾಕ್ತಾರೆ, ಮೇಕಪ್ಪು, ಲಿಪ್‌ಸ್ಟಿಕ್ಕು.. ಮನೆಯಲ್ಲಿ ಗಂಡ-ಮಕ್ಳು ಇದ್ರೂ ಯಾರದೋ ಒಟ್ಟಿಗೆ ಕಾಲ ಕಳಿತಾ ಲೈಫ್ ಎಂಜಾಯ್ ಮಾಡ್ತಾರೆ.. ಅದನ್ನೆಲ್ಲಾ ನೋಡಿ ಹೊಟ್ಟೆಕಿಚ್ಚು ಪಡೋದಕ್ಕೆ ಅಂದ್ಕೊಂಡಿದ್ದೆ..

ಗಂಡ: ಅವೆಲ್ಲಾ ನೋಡಿದ್ರೆ ಹೊಟ್ಟೆ ತುಂಬುತ್ತಾ?

ಹೆಂಡತಿ: ಮತ್ತೆ ನನಗೆ ಹೊಟ್ಟೆ ತುಂಬುತ್ತಾ? ಯಾರು ಅರ್ಧ ಕೋಟಿ ಗೆಲ್ತಾರೆ ಅಂತ ನೋಡೋಕೆ ಅಷ್ಟೇ.. ನೂರಾ ಎಂಟು ದಿನ ಅಲ್ಲಿದ್ದು ಆಟ ಆಡಿದ್ರೆ 50 ಲಕ್ಷ, ಜತೆಗೆ ಹೆಸರು ಸಂಪಾದನೆ ಮಾಡ್ಬಹುದಲ್ಲ! ಆ ಅದೃಷ್ಟ ಯಾರು ಪಡಿತಾರೆ ಅಂತ ನೋಡೋಕೆ..

ಗಂಡ: ಎಲ್ಲರೂ ನೋಡೋದು ಬಹುಮಾನ ಯಾರ್ ಗೆಲ್ತಾರೆ ಅನ್ನೋದನ್ನೇ ತಲೇಲಿ ಇಟ್ಕೊಂಡು ಅಂತ ಹೇಳ್ತಾ ಇದೀಯ..

ಹೆಂಡತಿ: ಹೌದು.. 'ದುಡ್ಡೇ ದೊಡ್ಡಪ್ಪ' ಅಂತಾರಲ್ಲ, ಅದು ಹಾಗೇನೇ

ಗಂಡ: ಅದನ್ನು ತಿಳಿಯೋಕೆ ಗ್ರಾಂಡ್ ಫಿನಾಲೆ ನೋಡಿದ್ರೆ ಸಾಕಲ್ವಾ?

ಹೆಂಡತಿ: ಆದ್ರೂ ಅದು ಹಾಗಲ್ಲ.. ಯಾರು ಯಾವ ತಪ್ಪು ಮಾಡಿದ್ರು? ಅದು ಯಾಕಾಯ್ತು.. ಜನ ಹೇಗೆಲ್ಲಾ ಇರ್ತಾರೆ ಅಂತ ತಿಳ್ಕೋಬಹುದು.. ಅದೆಲ್ಲಾ ಇರ್ಲಿ, ನೋಡೋದು ನಾನ್ ಆದ್ರೂ ನೀವು ಎಲ್ಲಾನೂ ನನ್ ಕೇಳಿ ತಿಳ್ಕೋತೀರ ತಾನೆ? ಅದ್ಯಾಕೆ ಮತ್ತೆ..?

ಗಂಡ: ಅದೂ ಅದೂ.. ನೀನು ಮನೆಲ್ಲೇ ಇದಿಯೋ ಅಥವಾ ಬೇರೆಲ್ಲೋ ಹೋಗಿದ್ಯಾ ಅಂತ ತಿಳ್ಕೊಳ್ಳೋಕೆ.. (ಜೋರಾಗಿ ನಗ್ತಾನೆ)

ಹೆಂಡತಿ: ಮತ್ತೆ ನೀವು ಯಾವತ್ತೂ ಹೊರಗಡೆನೇ ಓಡಾಡ್ತಾ ಇರ್ತೀರಾ.. ಹಾಗಿದ್ರೆ ನಾನು ನಿಮ್ ಬಗ್ಗೆ ಏನ್ ಅಂದ್ಕೋಬೇಕು?

ಗಂಡ: ತಮಾಷೆಗೆ ಹೇಳ್ದೆ, ಸೀರಿಯಸ್ಸಾಗಿ ತಗೋಬೇಡ.. ಬಾ, ಸಾಕು ನೋಡಿದ್ದು.. ಸ್ಪೆಷಲ್ ಊಟ ಮಾಡೋಣ.. (ಅಂತ ಹೆಂಡತಿ ಕೈ ಹಿಡಿದು ತಬ್ಬಿಕೊಂಡು ಅವಳನ್ನೂ ಏಳಿಸ್ತಾನೆ)

ಹೆಂಡ್ತಿ: ಅವ್ರ ಆಟ ನೋಡ್ತಾನೆ ಇಲ್ಲೇ ನಾವು ಸ್ಪೆಷಲ್ ಊಟ ಮಾಡೋಣ ಬಿಡಿ.. (ಅಂತಾಳೆ)

(ಇಬ್ರೂ ಜತೆಯಾಗಿ ಎದ್ದು ಹೋಗಿ ಲೈಟ್ ಆಫ್ ಮಾಡ್ತಾರೆ, ಇಬ್ಬರ ಮಾತೂ ನಿಂತಿದೆ.. ಮುಂದೇನು ಅಂತ ಹೇಳೋ ಅಗತ್ಯವಿಲ್ಲ ತಾನೆ? ಸಂಡೇ ಸ್ಪೆಷಲ್ ಊಟ ವಿತ್ ಬಿಗ್ ಬಾಸ್ ಕನ್ನಡ ಸೀಸನ್ 12)