Mahanati Winner: ಇದೀಗ 'ಮಹಾನಟಿ ಸೀಸನ್‌2' ಮುಗಿಯುವ ಹಂತ ತಲುಪಿದೆ. ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಇಷ್ಟು ವಾರಗಳ ಕಾಲ ರಂಜಿಸಿದವರು ಇದೀಗ ಗೆದ್ದು ಬೀಗುವ ಸಮಯವೂ ಹತ್ತಿರವಾಗಿದೆ. 

ಕನ್ನಡ ಕಿರುತೆರೆಯಲ್ಲಿಯೇ ತುಂಬಾ ವಿಶಿಷ್ಟವಾದ, ವಿಭಿನ್ನವಾದ ರಿಯಾಲಿಟಿ ಶೋ ‘ಮಹಾನಟಿ’. ಸೀಸನ್ 1ರ ಅತೀ ದೊಡ್ಡ ಸಕ್ಸಸ್ ನಂತರ ಈಗ ಮಹಾನಟಿ ಸೀಸನ್ 2 ಕನ್ನಡಿಗರನ್ನು ಮನರಂಜಿಸುತ್ತಿದೆ. ಜೂನ್ 14 ರಿಂದ ಸಂಜೆ 7:30ಕ್ಕೆ ಪ್ರಸಾರವಾಗುತ್ತಿರುವ ಸೀಸನ್‌2 ಕೂಡ ಜನಮನ ಗೆದ್ದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ 2024 ನಲ್ಲಿ ನಡೆದ ಮಹಾನಟಿ ಸೀಸನ್ 1 ಆವೃತ್ತಿಯ ವಿಜೇತೆ ಸ್ಯಾಂಡಲವುಡ್ ನ ಹಿಟ್ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕನಟಿ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅನೇಕ ಸ್ಪರ್ಧಿಗಳು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ ಪ್ರತಿಭಾವಂತ ಯುವತಿಯರು ಭಾಗವಹಿಸಿದ್ದಾರೆ. ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ತರಬೇತಿಯೂ ಸಿಕ್ಕಿದೆ. ಇದೀಗ 'ಮಹಾನಟಿ ಸೀಸನ್‌2' ಮುಗಿಯುವ ಹಂತ ತಲುಪಿದೆ. ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಇಷ್ಟು ವಾರಗಳ ಕಾಲ ರಂಜಿಸಿದವರು ಇದೀಗ ಗೆದ್ದು ಬೀಗುವ ಸಮಯವೂ ಹತ್ತಿರವಾಗಿದೆ. ಇಡೀ ಕರ್ನಾಟಕದಾದ್ಯಂತ ಆಡಿಷನ್ ಮಾಡಿ ಮಹಾನಟಿ ರಿಯಾಲಿಟಿ ಶೋಗೆ ಹಲವಾರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ತರಲಾಗಿತ್ತು.

ಮಹಾನಟಿ ಸೀಸನ್ 2 ನಲ್ಲಿ ಚೆಂದುಳ್ಳಿ ಚೆಲುವೆ ನಿಶ್ವಿಕಾ ನಾಯ್ಡು, ಎವರ್‌ಗ್ರೀನ್ ನಟಿ ಪ್ರೇಮ ಮತ್ತು ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ಕೊಡುತ್ತಿರುವಂತಹ ತರುಣ್ ಸುಧೀರ್ ಅವರು ತೀರ್ಪುಗಾರಾಗಿ ತೀರ್ಪನ್ನು ನೀಡುತ್ತಿದ್ದಾರೆ. ಕನ್ನಡ ಹೆಸರಾಂತ ನಟ ರಮೇಶ್ ಅರವಿಂದ್ ಅವರು ಈ ಶೋ ನ ಮಾಸ್ಟರ್ ಮೈಂಡ್ ಆಗಿದ್ದು, ಸ್ಪರ್ಧಿಗಳಿಗೆ ಮಾಸ್ಟರ್ ಕ್ಲಾಸ್ ಗಳ ಜೊತೆಗೆ ಚಿತ್ರರಂಗದಲ್ಲಿ ತಮಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ನು ಕನ್ನಡಿಗರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರು ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಟಿಯಾಗಬೇಕೆಂದು ಕನಸುಗಳನ್ನು ಹೊತ್ತುಕೊಂಡಿರುವ ಸ್ಪರ್ಧಿಗಳಿಗೆ ಮಹಾನಟಿ ವೇದಿಕೆ ಒಂದು ಒಳ್ಳೆಯ ಅವಕಾಶವನ್ನು ಕೊಡುತ್ತದೆ ಎಂಬುದಕ್ಕೆ ಕಳೆದ ಸೀಸನ್ ನ ಯಶಸ್ಸೇ ಸಾಕ್ಷಿ. ಅಂದಹಾಗೆ ಮಹಾನಟಿ ಸೀಸನ್ 2ರಲ್ಲಿ ತಮಗೆ ಕೊಟ್ಟ ಡೈಲಾಗ್‌ಗಳನ್ನು ಅತ್ಯುತ್ತಮವಾಗಿ ಡೆಲಿವರಿ ಮಾಡುತ್ತ ಎಲ್ಲರ ಸೆಳೆದಿದ್ದ 10 ಮಂದಿ Semi Final ತಲುಪಿದ್ದಾರೆ. ಇಂದು ರಾತ್ರಿ 7:30ಕ್ಕೆ Semi Final ನಡೆಯಲಿದ್ದು, ಫೈನಲಿಸ್ಟ್ ಆಗಿ ಟಾಪ್ 5ಕ್ಕೇರುವ ನಟಿಯರು ಯಾರು ಎಂಬುದನ್ನ ಕಾದು ನೋಡಬೇಕಿದೆ. ಆದರೆ ಫಿನಾಲೆಗೆ ತಲುಪುವ ಮುನ್ನವೇ ವಿನ್ನರ್ ಯಾರು ಎಂಬುದನ್ನ ವೀಕ್ಷಕರು ಗೆಸ್ ಮಾಡ್ತಿದ್ದಾರೆ. ಬಹುಶಃ ಅವರು ನಿಮಗೆ ಫೇವರಿಟ್ ಆಗಿದ್ದರೆ ಆಶ್ಚರ್ಯವೇನಿಲ್ಲ ಬಿಡಿ.

ವೀಕ್ಷಕರ ಗೆಸ್‌

ಹೌದು. ವಂಶಿನೇ ಈ ಸೀಸನ್‌ನ ವಿನ್ನರ್‌ ಎಂದು ವೀಕ್ಷಕರು ಗೆಸ್‌ ಮಾಡ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ವಂಶಿ ಈ ಮೊದಲು ಡ್ರಾಮಾ ಜೂನಿಯರ್ಸ್ ಸೀಸನ್ 2ನಲ್ಲಿ ಭಾಗವಹಿಸಿದ್ದರು. 'ಜ್ಯೂನಿಯರ್ ಲಕ್ಷ್ಮಿ' ಅಂತ ಬಿರುದು ಗಿಟ್ಟಿಸಿಕೊಂಡಿರುವ ಮಂಗಳೂರಿನ ವಂಶಿ ಮಹಾನಟಿಯಲ್ಲಿ ಮಿಂಚುತ್ತಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದ ಇಡೀ ಕರ್ನಾಟಕದ ಜನತೆಯ ಮನ ಗೆದ್ದಿದ್ದ ವಂಶಿ ತಮ್ಮ ಅದ್ಭುತ ನಟನೆಯಿಂದ ಶಹಬ್ಬಾಸ್ ಗಿರಿ ಪಡೆದುಕೊಂಡು ವಿನ್ನರ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದರು. ಆದ್ರೆ ಇದೀಗ ಸ್ಟಾರ್​ ನಟಿಯಾಗಿ ಮಿಂಚೋದಕ್ಕೆ ನೇರವಾಗಿ ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 12 ವರ್ಷ ವಯಸ್ಸಿದ್ದಾಗ ವಂಶಿ ಡ್ರಾಮಾ ಜ್ಯೂನಿಯರ್ಸ್‌ಗೆ ಎಂಟ್ರಿ ಕೊಟ್ಟಿದ್ದರು. ಆದ್ರೆ 20 ವರ್ಷಕ್ಕೆ ಮಹಾನಟಿ ವೇದಿಕೆಗೆ ಬಂದಿದ್ದಾರೆ. 

ಹೀಗಿದೆ ನೋಡಿ ವೀಕ್ಷಕರ ಕಾಮೆಂಟ್ಸ್

View post on Instagram