Lakshmi Nivasa Serial: ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಕಾಳಜಿ ತೋರದ ಮಕ್ಕಳಿಗೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಸರಿಯಾಗಿ ಪಾಠ ಕಲಿಸಿದ್ದಾರೆ. ಇದೇ ರೀತಿ ಸಮಾಜದಲ್ಲೂ ಆದರೆ ಚೆನ್ನಾಗಿರುತ್ತದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ( Lakshmi Nivasa Serial ) ಲಕ್ಷ್ಮೀ ಹಾಗೂ ಶ್ರೀನಿವಾಸ್ ಮಕ್ಕಳಾದ ಸಂತೋಷ್ ಹಾಗೂ ಹರೀಶ್ ಬೇರೆ ಬೇರೆ ಮನೆ ಮಾಡಿಕೊಂಡಿದ್ದರು. ಒಬ್ಬ ಮಗನ ಮನೆಯಲ್ಲಿ ತಂದೆ, ಇನ್ನೊಬ್ಬ ಮಗನ ಮನೆಯಲ್ಲಿ ತಾಯಿ ಇದ್ದರು. ಅಲ್ಲಿ ಅವರು ನಡೆಸಿಕೊಳ್ಳುವ ರೀತಿ ನೋಡಿ, ಇಬ್ಬರೂ ಅಲ್ಲಿಂದ ಹೊರಗಡೆ ಬಂದು, ತಮ್ಮ ಸೈಟ್‌ನಲ್ಲಿ ಸಣ್ಣ ಮನೆ ಮಾಡಿಕೊಂಡಿದ್ದಾರೆ.
ಕೋರ್ಟ್‌ನಲ್ಲಿ ಹೇಳಿದ್ದೇನು?
ತಂದೆಯ ಬಳಿ ಇದ್ದ ಹಣವನ್ನೆಲ್ಲ ಹಂಚಿಕೊಂಡಿರೋ ಸಂತೋಷ್, ಹರೀಶ್‌ಗೆ ಈಗ ಸೈಟ್‌ನಲ್ಲಿಯೂ ಜಾಗ ಬೇಕಂತೆ. ತಂದೆ-ತಾಯಿಯನ್ನು ಹೀನಾಯವಾಗಿ ನಡೆಸಿಕೊಂಡ ಸಂತೋಷ್‌ಗೆ ದುಡ್ಡೇ ಎಲ್ಲ. ಯಾವಾಗಲೂ ದುಡ್ಡಿನ ಹಿಂದೆ ಓಡುವ ಇವನಿಗೆ ಪಾಲಕರ ಬೆಲೆ ಗೊತ್ತಿಲ್ಲ. ಇವನಿಗೆ ಬುದ್ಧಿ ಕಲಿಸಬೇಕು ಅಂತ ಶ್ರೀನಿವಾಸ್ ಈ ಬಾರು ಕೋರ್ಟ್ ಮೆಟ್ಟಿಲೇರಿದ್ದರು. “ನನ್ನ ಮಕ್ಕಳಿಗೆ ನಾನು ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೆ ತಲಾ 18 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಅದನ್ನು ವಾಪಾಸ್ ಕೊಡಿಸಿ. ನಮಗೆ ಬೇಕಾಗಿರೋದು ಮಕ್ಕಳ ಪ್ರೀತಿ, ಕಾಳಜಿ. ಆದರೆ ನನ್ನ ಮಕ್ಕಳು ಮಾತ್ರ ಹೀನಾಯವಾಗಿ ನಡೆಸಿಕೊಂಡಿದ್ದಾರೆ” ಎಂದು ಶ್ರೀನಿವಾಸ್ ಕೋರ್ಟ್‌ನಲ್ಲಿ ಹೇಳಿದ್ದರು.
ನ್ಯಾಯಾಧೀಶರು ಏನಂದ್ರು?
ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಆ ವೇಳೆ ಸಂತೋಷ್, “ನಮ್ಮನ್ನು ಹುಟ್ಟಿಸಿ ಅಂತ ನಮ್ಮ ಅಪ್ಪನನ್ನು ಕೇಳಿದ್ವಾ? ಹುಟ್ಟಿಸಿದರು, ನಮಗೆ ಖರ್ಚು ಮಾಡಿದರು, ಅದಕ್ಕೆ ಯಾಕೆ ದುಡ್ಡು ಕೊಡಬೇಕು?” ಎಂದು ಹೇಳಿದ್ದಾರೆ. ಆಗ ಶ್ರೀನಿವಾಸ್, ಜಡ್ಜ್ ಮುಂದೆ “ಪಾಲಕರಿಗೆ ಬೆಲೆ ಕೊಡದೆ, ಕಾಳಜಿ ತೋರದ ಪಾಲಕರಿಗೆ ಬುದ್ಧಿ ಕಲಿಸಬೇಕು, ಅಂತಹ ಶಿಕ್ಷೆ ಕೊಡಿ” ಎಂದು ಬೇಡಿಕೆ ಇಟ್ಟಿದ್ದಾರೆ. ಕೊನೆಗೂ ಜಡ್ಜ್, “ಸಂತೋಷ್, ಹರೀಶ್ ಇಬ್ಬರೂ ಶ್ರೀನಿವಾಸ್‌ಗೆ 18 ಲಕ್ಷ ರೂಪಾಯಿ ಕೊಡಬೇಕು, ಇಲ್ಲವಾದಲ್ಲಿ ಜೈಲು ಶಿಕ್ಷೆ ಆಗುವುದು” ಎಂದು ಹೇಳಿದ್ದಾರೆ. ಈ ಮಾತು ಕೇಳಿ ಹರಿ, ಸಂತು ಕಂಗಾಲಾಗಿದ್ದಾರೆ.
ಸಮಾಜದಲ್ಲಿ ಇಂಥ ಶಿಕ್ಷೆ ಆಗಬೇಕು
ಇಂದು ಪಾಲಕರನ್ನು ನೋಡಿಕೊಳ್ಳಲಾಗೋದಿಲ್ಲ ಎಂದು ಸಾಕಷ್ಟು ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಇರಿಸೋದುಂಟು, ಮನೆಯಿಂದ ಹೊರಹಾಕೋದುಂಟು. ಅಂಥವರಿಗೆ ಇಂಥ ಶಿಕ್ಷೆ ಸಿಕ್ಕರೆ ನಿಜಕ್ಕೂ ಚೆನ್ನಾಗಿರುತ್ತದೆ ಎಂದು ವೀಕ್ಷಕರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವೀಕ್ಷಕರು ಏನು ಹೇಳಿದರು?
- ಈ ವಾರದ ಚಪ್ಪಾಳೆ ನ್ಯಾಯಾಧೀಶರಿಗೆ. ಅಪ್ಪ-ಅಮ್ಮನ ಪ್ರೀತಿ ಏನು ಅಂತ ಗೊತ್ತಿಲ್ಲದ ಮಕ್ಕಳಿಗೆ ಇದು ಪಾಠ ಆಗಲಿ.
- ನಿಜವಾಗಿಯೂ ಇದು ಸತ್ಯ. ಅಪ್ಪ ಅಮ್ಮನ ಕಷ್ಟ ಗೊತ್ತಿಲ್ಲದ ನಾಯಿಗಳಿಗೆ ಇದು ತುಂಬಾ ಅರ್ಥಪೂರ್ಣ
- ಜಡ್ಜ್ ಸರಿಯಾದ ತೀರ್ಪು ಕೊಟ್ಟಿದ್ದಾರೆ, ಹೀಗೆ ಆಗ್ಬೇಕು ಇವ್ರಿಗೆ
- ಸಂತು ಹರಿ ಪಾಪದ ಕೊಡಾ ತುಂಬಿತು. ಶ್ರೀನಿವಾಸ ಅವರಿಗೆ ನ್ಯಾಯ ಸಿಕ್ತು
- ಇದು ಆ್ಯಕ್ಚುಲೀ ಚೆನ್ನಾಗಿರೋದು.
- ತುಂಬಾ ಖುಷಿ ಆಯ್ತು, ಹೀಗೆ ಆಗ್ಬೇಕು ಈ ಮಕ್ಕಳಿಗೆ
- ಒಳ್ಳೆ ಕೆಲಸ ಮಾಡಿದ್ದಾರೆ. ಹೀಗೆ ಆಗ್ಬೇಕು, ಕಂಡವರ ಆಸ್ತಿ ಮೇಲೆ ಆಸೆ ಪಡೋರಿಗೆಲ್ಲ ಒಳ್ಳೆಯ ಪಾಠ
- ಈ ದುಡ್ಡಿನಿಂದ ಒಂದು ಮನೆ ಕಟ್ಟಿಬಿಡಿ
- ಇವರು ಒಳ್ಳೆಯ ಅಪ್ಪ-ಅಮ್ಮ ಆದ ಕಾರಣ ಈ ತೀರ್ಪು ಓಕೆ. ಆದರೆ ಎಲ್ಲರೂ ಇವರ ಹಾಗೆ ಇರಲ್ಲ. ಮಗಳು-ಅಳಿಯನ ಮಕ್ಕಳು ಮೇಲಿನ ವ್ಯಾಮೋಹ ಜಾಸ್ತಿ ಆಗಿ ಅವರ ಮಾತು ಕೇಳಿ, ಗಂಡು ಮಕ್ಕಳ ಸಂಸಾರವನ್ನು ಬೀದಿಗೆ ತರುವ ತಾಯಿ ಕೂಡ ಇದ್ದಾರೆ, ಮರೆಯಬೇಡಿ.
- ಅಣ್ಣ-ತಮ್ಮನಿಗೆ ಮಾಡಿದಿರುವ ತಪ್ಪಿಗೆ ಶಿಕ್ಷೆ ಆಯ್ತು. ತಂದೆ,ತಾಯಿ ಕೇಳುವುದು ಕಾಳಜಿ.
