ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ
Naa Ninna Bidalaare Kannada Serial: ಗುರು ಶಂಭು ಎದುರು ಸೋತ ಬಳಿಕ ಹತಾಶಳಾಗಿರುವ ಆಕೆ, ತನ್ನ ಸೋಲಿಗೆ ಉತ್ತರ ಕಂಡುಕೊಳ್ಳಲು ಪಣತೊಟ್ಟಿದ್ದಾಳೆ. ಮಾಳವಿಕಾಳ ವಾಪಸಾತಿಯಿಂದ ಧಾರಾವಾಹಿಯು ಮತ್ತೆ ರೋಚಕ ತಿರುವು ಪಡೆದುಕೊಂಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ದೂರವಾಗಿದ್ದ ಮಾಳವಿಕಾ ಪಾತ್ರ
ಶರತ್ ಮತ್ತ ದುರ್ಗಾ ಬಳಿಕ ಸೀರಿಯಲ್‌ನಿಂದ ದೂರವಾಗಿದ್ದ ಮಾಳವಿಕಾ ಪಾತ್ರ ಮತ್ತೆ ಮುನ್ನಲೆಗೆ ಬಂದಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮಾಳವಿಕಾ ಪಾತ್ರದ ಅನುಪಸ್ಥಿತಿಯಿಂದ ಧಾರಾವಾಹಿ ಉಪ್ಪಿಲ್ಲದ ಊಟದಂತಾಗಿತ್ತು. ಮಾಳವಿಕಾ ಆಗಮನದಿಂದ ಧಾರಾವಾಹಿಗೆ ಜೋಶ್ ಸಿಕ್ಕಿದೆ. ಮಾಳವಿಕಾ ಆಗಮನದಿಂದ ಸೀರಿಯಲ್ ವೀಕ್ಷಕರು ಖುಚಿಗೊಂಡಿದ್ದಾರೆ.
ಸೋತಿರುವ ಮಾಳವಿಕಾ
ಗುರು ಶಂಭು ಮುಂದೆ ಹೀನಾಯವಾಗಿ ಸೋತಿರುವ ಮಾಳವಿಕಾ, ಅಮ್ಮನ ಬಳಿ ಮುಂದೆ ತನ್ನ ಸೋಲಿನ ಬಗ್ಗೆ ಹೇಳಿಕೊಂಡಿದ್ದಾಳೆ. ಗುರು ಶಂಭು ಮುಂದೆ ನನ್ನ ದಾಳಗಳೆಲ್ಲಾ ಸೋಲುತ್ತಿವೆ. ಇದಕ್ಕೆ ಉತ್ತರ ಸಿಗೋವರೆಗೂ ನಾನು ಇಲ್ಲಿಂದ ಹೋಗಲ್ಲ ಎಂದು ಮಾಳವಿಕಾ ಪಟ್ಟು ಹಿಡಿದು ಕುಳಿತಿದ್ದಾಳೆ.
ಬಲಶಾಲಿ, ಪ್ರಚಂಡ
ನನ್ನ ಮುಂದೆ ಶಂಭು ಬಂದಾಗ ಆತ ಎಷ್ಟು ಬಲಶಾಲಿ, ಪ್ರಚಂಡ ಅಂತ ಗೊತ್ತಾಗುತ್ತದೆ. ನಾನು ಅವನ ಮುಂದೆ ಹೀನಾಯವಾಗಿ ಸೋತಿದ್ದೇನೆ ಅಮ್ಮ. ಎಲ್ಲವೂ ನಮ್ಮ ಪರವಾಗಿಯೇ ನಡೆಯುತ್ತೆ ಅಂದ್ಕೊಂಡಿದ್ದೆ. ಶರತ್-ಮಾಯಾ ಮದುವೆ ಬಳಿಕ ಅಂಬಿಕಾ ಆತ್ಮದ ಶಕ್ತಿ ಕಡಿಮೆ ಮಾಡುವ ನಮ್ಮ ಗುರಿ ಸೋತಿದೆ ಎಂದು ಅಮ್ಮನ ಮುಂದೆ ಮಾಳವಿಕಾ ತನ್ನ ಹತಾಶೆಯನ್ನು ಹೇಳಿಕೊಂಡಿದ್ದಾಳೆ.
ನೆಟ್ಟಿಗರು ಹೇಳಿದ್ದೇನು?
ಮಾಳವಿಕಾ ಆಗಮನದ ವಿಡಿಯೋವನ್ನು ಜೀ ಕನ್ನಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಲ್ಲಿ ಸೋತಿರೋದು ಮಾಳವಿಕಾ & ಗೆದ್ದೀರೋಧು ಶಂಭು ಅಲ್ಲಾ. ಅಧರ್ಮ ಸೋತು ಧರ್ಮ ಗೆದ್ದಿದೆ. ದುಷ್ಟ ಶಕ್ತಿಗಳ ವಿರುದ್ಧ ದೈವಶಕ್ತಿಗೆ ಜಯ ಸಿಕ್ಕಿದೆ ಅಷ್ಟೇ. ಮಾಳವಿಕ ಕುತಂತ್ರ ಯಾವತ್ತೂ ಫಲಿಸಬಾರದು. ಕೊಲ್ಲುವರಗಿಂತ ಕಾಯುವರು ಹೆಚ್ಚು ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿಲನ್ ಪಾತ್ರ
ಸೀರಿಯಲ್‌ನಲ್ಲಿ ನಾಯಕ-ನಾಯಕಿಗಿಂತ ವಿಲನ್ ಪಾತ್ರಗಳನ್ನು ಹೆಚ್ಚು ಹೈಲೈಟ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಪ್ರಮುಖ ವಿಲನ್ ಮಾಳವಿಕಾ ಪಾತ್ರವಾಗಿದೆ. ಕಳೆದ ಎರಡು ವಾರಗಳಿಂದ ಮಾಳವಿಕಾ ಕಾಣಿಸಿಕೊಳ್ಳದಿರುವ ಕಾರಣ ಸೀರಿಯಲ್ ಜೋಶ್ ಕಳೆದುಕೊಂಡಿತ್ತು. ಇದೀಗ ಶಂಭು ವರ್ಸಸ್ ಮಾಳವಿಕಾ ಹೋರಾಟ ಹೇಗಿರುತ್ತೆ ಎಂದು ನೋಡಲು ವೀಕ್ಷಕರು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ರಿಯಲ್ ಅಮ್ಮನ ಜೊತೆ ನಾ ನಿನ್ನ ಬಿಡಲಾರೆ ಹಿತಾ ಭರ್ಜರಿ ಡಾನ್ಸ್: ವಿವಿಧ ರೂಪದಲ್ಲಿ ಕಾಣಿಸಿಕೊಂಡ ಪುಟಾಣಿ
ಅಪ್ಪನಿಗೆ ಮಗಳ ಸಲಹೆ
ದುರ್ಗಾ ಜೊತೆ ಮದುವೆ, ಅಂಬಿಕಾ ಕಾಣಿಸುವಿಕೆಯ ಮಾತುಗಳಿಂದ ಬೇಸತ್ತ ಶರತ್, ಮದ್ಯಪಾನ ಮಾಡಿ ಮನೆಗೆ ಆಗಮಿಸಿದ್ದನು. ಇದನ್ನು ನೋಡಿದ ಮಗಳು ಹಿತಾ ಬೆಳಗ್ಗೆ, ಇನ್ಮುಂದೆ ಯಾವತ್ತು ಆ ಕೊಳಚೆ ನೀರನ್ನು ಕುಡಿಯಬೇಡ ಎಂದು ಅಪ್ಪನಿಗೆ ಹೇಳಿದ್ದಾಳೆ. ಮಗಳ ಸಲಹೆ ಕೇಳಿ ಶರತ್ ಖುಷಿಯಾಗಿದ್ದಾನೆ.
ಇದನ್ನೂ ಓದಿ: ಜೀ ಕನ್ನಡ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ತಿರುವು... ಕಾದಿದೆ ಭರ್ಜರಿ ಸಂಚಿಕೆ