ವಾರದ ಬಳಿಕ ಕುಸಿತ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿಯೂ ಇಳಿಕೆಯಾಗಿದೆ ದರ!
Gold prices fall after a week: ಒಂದು ವಾರದ ನಿರಂತರ ಏರಿಕೆಯ ನಂತರ, ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕುಸಿದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರಗಳ ವಿವರವಾದ ಮಾಹಿತಿಯನ್ನು ನೀಡುತ್ತದೆ, ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಚಿನ್ನದ ಬೆಲೆ ಕುಸಿತ
ಒಂದು ವಾರದ ಬಳಿಕ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕುಸಿತವಾಗಿದೆ. ಸೆಪ್ಟೆಂಬರ್ 18ರಂದು ಚಿನ್ನದ ಬೆಲೆ ಇಳಿಕೆಯಾಗಿತ್ತು. ನಿರಂತರ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿದ್ದ ಚಿನ್ನಾಭರಣ ಪ್ರಿಯರಿಗೆ ಬೆಲೆ ಇಳಿಕೆ ನಿರಾಳತೆಯನ್ನುಂಟು ಮಾಡಿದೆ.
18, 22 ಮತ್ತು 24 ಕ್ಯಾರಟ್ ಚಿನ್ನ
18, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿಂದು ಕುಸಿತವಾಗಿದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ದರದಲ್ಲಿ 3,200 ರೂಪಾಯಿ ಇಳಿಕೆಯಾಗಿದೆ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,537 ರೂಪಾಯಿ (32 ರೂ. ಇಳಿಕೆ)
8 ಗ್ರಾಂ: 92,2976 ರೂಪಾಯಿ (256 ರೂ. ಇಳಿಕೆ)
10 ಗ್ರಾಂ: 1,15,370 ರೂಪಾಯಿ (320 ರೂ. ಇಳಿಕೆ)
100 ಗ್ರಾಂ: 11,53,700 ರೂಪಾಯಿ (3,200 ರೂ. ಇಳಿಕೆ)
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,575 ರೂಪಾಯಿ (30 ರೂ.ಇಳಿಕೆ)
8 ಗ್ರಾಂ: 84,600 ರೂಪಾಯಿ (240 ರೂ.ಇಳಿಕೆ)
10 ಗ್ರಾಂ: 1,05,750 ರೂಪಾಯಿ (300 ರೂ ಇಳಿಕೆ)
100 ಗ್ರಾಂ: 10,57,500 ರೂಪಾಯಿ (3,000 ರೂ.ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,06,000 ರೂಪಾಯಿ, ಮುಂಬೈ: 1,05,750 ರೂಪಾಯಿ, ದೆಹಲಿ: 1,05,900 ರೂಪಾಯಿ, ಕೋಲ್ಕತ್ತಾ: 1,05,750 ರೂಪಾಯಿ, ಬೆಂಗಳೂರು: 1,05,750 ರೂಪಾಯಿ, ವಡೋದರ: 1,05,800 ರೂಪಾಯಿ, ಪುಣೆ: 1,05,750 ರೂಪಾಯಿ, ಹೈದರಾಬಾದ್: 1,05,750 ರೂಪಾಯಿ
ಇದನ್ನೂ ಓದಿ: ನೀವು ಎಫ್‌ಡಿ ಇಡುವ ಹಣಕ್ಕೆ ಅತಿಹೆಚ್ಚು ಬಡ್ಡಿ ನೀಡುವ ಟಾಪ್-7 ಬ್ಯಾಂಕ್‌ಗಳು!
ಬೆಳ್ಳಿ ಬೆಲೆ
ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದ್ರೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ನಿನ್ನೆಯ ದರದಲ್ಲಿಯೇ ಇಂದು ಬೆಳ್ಳಿಯನ್ನು ನೀವು ಖರೀದಿಸಬಹುದು.
10 ಗ್ರಾಂ: 1,400 ರೂಪಾಯಿ
100 ಗ್ರಾಂ: 14,000 ರೂಪಾಯಿ
1000 ಗ್ರಾಂ: 1,40,000 ರೂಪಾಯಿ
ಇದನ್ನೂ ಓದಿ: ಒಯೋದಿಂದ ಹೊಸ ಅಧ್ಯಾಯ: ಗ್ರಾಹಕರಿಗೆ ಗುಡ್‌ನ್ಯೂಸ್, ಒಂದಲ್ಲ ಎರಡು ಬೆನೆಫಿಟ್