Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿಯೇ ಗಿಲ್ಲಿ ನಟ ಅವರು ಬ್ರೇಕಪ್ ಮಾಡ್ಕೊಂಡಿದ್ದಾರೆ. ಸದ್ಯ ಈ ಶೋ ಬಂದ್ ಆಗಿದೆ, ಅದಕ್ಕೂ ಮುನ್ನ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು? ನಿಜಕ್ಕೂ ಏನಾಯ್ತು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಾತ್ರ ಹಾವು ಮುಂಗುಸಿ ಥರ ಇದ್ದಾರೆ. ಮೊದಲ ದಿನದಿಂದಲೂ ಈ ಜೋಡಿ ಜಗಳ ಆಡಿಕೊಂಡು ಬರುತ್ತಲೇ ಇದೆ. ರಾಜಮಾತೆ ನಮ್ಮನ್ನು ಮಾತ್ರ ಟಾರ್ಗೆಟ್ ಮಾಡಿ ಈ ರೀತಿ ನಡೆಸಿಕೊಳ್ತಿದ್ದಾರೆ ಎಂದು ಕಾವ್ಯ ಶೈವ ಹೇಳಿದ್ದರು. ಈಗ ಗಿಲ್ಲಿ ನಟ, ಅಶ್ವಿನಿ ಗೌಡ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ.
‘ರಾಜಾಹುಲಿ’ ಸಿನಿಮಾದಲ್ಲಿ ಏನಿತ್ತು?
ನಟಿ ಅಶ್ವಿನಿ ಗೌಡ ಅವರು ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ರಾಜಾಹುಲಿ’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿ ಅವರು ಯಶ್ ಅತ್ತೆ ಮಗಳ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಯಶ್ ಅವರು ಅಶ್ವಿನಿಗೆ ಸುಮ್ಮನೆ ಕಾಲೆಳೆಯುತ್ತಾರೆ. ರಾಜಾಹುಲಿಯನ್ನು ಮದುವೆ ಆಗಬೇಕು ಅಂತ ಅಶ್ವಿನಿ ಪಾತ್ರ ಎಂದುಕೊಂಡಿರುತ್ತದೆ. ಆದರೆ ಆಗಿರೋದಿಲ್ಲ, ಹೀಗಿದ್ದರೂ ಪದೇ ಪದೇ ಅಶ್ವಿನಿ ಪಾತ್ರವು ರಾಜಾಹುಲಿ ಮುಂದೆ ಓಡಾಡುವುದು, ಲೈನ್ ಹೊಡೆಯುವುದು ಮಾಡುವುದು. ರಾಜಾಹುಲಿ ಕೂಡ “ನಮ್ ಅತ್ತೆ ಮಗಳಿಗೆ ನಾವೇ ಲೈನ್ ಹೊಡೆಯೋದು, ನಮ್ಮನ್ಯಾರು ಕೇಳೋದು?” ಎಂದು ಡೈಲಾಗ್ ಹೊಡೆಯುತ್ತಾರೆ.
ಬ್ರೇಕಪ್ ಮಾಡ್ಕೊಂಡ್ರು!
ಈಗ ಗಿಲ್ಲಿ ನಟ ಅವರು ಇದನ್ನೇ ಬಿಗ್ ಬಾಸ್ ಮನೆಯಲ್ಲಿ ರಿಪೀಟ್ ಮಾಡಿದ್ದಾರೆ. ಗಿಲ್ಲಿ ನಟ ಅವರು ಅಶ್ವಿನಿಗೆ ಮತ್ತೆ “ನಾವು ನಮ್ ಅತ್ತೆ ಮಗಳಿಗೆ ಲೈನ್ ಹೊಡಿತೀವಿ, ನಮ್ಮನ್ಯಾರು ಕೇಳೋರು” ಎಂದು ಡೈಲಾಗ್ ಹೇಳಿದ್ದರು. ಆಗ ಅಶ್ವಿನಿ, “ಕೆರ ಕಿತ್ತೊಯ್ತದೆ” ಎಂದಿದ್ದರು. ಇವರಿಬ್ಬರು ಜಗಳ ಆಡುತ್ತ, ರಾಜಾಹುಲಿ ಸಿನಿಮಾ ಡೈಲಾಗ್ ಹೇಳುತ್ತ ಮನೆಯಲ್ಲಿದ್ದವರಿಗೂ, ಹೊರಗಡೆ ಜನರಿಗೂ ಮನರಂಜನೆ ನೀಡುತ್ತಿದ್ದರು. ಈಗ ದೊಡ್ಮನೆಯಲ್ಲಿ ಬರೀ ಜಗಳ, ರಾಜಮಾತೆ ಅಶ್ವಿನಿಗೂ, ಗಿಲ್ಲಿ ನಟನಿಗೂ ಜಗಳ ಮುಗಿಯುತ್ತೇ ಇಲ್ಲ. ಹೀಗಾಗಿ ಅವರು ಬ್ರೇಕಪ್ ಎಂದಿದ್ದಾರೆ. ಆಗ ಅಶ್ವಿನಿ ಗೌಡ ಕೂಡ ಬ್ರೇಕಪ್ ಎಂದಿದ್ದಾರೆ.
ಸದ್ಯ ಬಿಗ್ ಬಾಸ್ ಶೋ ಬಂದ್!
ಮುಂದಿನ ದಿನಗಳಲ್ಲಿ ಇವರಿಬ್ಬರು ಒಂದಾಗುತ್ತಾರೆ, ಮತ್ತೆ ಜಗಳ ಆಡ್ತಾರಾ ಎಂದು ಕಾದು ನೋಡೋಣ ಅಂದರೆ ಬಿಗ್ ಬಾಸ್ ಕನ್ನಡ ಸೀಸನ್ 12 ಬಂದ್ ಆಗಿದೆ.
ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ನಡೆಯುತ್ತಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೆ ಮನರಂಜನಾ ಪಾರ್ಕ್ ನಡೆಸುತ್ತಿದ್ದಾರೆ ಎಂದು ಬಂದ್ ಮಾಡಲು ಆದೇಶ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯದ ನೀರನ್ನು ಪರಿಸರಕ್ಕೆ ಬಿಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಸ್ಟುಡಿಯೋ ಬಂದ್ ಮಾಡಿದ್ದಾರೆ. ಸದ್ಯ ಇಲ್ಲಿರುವ ಸ್ಪರ್ಧಿಗಳನ್ನು ಬೇರೆ ಕಡೆಗ ಶಿಫ್ಟ್ ಮಾಡಲಾಗಿದೆ. ಕಾನೂನು ಸಮರದಲ್ಲಿ ಯಾರು ಗೆಲ್ಲುತ್ತಾರೆ? ಶೋ ನಡೆಯತ್ತಾ ಎಂದು ಕಾದು ನೋಡಬೇಕಿದೆ. ಈ ಶೋನಲ್ಲಿ 17 ಸ್ಪರ್ಧಿಗಳು ಇರೋದು ಪ್ರಪಂಚಕ್ಕೆ ಕಾಣಿಸಿದರೂ ಕೂಡ, ಸಾಕಷ್ಟು ಜನರು ತೆರೆ ಹಿಂದೆ ಕೆಲಸ ಮಾಡುತ್ತಿದ್ದಾರೆ.
