- Home
- Entertainment
- TV Talk
- BBK 12 ಬಂದ್: ಬಿಗ್ ಬಾಸ್‌ಗೋಸ್ಕರ ಇವ್ರೆಲ್ಲ ಏನೆಲ್ಲ ತ್ಯಾಗ ಮಾಡಿ, ಕನಸು ಇಟ್ಕೊಂಡು ಬಂದಿದ್ರು ಗೊತ್ತಾ?
BBK 12 ಬಂದ್: ಬಿಗ್ ಬಾಸ್‌ಗೋಸ್ಕರ ಇವ್ರೆಲ್ಲ ಏನೆಲ್ಲ ತ್ಯಾಗ ಮಾಡಿ, ಕನಸು ಇಟ್ಕೊಂಡು ಬಂದಿದ್ರು ಗೊತ್ತಾ?
ಬಿಗ್ ಬಾಸ್ ಕನ್ನಡ 12 ಶೋ ಸದ್ಯ ಬಂದ್ ಆಗಿದೆ. ಪರಿಸರ ನಿಯಂತ್ರಣ ಮಂಡಳಿ ಅನುಮತಿ ಪಡೆಯದೆ ಮನೆ ನಿರ್ಮಾಣ ಮಾಡಿದ್ದಾರೆ, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಎಂದು ಬಂದ್ ಮಾಡಿಸಿದ್ದಾರೆ. ಈಗ ಸ್ಪರ್ಧಿಗಳೆಲ್ಲ ಮನೆಯಿಂದ ಹೊರಗಡೆ ಬಂದಿದ್ದಾರೆ. ಆದರೆ ಇದಕ್ಕಾಗಿ ಕಲಾವಿದರು ಮಾಡಿದ ತ್ಯಾಗ ಗೊತ್ತಾ?

Bigg Boss ಸ್ಪರ್ಧಿಗಳು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ವಾರದಲ್ಲೇ ಆರ್‌ಜೆ ಅಮಿತ್, ಕರಿಬಸಪ್ಪ ಅವರು ಎಲಿಮಿನೇಟ್ ಆಗಿದ್ದರು. ಈಗ ಉಳಿದ ಸ್ಪರ್ಧಿಗಳು ಕೂಡ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ಈ ಶೋಗೋಸ್ಕರ ಅವರು ಏನೆಲ್ಲ ತ್ಯಾಗ ಮಾಡಿದ್ದರು ಗೊತ್ತಾ?
ಮುಂದೆ ಏನು ಕಥೆ?
ಮಲ್ಲಮ್ಮ ಅವರು ಮತ್ತೆ ಬ್ಯೂಟಿಕ್‌ಗೆ ಹೋಗಿ ಕೆಲಸ ಮಾಡುತ್ತಾರೆ
ಅಶ್ವಿನಿ ಅವರು ಸಿನಿಮಾ, ಸೀರಿಯಲ್ ಎಂದು ಹೊಸ ಅವಕಾಶ ಹುಡುಕಿಕೊಳ್ಳಬೇಕು
ಕಾವ್ಯ ಶೈವ ಈಗಾಗಲೇ ಸಿನಿಮಾದಲ್ಲಿ ನಟಿಸಿದ್ದು, ಬೇರೆ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆಯಬೇಕು
ರಕ್ಷಿತಾ ಶೆಟ್ಟಿ ಕೂಡ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುತ್ತ, ಇನ್ನಷ್ಟು ಜಾಹೀರಾತು ಪ್ರಚಾರ ಮಾಡಬಹುದು.
ಸಿನಿಮಾ, ಸೀರಿಯಲ್ ಅವಕಾಶ ಸಿಗತ್ತಾ?
ಧ್ರುವಂತ್, ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ ಅವರು ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೆ ಬೇರೆ ಸಿನಿಮಾ, ಸೀರಿಯಲ್ ನಿರೀಕ್ಷೆಯಲ್ಲಿದ್ದರು.
ರಾಶಿಕಾ ಶೆಟ್ಟಿ ಅವರು ಬೇರೆ ಸಿನಿಮಾದಲ್ಲಿ ನಟಿಸಬೇಕು
ಮಾಳು ನಿಪನಾಳ ಅವರು ಹೊಸ ಹಾಡುಗಳನ್ನು ಮಾಡಬೇಕು
ಧ್ರುವಂತ್, ಸ್ಪಂದನಾ ಕೂಡ ಹೊಸ ಅವಕಾಶ ಹುಡುಕಿಕೊಳ್ಳಬೇಕಿದೆ
ಆರ್‌ಜೆ ಅಮಿತ್
ಆರ್ ಅಮಿತ್ ಅವರು ರೆಡಿಯೋ ಮಿರ್ಚಿ ಕನ್ನಡ ಎಫ್‌ಎಂನಲ್ಲಿ ಕೆಲಸ ಮಾಡುತ್ತಿದ್ದರು. ಬಿಗ್ ಬಾಸ್ ಶೋಗೋಸ್ಕರ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದರು. ಮೊದಲೇ ವಾರಕ್ಕೆ ಇವರು ಎಲಿಮಿನೇಟ್ ಆಗಿದ್ದರು.
ಅಶ್ವಿನಿ ಗೌಡ
ಅಶ್ವಿನಿ ಗೌಡ ಈಗಾಗಲೇ 100 ಸಿನಿಮಾಗಳಲ್ಲಿ ನಟಿಸಿದ್ದಾರೆ, ಅವರಿಗೆ ಆದಾಯದ ಸಮಸ್ಯೆ ಇಲ್ಲ. ಕುಟುಂಬದ ಉದ್ಯಮ, ಕನ್ನಡ ಪರ ಹೋರಾಟ ಎಂದು ಅವರು ಬ್ಯುಸಿ ಆಗುತ್ತಾರೆ. ಅವಕಾಶ ಸಿಕ್ಕಾಗ ಸೀರಿಯಲ್, ಸಿನಿಮಾದಲ್ಲಿ ನಟಿಸುತ್ತಾರೆ.
ಕಾಕ್ರೋಚ್ ಸುಧಿ
ಕಾಕ್ರೋಚ್ ಸುಧಿ ಅವರು ಒಂದಾದಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಬಿಡುವು ಮಾಡಿಕೊಂಡು ಬಿಗ್ ಬಾಸ್ ಶೋಗೆ ಬಂದಿದ್ದರು.
ಚಂದ್ರಪ್ರಭ
ಚಂದ್ರಪ್ರಭ ಅವರು ಸದ್ಯ ಯಾವುದೇ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೊರಗಡೆ ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ, ಬೇರೆ ಸೀರಿಯಲ್, ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಕಾಯಬೇಕು.
ಗಿಲ್ಲಿ ನಟ
ಗಿಲ್ಲಿ ನಟಗೂ ಕೂಡ ಈಗ ಯಾವುದೇ ಪ್ರಾಜೆಕ್ಟ್ ಇರಲಿಲ್ಲ. ಹಣದ ಸಮಸ್ಯೆಯಿಂದ ಬಿಗ್ ಬಾಸ್ ಮನೆಗೆ ಬಂದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಜಾಹ್ನವಿ
ಜಾಹ್ನವಿ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಗಿಸಿದ್ದರು, ಇದಾದ ಬಳಿಕ ಇವರ ಯುಟ್ಯೂಬ್ ಚಾನೆಲ್ ಕೂಡ ಇತ್ತು. ನಿರೂಪಣೆ, ಜಾಹೀರಾತುಗಳನ್ನು ಒಪ್ಪಿಕೊಳ್ಳುತ್ತಿದ್ದರು. ಇದಕ್ಕೆಲ್ಲ ಬ್ರೇಕ್ ಹಾಕಿ ದೊಡ್ಮನೆಗೆ ಬಂದಿದ್ದರು.
ಕರಿಬಸಪ್ಪ
ಕರಿಬಸಪ್ಪ ಅವರು ಬಿಗ್ ಬಾಸ್ ಶೋಗೆ ಹೋಗಬೇಕು ಎಂದು ಸಾಲ ಮಾಡಿ ಬಟ್ಟೆ ಖರೀದಿ ಮಾಡಿದ್ದರಂತೆ, ಚಿನ್ನವನ್ನು ಕೂಡ ಅಡವಿಟ್ಟಿದ್ದರಂತೆ. ಮೊದಲು ಅವರ ಬಳಿ ಅಷ್ಟು ಬಟ್ಟೆ ಇರಲಿಲ್ಲ, ಹೀಗಾಗಿ ಬಟ್ಟೆ ಖರೀದಿ ಮಾಡಿದ್ದರು.
ಸತೀಶ್
ಸತೀಶ್ ಅವರಿಗೆ ( satish cadaboms ) ಒಂದೇ ದಿನಕ್ಕೆ 67 ಲಕ್ಷ ರೂಪಾಯಿ ಸಿಗುವ ಕಾರ್ಯಕ್ರಮ ಇತ್ತು. ಅದನ್ನು ಕೂಡ ಅವರು ಬಿಟ್ಟು ಬಂದಿದ್ದರು. ಇನ್ನು ಬೇರೆ ಬೇರೆ ದೇಶಗಳಲ್ಲಿ ಸದ್ದು ಸುದ್ದಿ ಮಾಡಬೇಕು ಎನ್ನುವ ಉದ್ದೇಶ ಇತ್ತಂತೆ. ಮಟನ್ ತಿಂದು ಕೊಲೆಸ್ಟ್ರಾಲ್ ಕೂಡ ಜಾಸ್ತಿಯಾಗಿದ್ದು, ಕಡಿಮೆ ಮಾಡಿಕೊಳ್ಳಬೇಕು ಎನ್ನೋ ಉದ್ದೇಶ ಇತ್ತಂತೆ.
ಮಂಜುಭಾಷಿಣಿ
ಮಂಜುಭಾಷಿಣಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಂಗಾರಮ್ಮನ ಪಾತ್ರ ಮಾಡುತ್ತಿದ್ದರು. ಈ ಸೀರಿಯಲ್‌ನಲ್ಲಿ ಬಂಗಾರಮ್ಮ ಪಾತ್ರ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿತ್ತು. ಬಿಗ್ ಬಾಸ್ ಶೋಗೋಸ್ಕರ ಅವರು ಈ ಸೀರಿಯಲ್‌ನಿಂದ ಹೊರಗಡೆ ಬಂದಿದ್ದರು.