ಮಾಲಿನ್ಯ ನಿಯಂತ್ರಣ ಮಂಡಳಿಯ ಸುಪರ್ದಿಯಲ್ಲಿ ಬಿಗ್ ಬಾಸ್ ಮನೆ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು. ಇನ್ನೆಷ್ಟು ದಿನ ಮುಂದುವರಿಯುತ್ತದೆಯೋ ಎಂಬ ಚಿಂತೆ ಬಿಗ್ ಬಾಸ್ ಟೀಂ, ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ಕಾಡತೊಡಗಿತ್ತು. ಆದರೆ ಈಗ ಮೋಡ ಕವಿದ ವಾತಾವರಣ ತಿಳಿಯಾಗುವ ಕಾಲ ಸನ್ನಿಹಿತವಾಗಿದ್ಯಾ?

ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್!

ಕಳೆದ ಎರಡು ದಿನಗಳಿಂದ ಕನ್ನಡ ಕಿರಿತೆರೆ ಲೋಕ ಹಾಗೂ ವೀಕ್ಷಕರು ಸೇರಿದಂತೆ ಇಡೀ ರಾಜ್ಯಕ್ಕೆ ಗರಬಡಿದಂತೆ ಆಗಿದ್ದ ಸುದ್ದಿಗೀಗ ಫುಲ್‌ಸ್ಟಾಪ್ ಬಿದ್ದಿದೆ. ಅಂದರೆ, ಬಿಗ್ ಬಾಸ್ ಮನೆ ಜಾಲಿವುಡ್‌ ಮತ್ತೆ ಓಪನ್ (Jollywood Studio Re Open) ಆಗುವ ಶುಭ ಸೂಚನೆ ಸಿಕ್ಕಿದೆ. ಇದೀಗ ಜಾಲಿವುಡ್ ಸೀಲ್ ತೆರವಿಗೆ ಡಿಕೆ ಶಿವಕುಮಾರ್ (DCM DK Shivakumar) ಸೂಚನೆ ನಿಡಿದ್ದಾರೆ ಎಂಬ ಸುದ್ದಿ ಸಿಕ್ಕಿದೆ..

ಬೀಗ ಬಿದ್ದಿರುವ ಜಾಲಿವುಡ್ ಅನ್ನು ಮತ್ತೆ ಓಪನ್ ಮಾಡಲು ಬೆಂಗಳೂರು ದಕ್ಷಿಣ ಡಿಸಿ ಗೆ ಸೂಚನೆ ಕೊಡಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು x ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಜಾಲಿವುಡ್ ರೀ-ಓಪನ್ ಅಗುವ ಸುಳಿವು ನೀಡಿದ್ದಾರೆ. ಈ ಮೂಲಕ ಬಿಗ್‌ ಬಾಸ್ ಕನ್ನಡ ಸೀಸನ್ 12 ಶೋಗೆ ಹಾಗೂ ಬಿಗ್ ಬಾಸ್ ಪ್ರಿಯರ ಮುಖದಲ್ಲಿ ದೊಡ್ಡ ನಗು ಮೂಡಿದೆ. ಮುಂದಿನ ಹಂತಕ್ಕಾಗಿ ಕಾಯಲಾಗುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಸುಪರ್ದಿಯಲ್ಲಿ ಬಿಗ್ ಬಾಸ್ ಮನೆ?

ಮಾಲಿನ್ಯ ನಿಯಂತ್ರಣ ಮಂಡಳಿಯ ಸುಪರ್ದಿಯಲ್ಲಿ ಬಿಗ್ ಬಾಸ್ ಮನೆ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು. ಇದು ಹೀಗೇ ಇನ್ನೆಷ್ಟು ದಿನ ಮುಂದುವರಿಯುತ್ತದೆಯೋ ಎಂಬ ಚಿಂತೆ ಬಿಗ್ ಬಾಸ್ ಟೀಂ, ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ಕಾಡತೊಡಗಿತ್ತು. ಆದರೆ ಈಗ ಮೋಡ ಕವಿದ ವಾತಾವರಣ ತಿಳಿಯಾಗುವ ಕಾಲ ಸನ್ನಿಹಿತವಾಗಿದೆ ಎನ್ನಬಹುದು. ಮುಂದಿನ ಹಂತಕ್ಕೆ ಸದ್ಯವೇ ಬಿಗ್ ಬಾಸ್ ಕನ್ನಡ ಶೋ ಮುಂದುವರಿಯಬಹುದು.

ಅಡೆತಡೆಗಳು ಎದುರಾಗಬಹುದೇ?

ಆದರೆ.. ಈ ವಿಷಯಲ್ಲಿಯೂ ಹಲವು ಅಡೆತಡೆಗಳಖು ಎದುರಾಗಬಹುದೇ? ಕಾದು ನೋಡಬೇಕಾಗಿದೆ! ಕಾರಣ, ಈ ಬಗ್ಗೆ ಈ ಮೊದಲೇ ನರೇಂದ್ರಸ್ವಾಮಿ ಪಿಸಿಯಲ್ಲಿ ಹೇಳಿದ್ದಾರೆ. 'ಡಿಕೆ ಶಿವಕುಮಾರ್ ಅವರಿಗೆ ಬೀಗ ತೆರೆಸಲು ಅಧಿಕಾರ ಇಲ್ಲ, ಈ ಬಗ್ಗೆ ಡಿಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಡಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಈ ಅಧಿಕಾರ ಡಿಕೆಶಿಗೆ ಇಲ್ಲ' ಎಂದು ಇದನ್ನ ಸ್ಪಷ್ಟವಾಗಿ ನರೇಂದ್ರಸ್ವಾಮಿ ಪಿಸಿಯಲ್ಲೂ ಹೇಳಿದ್ದಾರೆ. ಹೀಗಾಗಿ ಯಾರ ಮಾತಿನಂತೆ ಅಲ್ಲಿ ಸದ್ಯಕ್ಕೆ ಏನೇನು ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬೆಳಿಗ್ಗೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಜಾಲಿವುಡ್ ಸ್ಟುಡಿಯೋಸ್‌ಗೆ 'ಇದೊಂದು ಬಾರಿ ಅನುಮತಿ ನೀಡುವಂತೆ' ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಖಚಿತಪಡಿಸಿದರು. ಒಮ್ಮೆ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ಕೊಡಿ ಎಂದಿದ್ದೇನೆ. ಉದ್ಯೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಡಿಸಿಎಂ ಹೇಳಿದ್ದರು. 

ಡಿಸಿ, ಎಸ್ಪಿಗಳಿಗೆ ನೇರ ಸೂಚನೆ:

ಕಾನೂನಾತ್ಮಕ ಅಡೆತಡೆಗಳ ಕುರಿತು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕೆಲವರು ದೂರು ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ನಾನೇ ಫೋನ್ ಮಾಡಿ ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ಹೇಳಿದ್ದೇನೆ. ಕಾನೂನನ್ನ ನೋಡಿ ಸಮಸ್ಯೆ ಆಗಿದ್ರೆ ಅದನ್ನು ಬಗೆಹರಿಸಿಕೊಡಲು ಅವಕಾಶ ಕೊಡಬೇಕು ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

ಮನರಂಜನೆಯ ಅಗತ್ಯವನ್ನು ಒತ್ತಿಹೇಳಿದ ಅವರು, 'ಬಿಗ್ ಬಾಸ್ ಆಗಲಿ, ಯಾವುದೇ ಆಗಲಿ ಮನರಂಜನೆ ಇರಬೇಕು. ಖಾಸಗಿಯವರು ಹೂಡಿಕೆ ಮಾಡಿ ಏನೋ ತಪ್ಪು ಮಾಡಿರುತ್ತಾರೆ, ಅದನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಇದು ನನ್ನ ಸಲಹೆ' ಎಂದು ಹೇಳಿದ್ದರು. ಆದರೆ, ಈಗ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮುಂದಿನ ಬೆಳವಣಿಗೆಯನ್ನುಕಾದು ನೋಡಬೇಕಿದೆ.

Scroll to load tweet…