Rakshitha Shetty Cooking Video: ರಕ್ಷಿತಾ ಅಡುಗೆ ಮಾಡುವ ಹಳೆಯ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಏನಿದೆ?, ಅದು ಈ ಲೆವೆಲ್‌ಗೆ ವೈರಲ್ ಆಗಲು ಕಾರಣವೇನು?. ಮುಂದೆ ಓದಿ...
ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೂ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ (Rakshita Shetty) ಎಷ್ಟು ಜನಪ್ರಿಯರಾಗಿದ್ದರು ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಅಂದಹಾಗೆ ಆರಂಭದಲ್ಲಿ ರಕ್ಷಿತಾ ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಇತರ ಸ್ಪರ್ಧಿಗಳು ಅವರನ್ನ ಎಲಿಮಿನೇಟ್ ಮಾಡಿದ್ದರು. ಆದರೆ ಎಲಿಮಿನೇಟ್ ಮಾಡಿದ್ದರೂ, ಬಿಗ್ ಬಾಸ್ ಆದೇಶದ ಮೇರೆಗೆ ರಕ್ಷಿತಾ ಕಳೆದ ವಾರ ಸೀಕ್ರೆಟ್ ರೂಮಿನಲ್ಲಿದ್ದರು.
ಇಷ್ಟು ದಿನ ಸೀಕ್ರೆಟ್ ರೂಮಿನಲ್ಲಿದ್ದ ರಕ್ಷಿತಾ ರೀ ಎಂಟ್ರಿ ನೋಡಿ ಮನೆಮಂದಿ ಒಂದು ಕ್ಷಣ ಶಾಕ್ ಆಗಿದ್ದರು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಅಂದ್ರೆ ರೀ ಎಂಟ್ರಿಗೂ ಮುನ್ನ ರಕ್ಷಿತಾ ಶೆಟ್ಟಿ 'ವಾರದ ಕತೆ ಕಿಚ್ಚನ ಜೊತೆʼ ಸಂಚಿಕೆಯಲ್ಲಿ ಭಾಗವಹಿಸಿದ್ದರು. ಆಗ ರಕ್ಷಿತಾ ಸುದೀಪ್ ಅವರನ್ನು ಭೇಟಿಯಾಗಿ, ತಮ್ಮ ಎಲಿಮಿನೇಷನ್ ಬಗ್ಗೆ ಆಡಿದ ಒಂದು ಮಾತು ಸದ್ಯ ಎಲ್ಲೆಡೆ ವೈರಲ್ ಆಗಿರುವುದು ನಿಮಗೂ ಗೊತ್ತೇ ಇದೆ. ವಾರಗಟ್ಟಲೇ ಸೀಕ್ರೆಟ್ ರೂಮ್‌ನಲ್ಲಿದ್ದು ರಕ್ಷಿತಾ ಫುಲ್ ಸ್ಟ್ರಾಂಗ್ ಆಗಿದ್ದರು. ಬಿಗ್‌ಬಾಸ್‌ನಲ್ಲಿದ್ದ ಸ್ಪರ್ಧಿಗಳೇನೋ ರಕ್ಷಿತಾ ರೀ-ಎಂಟ್ರಿ ನೋಡಿ ಶಾಕ್ ಆದ್ರೂ, ಆದ್ರೆ ನೆಟ್ಟಿಗರು ಮಾತ್ರ ಅವರ ಕಂ ಬ್ಯಾಕ್ ನೋಡಿ ಸಾಕಷ್ಟು ಖುಷಿಪಟ್ಟರು.
ವೈರಲ್ ಆಗಲು ಕಾರಣವೇನು?
ಇದೆಲ್ಲಾ ಒಂದೆಡೆಯಾದ್ರೆ, ರಕ್ಷಿತಾ ಅಡುಗೆ ಮಾಡುವ ಹಳೆಯ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಏನಿದೆ?, ಅದು ಈ ಲೆವೆಲ್‌ಗೆ ವೈರಲ್ ಆಗಲು ಕಾರಣವೇನು?. ಮುಂದೆ ಓದಿ...
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ರಕ್ಷಿತಾ ಕಪ್ಪು ಬಣ್ಣದ ಸಿಂಪಲ್ ಸೀರೆ ಧರಿಸಿ ಹರಿಯುತ್ತಿರುವ ಹಳ್ಳದ ಬಳಿ ತೆರಳಿ, ಅಲ್ಲಿ ಪ್ರಾನ್ಸ್ ಕ್ಲೀನ್ ಮಾಡಿ, ಪ್ರಾನ್ಸ್ ಫ್ರೈ ರೆಸಿಪಿ ತೋರಿಸಿದ್ದಾರೆ. ಈ ಶಾರ್ಟ್ ವಿಡಿಯೋಗೆ 'ಮಲ್ಪೆ ಪ್ರಾನ್ಸ್ ದ ಗಮ್ಮತ್ತು' ಎಂದು ಶೀರ್ಷಿಕೆ ಸಹ ಕೊಡಲಾಗಿದೆ. ರಕ್ಷಿತಾ ಅಡುಗೆಯನ್ನೇನೋ ಚೆನ್ನಾಗಿ ಮಾಡಿದ್ದಾರೆ. ವಿಡಿಯೋದಲ್ಲಿಯೂ ಪ್ರಾನ್ಸ್ ನೋಡಲು ಅದ್ಭುತವಾಗಿ ಕಾಣುತ್ತಿದೆ. ಆದ್ರೆ ಅವರು ಅಡುಗೆ ಆರಂಭಿಸುವಾಗ ಬೆಳಗ್ಗೆಯಾಗಿತ್ತು. ಅದನ್ನು ಮಾಡಿ ತಿನ್ನುವ ವೇಳೆಗೆ ಸಂಜೆಯಾಗಿದೆ. ಇದನ್ನೇ ಈಗ ಬೊಟ್ಟು ಮಾಡಿ ತೋರಿಸಿರುವ ನೆಟ್ಟಿಗರು ಫುಲ್ ಟ್ರೋಲ್ ಮಾಡ್ತಿದ್ದಾರೆ. ಕೆಲವರು ಮಾತ್ರ ರಕ್ಷಿತಾ ಬಗ್ಗೆ ಪಾಸಿಟಿವ್ ಆಗಿಯೇ ಕಾಮೆಂಟ್ಸ್ ಮಾಡಿದ್ದಾರೆ. ಎಷ್ಟೇ ಕೆಟ್ಟದಾಗಿ ಕಾಮೆಂಟ್ ಮಾಡಿದ್ರೂ ಅದ್ಯಾವುದನ್ನೂ ಹಚ್ಚಿಕೊಳ್ಳದೆ ತನ್ನ ಪಾಡಿಗೆ ತಾನು ರೀಲ್ಸ್ ಮಾಡುವ ರಕ್ಷಿತಾಗೆ ಸಪೋರ್ಟ್ ಮಾಡಿದ್ದಾರೆ. ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಸದ್ಯ ರಕ್ಷಿತಾ ಬಿಗ್‌ಬಾಸ್‌ಗೆ ಹೋದ ಮೇಲೆ ಅನೇಕ ವಿಡಿಯೋಗಳು ವೈರಲ್ ಆಗುತ್ತಿದ್ದು, ಅದರಲ್ಲಿ ಇದು ಒಂದೂ. ವಿಶೇಷವಾಗಿ ಈ ವಿಡಿಯೋ ಸಾಕಷ್ಟು ಟ್ರೋಲ್ ಆಗುತ್ತಿದ್ದು, ನೆಟ್ಟಿಗರ ಮಾಡಿರುವ ಕಾಮೆಂಟ್ಸ್ ಹೀಗಿದೆ ನೋಡಿ...
*ವಿಡಿಯೋ ಸ್ಟಾರ್ಟ್ ಮಾಡಿದಾಗ ಬೆಳಕು, ಮುಗಿಯುವಾಗ ಕತ್ತಲೆ.
*ಅಡುಗೆ ಆರಂಭ ಮಾಡುವಾಗ ಬೆಳಗ್ಗೆಯಾಗಿತ್ತು. ಮುಗಿಯುವ ವೇಳೆಗೆ ರಾತ್ರಿಯಾಗಿದೆ.
*ಸ್ಟಾರ್ಟ್ ಮಾಡಿದ್ದು ಮಾರ್ನಿಂಗ್, ಎಂಡ್ ಆದಾಗ ನೈಟ್.
*ಬೆಳಗ್ಗೆಯಿಂದ ಸಂಜೆತನಕ ಅಡುಗೆ ಮಾಡಿದ್ದೇ ಮಾಡಿದ್ದು.
*ಮಾರ್ನಿಂಗ್ ಟು ನೈಟ್, ಸೂಪರ್ ಬ್ಯಾಕ್.
*ವಾಟ್ ಎ ಫಾಸ್ಟ್ ಕುಕ್ಕಿಂಗ್. ಅಂತೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಸದ್ಯ ರಕ್ಷಿತಾ ಬಿಗ್‌ಬಾಸ್‌ಗೆ ಹೋದ ಮೇಲೆ ಸಾಕಷ್ಟು ಸುದ್ದಿಯಲ್ಲಿದ್ದು, ಅವರೇನೇ ಮಾಡಿದ್ರೂ ವಿಡಿಯೋ ವೈರಲ್ ಆಗ್ತಿದೆ. ಸದ್ಯ ಈ ಪ್ರಾನ್ಸ್ ರೆಸಿಪಿ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ನೀವು ಪ್ರಾನ್ಸ್ ರೆಸಿಪಿ ಮಾಡೋದನ್ನ ಹೇಗೆಂದು ಕಲಿಯಬಹುದು!