- Home
- Entertainment
- TV Talk
- BBK 12: ಕಿಚ್ಚ ಸುದೀಪ್ ಮುಂದೆ ಸ್ವಾತಿಮುತ್ತು, ಆಮೇಲೆ ಮಾರಿಮುತ್ತು: ಜಾಹ್ನವಿ ವಿರುದ್ಧ ಸಿಡಿದೆದ್ದ ವೀಕ್ಷಕರು
BBK 12: ಕಿಚ್ಚ ಸುದೀಪ್ ಮುಂದೆ ಸ್ವಾತಿಮುತ್ತು, ಆಮೇಲೆ ಮಾರಿಮುತ್ತು: ಜಾಹ್ನವಿ ವಿರುದ್ಧ ಸಿಡಿದೆದ್ದ ವೀಕ್ಷಕರು
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಮಧ್ಯ ರಾತ್ರಿ ರಕ್ಷಿತಾ ಶೆಟ್ಟಿ ಬಾತ್‌ರೂಮ್ ಕ್ಯಾಮರಾ ಮುಂದೆ ರಾರಾ ಎಂದು ಹಾಡಿ ಗೆಜ್ಜೆ ಕಟ್ಟಿ ಕುಣಿದರು ಎಂದು ಜಾಹ್ನವಿ, ಕಿಚ್ಚ ಸುದೀಪ್ ಮೊದಲ ಫಿನಾಲೆಯಲ್ಲಿ ತರಾಟೆಗೆ ತೆಗೆದುಕೊಂಡರು. ಆದರೆ ಜಾಹ್ನವಿಗೆ ಬುದ್ಧಿ ಬಂದಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ.

ಪರ್ಸನಲ್ ಅಟ್ಯಾಕ್
ಅಶ್ವಿನಿ ಗೌಡ ಅವರಂತೂ ರಕ್ಷಿತಾ ಶೆಟ್ಟಿ ಬಗ್ಗೆ ತೀರ ಪರ್ಸನಲ್ ಅಟ್ಯಾಕ್ ಕೂಡ ಮಾಡಿದರು. ಇದರ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದರು. She is Nothing But S, ಈಡಿಯಟ್, ಕಾರ್ಟೂನ್, ನಿನ್ನ ಬಟ್ಟೆ ನೋಡಿದ್ರೆ ಗೊತ್ತಾಗತ್ತೆ ಎಲ್ಲಿಂದ ಬಂದಿದ್ದೀಯಾ ಅಂತೆಲ್ಲ ಅಶ್ವಿನಿ ಗೌಡ ಅವರು ರಕ್ಷಿತಾ ಹೇಳಿದರು. ಈ ಬಗ್ಗೆಯೂ ಕಿಚ್ಚ ಸುದೀಪ್ ತಿಳಿ ಹೇಳಿದ್ದರು.
ರಕ್ಷಿತಾರನ್ನು ಕೆಣಕಿದ ಜಾಹ್ನವಿ
ಇನ್ನು ಮನೆಯೊಳಗಡೆ ಜಾಹ್ನವಿ ಅವರು ರಕ್ಷಿತಾರನ್ನು ಇಮಿಟೇಟ್ ಮಾಡಿ ಅವರನ್ನು ಟ್ರಿಗರ್ ಆಗುವ ಹಾಗೆ ಮಾಡಿದ್ದರು. ಸುಮ್ಮನೆ ಜಾಹ್ನವಿ ಕೆಣಕಿದ್ದು, ಅಲ್ಲಿದ್ದ ಸ್ಪರ್ಧಿಗಳಿಗೂ ಕೂಡ ಇಷ್ಟ ಆಗಿರಲಿಲ್ಲ.
ಮತ್ತೆ ನಕ್ಕಿದ ಜಾಹ್ನವಿ
ಕಿಚ್ಚ ಸುದೀಪ್ ಅವರು ತಿಳಿಹೇಳಿದ ಬಳಿಕವೂ ಜಾಹ್ನವಿ ಅವರು ನಗುತ್ತಲೇ ಇದ್ದರು. ಗಿಲ್ಲಿ ನಟ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಸ್ಟೋರ್ ರೂಮ್‌ಗೆ ಹೋಗಿ ಫೋಟೋ ತಗೊಂಡು ಬನ್ನಿ ಎಂದು ಸುದೀಪ್ ಹೇಳಿದ್ದರು. ಸುದೀಪ್ ಹೇಳಿದ ಮಾತು ಕೇಳಿ ಜಾಹ್ನವಿ, ಅಶ್ವಿನಿ ಅವರು ಸ್ಟೋರ್ ರೂಮ್ ಒಳಗಡೆ ಹೋದರು. ಆಮೇಲೆ ಫೋಟೋ ತೋರಿಸೋದು ಬೇಡ ಎಂದು ಇಬ್ಬರೂ ನಕ್ಕಿದ್ದಾರೆ.
ನಿಮ್ಮ ತಮಾಷೆ, ಬೇರೆಯವ್ರಿಗೆ ಕಣ್ಣೀರು
ಇಷ್ಟು ಸೀರಿಯಸ್ ವಿಷಯ ಇದ್ದಾಗಲೂ ಜಾಹ್ನವಿ ಅವರು ನಕ್ಕಿರೋದು ಸುದೀಪ ಗಮನಕ್ಕೆ ಬಂದಿತ್ತು. ಅದನ್ನು ಅವರು ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಆ ರೀತಿ ಮಾತನಾಡಿದ್ದಕ್ಕೆ ನಾವು ಹಾಗೆ ಮಾತಾಡಿದೆವು ಎಂದು ಜಾಹ್ನವಿ, ಅಶ್ವಿನಿ ಸಮರ್ಥನೆ ಮಾಡಿದರು. ತಮಾಷೆಗೆ ಶುರು ಮಾಡಿದ್ದು, ಆದರೆ ರಕ್ಷಿತಾ ವ್ಯಕ್ತಿತ್ವಕ್ಕೆ ಸಮಸ್ಯೆ ಆಗುತ್ತಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಜಾಹ್ನವಿಗೆ ಅಹಂಕಾರ
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗಿದ್ದು, ಜಾಹ್ನವಿ ಅವರಿಗೆ ಅಹಂಕಾರ ಜಾಸ್ತಿ, ಕಿಚ್ಚ ಸುದೀಪ್ ಬುದ್ಧಿ ಹೇಳಿದ್ದರೂ ಕೂಡ ನಗುತ್ತಿದ್ದರು. ಬುದ್ಧಿಯೇ ಬಂದಿಲ್ಲ ಎಂದು ಕೂಡ ಕಾಮೆಂಟ್ ಮಾಡಲಾಗುತ್ತಿದೆ.
ಆಮೇಲೆ ಮಾರಿಮುತ್ತು
ಜಾಹ್ನವಿ, ಅಶ್ವಿನಿ ಗೌಡ ಅವರು ಕಿತಾಪತಿ ಹೆಂಗಸರು, ಇದನ್ನು ನಾನು ಮೊದಲೇ ಹೇಳಿದ್ದೆ, ಅದನ್ನು ಯಾರೂ ನಂಬಿರಲಿಲ್ಲ, ಈಗ ನಂಬುವ ಸಮಯ ಬಂದಿದೆ. ನಿಮ್ಮ ಮುಂದೆ ಇವರು ಸ್ವಾತಿಮುತ್ತು ಥರ ಇರ್ತಾರೆ, ನೀವು ಹೋದ್ಮೇಲೆ ಮಾರಿಮುತ್ತು ಆಗ್ತಾರೆ ಎಂದು ಗಿಲ್ಲಿ ನಟ ಹೇಳಿದ್ದಾರೆ.