Amruthadhaare Kannada Serial Episode: ಶಕುಂತಲಾಳ ಕುತಂತ್ರದಿಂದಾಗಿ ತನ್ನ ಮಗುವಿಗೆ ಅಪಾಯವಿದೆ ಎಂದು ಭಾವಿಸಿ ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ತನ್ನ ಮಗುವನ್ನು ರಕ್ಷಿಸಿಕೊಳ್ಳಲು ಹೋರಾಡುವ ಬದಲು ಮನೆ ಬಿಟ್ಟು ಹೋದ ಭೂಮಿಕಾಳ ನಿರ್ಧಾರ ಸರಿಯೇ?

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ನನಗೆ ಹೆರಿಗೆಯಾಗುವಾಗ ಇನ್ನೋರ್ವ ಮಗಳು ಕೂಡ ಹುಟ್ಟಿದ್ದಳು, ಅದನ್ನು ಶಕುಂತಲಾ ಕಿಡ್ನ್ಯಾಪ್‌ ಮಾಡಿ, ಕಾಡಿನಲ್ಲಿ ಬಿಟ್ಟಳು. ಈಗ ನನಗೂ, ನನ್ನ ಮಗನಿಗೂ ಅಪಾಯ ತರುತ್ತಾಳೆ ಎಂದು ಹೆದರಿ ಭೂಮಿಕಾ ಮನೆ ಬಿಟ್ಟು ಹೋದಳು.

ಮಾತಿನಲ್ಲೇ ಚಳಿ ಬಿಡಿಸಿದ್ದ ಭೂಮಿಕಾ!

ಗೌತಮ್‌ ಬಳಿ ಸಾಕಷ್ಟು ಬಾರಿ ಶಕುಂತಲಾ ಏನು ಎಂದು ಹೇಳಿದರೂ ಕೂಡ ಅವನು ನಂಬಲಿಲ್ಲ. ಈಗಾಗಲೇ ಸಾಕಷ್ಟು ಬಾರಿ ತನ್ನ ವಿರುದ್ಧ ಕತ್ತಿ ಮಸೆದಿದ್ದ ಶಕುಂತಲಾಗೆ ಭೂಮಿ ಮಾತಿನಲ್ಲಿ ಚಳಿ ಬಿಡಿಸಿದ್ದಳು. ಆದರೆ ಈ ಬಾರಿ ಮಾತ್ರ ಅವಳು ಹೇಡಿಯಂತೆ ಮನೆ ಬಿಟ್ಟು ಹೊರಟು ಹೋದಳು. ತನ್ನ ಜೊತೆ ಬರಲು ರೆಡಿಯಿದ್ದ ಮಲ್ಲಿಯನ್ನು ಕೂಡ ಬಿಟ್ಟು, ಅವಳು ಯಾರಿಗೂ ಹೇಳದೆ ಹೊರಟು ಹೋಗಿದ್ದಾಳೆ.

ಆಸ್ತಿಗೋಸ್ಕರ ನಾಟಕ ಮಾಡಿರೋ ಶಕುಂತಲಾ

ಭೂಮಿಕಾಗೆ ಇನ್ನೊಂದು ಮಗು ಹುಟ್ಟಿರೋ ವಿಷಯ ಗೊತ್ತಾಗಿದೆ ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಆದರೆ ಈ ಮಗುವಿಗೂ ಅಪಾಯ ಇದೆ, ಶಕುಂತಲಾಳಿಂದಲೇ ಅಪಾಯ ಇದೆ ಎನ್ನೋ ಕಾರಣಕ್ಕೆ ಅವಳು ಮನೆ ಬಿಟ್ಟು ಹೋಗಿರೋದು ಗೌತಮ್‌ಗೆ ಅರ್ಥವಾಗಿಲ್ಲ. ಆದರೆ ಶಕುಂತಲಾ ಆಸ್ತಿಗೋಸ್ಕರ ಇಷ್ಟೆಲ್ಲ ನಾಟಕ ಮಾಡಿದ್ದಾಳೆ ಎನ್ನೋದು ಗೌತಮ್‌ಗೆ ಈಗ ಗೊತ್ತಾಗಿದೆ.

ಭೂಮಿಕಾ ಏನು ಮಾಡಬಹುದಿತ್ತು?

ಹೋರಾಡಿ ಗೆಲ್ಲಬೇಕು, ಇಲ್ಲವೇ ಹೋರಾಡಬೇಕು ಎಂದು ಹೇಳುತ್ತಿದ್ದ ಭೂಮಿಕಾ, ಈಗ ಹೋರಾಟವೇ ಮಾಡದೆ ಹೊರನಡೆದಿದ್ದಾಳೆ. ಕೊನೇ ಬಾರಿ ಗೌತಮ್‌ಗೆ ಶಕುಂತಲಾಳ ಅಸಲಿ ಬಣ್ಣದ ಬಗ್ಗೆ ಹೇಳಬಹುದಿತ್ತು, ಕಾನೂನು ಹೋರಾಟ ಮಾಡಬಹುದಿತ್ತು, ಈಗಾಗಲೇ ತನ್ನ ಜೀವವನ್ನು ಉಳಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿದ ಅವಳು, ಮಗಳ ಹುಡುಕಾಟ ಮಾಡಬಹುದಿತ್ತು, ಗೌತಮ್‌ ಬಳಿ ಮಗಳ ಬಗ್ಗೆ ಕೇಳಬಹುದಿತ್ತು, ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆದುಕೊಟ್ಟು ಬುದ್ಧಿ ಕಲಿಸಬಹುದಿತ್ತು. ಇಷ್ಟೆಲ್ಲ ಅವಕಾಶಗಳು ಇರುವಾಗ, ಭೂಮಿ ಮನೆ ಬಿಟ್ಟು ಹೋಗಿದ್ದು ಹೇಡಿತನದ ಕೆಲಸ.

ಭೂಮಿಗೂ, ಮಗನಿಗೂ ಪ್ರೀತಿ ಸಿಗೋದಿಲ್ಲ

ಮಗುವನ್ನು ಉಳಿಸಿಕೊಳ್ಳೋದು ಸರಿ, ಆದರೆ ಇದಕ್ಕೆ ತಕ್ಕಂತೆ ಬೇರೆ ದಾರಿ ಹುಡುಕಿಕೊಳ್ಳಬಹುದಿತ್ತು. ಮನೆ ಬಿಟ್ಟು ಹೋದರೆ ಶಕುಂತಲಾ ಇನ್ನಷ್ಟು ಮೆರೆಯಲು ಅವಕಾಶ ಮಾಡಿಕೊಟ್ಟ ಹಾಗೆ ಆಗುವುದು. ಭೂಮಿಕಾ ಈಗ ಎಲ್ಲೋ ಹೋಗಿ ಮಗನ ಜೊತೆ ಬದುಕೋದು, ಮಗನನ್ನು ಸಾಕೋದು ನಿಜಕ್ಕೂ ಬೇಸರದ ವಿಷಯ. ಇದರಿಂದ ಆ ಮಗನಿಗೂ ಕೂಡ ತಂದೆ ಪ್ರೀತಿ ಸಿಗೋದಿಲ್ಲ, ಮನೆಯವರ ಪರಿಚಯವೂ ಇರೋದಿಲ್ಲ, ಪ್ರೀತಿತೂ ಸಿಗೋದಿಲ್ಲ. ಭೂಮಿ ಕೂಡ ತನ್ನ ತಂದೆ-ತಾಯಿ, ಒಡಹುಟ್ಟಿದವರು, ಗಂಡನಿಂದ ದೂರ ಇದ್ದು ಜೀವನ ಮಾಡೋದು ಎಷ್ಟು ಸರಿ?

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಜಯದೇವ್- ರಾಣವ್‌ ಗೌಡ

ಶಕುಂತಲಾ- ವನಿತಾ ವಾಸು