Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್‌ ಹಾಗೂ ಗೌತಮ್‌ ಸಮಯ ಕಳೆಯುತ್ತಿರೋದು ಭೂಮಿ ಕಣ್ಣಿಗೆ ಬಿದ್ದಿದೆ. ಮುಂದೆ ಏನಾಗುವುದು? ಗೌತಮ್‌ ಹಾಗೂ ಭೂಮಿಕಾ ಇನ್ನಷ್ಟು ದೂರ ಆಗ್ತಾರಾ? 

“ನನ್ನಿಂದ, ನನ್ನ ಮಗನಿಂದ ನೀವು ದೂರ ಇರಿ, ಇಲ್ಲ ಅಂದರೆ ನನ್ನ ನಿರ್ಧಾರ ಬೇರೆಯೇ ಆಗಿರುತ್ತದೆ” ಎಂದು ಅಮೃತಧಾರೆ ಧಾರಾವಾಹಿಯಲ್ಲಿ ಈಗಾಗಲೇ ಗೌತಮ್‌ಗೆ ಭೂಮಿ ಎಚ್ಚರಿಕೆ ಕೊಟ್ಟಿದ್ದಾಳೆ. ಆದರೆ ಗೌತಮ್‌ ಮಾತ್ರ ಭೂಮಿ ತನ್ನನ್ನು ದ್ವೇಷ ಮಾಡೋಕೆ ಬೇರೆ ಕಾರಣವೇ ಎಂದು ನಂಬಿದ್ದಾನೆ. ಇಂದಲ್ಲ, ನಾಳೆ ಭೂಮಿಕಾ ಮನಸ್ಸು ಬದಲಾಯಿಸುತ್ತಾರೆ, ಮಗನ ಜೊತೆ ಬದುಕಬಹುದು ಎಂದು ಅವನು ನಂಬಿದ್ದಾನೆ. ಹೀಗಿರುವಾಗ ಭೂಮಿಕಾಗೆ ಸತ್ಯ ಗೊತ್ತಾಗಿದೆ.

ಭೂಮಿಯ ನಾಟಕ

ಹೌದು, ಗೌತಮ್‌ ಕಂಡರೆ ಭೂಮಿಗೆ ತುಂಬ ಇಷ್ಟ. ನನ್ನ ಗಂಡ ನನ್ನ ಜೊತೆಗಿದ್ದರೆ ಶಕುಂತಲಾ ಅವನಿಗೆ ಅಪಾಯ ಮಾಡ್ತಾಳೆ ಎಂದು ದ್ವೇಷ ಮಾಡ್ತೀನಿ ಅಂತ ಗೌತಮ್‌ ಬಳಿ ಸುಳ್ಳು ಹೇಳಿದ್ದಾಳೆ. ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರೋ ವಿಚಾರವನ್ನು ಹೇಳಿಲ್ಲ ಅಂತ ಭೂಮಿಕಾ ದೂರ ಆದಳು ಅಂತ ಗೌತಮ್‌ ನಂಬಿಕೊಂಡಿದ್ದಾನೆ.

ಕ್ಯಾಬ್‌ ಡ್ರೈವರ್‌ ಆದ ಗೌತಮ್

ಡ್ರೈವರ್‌ ಆಗಿ ಊರೂರು ಅಲೆದ ಗೌತಮ್‌ಗೆ ಭೂಮಿಕಾ, ಮಗನನ್ನು ಹುಡುಕೋದು ದೊಡ್ಡ ಕೆಲಸ ಆಗಿತ್ತು. ಕೊನೆಗೂ ಕುಶಾಲನಗರದಲ್ಲಿ ಭೂಮಿಕಾ-ಗೌತಮ್‌ ಭೇಟಿಯಾಗಿದೆ. ಗೌತಮ್‌ ಈಗ ಮಗನನ್ನು ನೋಡಿದ್ದಾನೆ. ಮಗನಿಗೆ ತಾನು ಕ್ಯಾಬ್‌ ಡ್ರೈವರ್‌ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಭೂಮಿಕಾಳಿಂದ ದೂರ ಆಗಿದ್ದಾನೆ.

ಮಗನ ಜೊತೆ ಗೌತಮ್‌ ಆಟ

ಭೂಮಿಗೆ ಗೊತ್ತಾಗದ ಹಾಗೆ ಮಗ ಆಕಾಶ್‌ನನ್ನು ಭೇಟಿ ಮಾಡೋದು, ಅವನ ಜೊತೆ ಆಟ ಆಡೋದು, ಜನ್ಮದಿನ ಎಂದು ಅವನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗೋದು, ಅವನ ಜೊತೆ ಆಟ ಆಡೋದು ಇದೇ ಕೆಲಸವಾಗಿದೆ. ಮಗನ ಜೊತೆ ಅವನಿಗೆ ಸಮಯ ಕಳೆಯೋದು ಅಂದರೆ ತುಂಬ ಇಷ್ಟ. ಆಕಾಶ್‌ ಥೇಟ್‌ ಅಪ್ಪನ ಹಾಗೆಯೇ…ಅಪ್ಪನಂತೆ ಅವನು ತಿಂಡಿಪೋತ, ಐಸ್‌ಕ್ರೀಂ, ಗುಲಾಬ್‌ ಜಾಮೂನ್‌ ಅಂದ್ರೆ ಇಬ್ಬರಿಗೂ ಇಷ್ಟ.

ಆಕಾಶ್‌ನಿಗೂ ಡೌಟ್‌

ತನ್ನ ಮಗ ಆಕಾಶ್‌ ಇವನೇ ಎಂದು ಗೌತಮ್‌ಗೆ ಗೊತ್ತಾಗಿದೆ. ಆಗಿನಿಂದ ಅವನು ಆಕಾಶ್‌ನನ್ನು ತುಂಬ ಮುದ್ದು ಮಾಡ್ತಾನೆ, ಪ್ರೀತಿ ಮಾಡ್ತಾನೆ. ಇತ್ತೀಚೆಗೆ ಗೌತಮ್‌ ವರ್ತನೆ ಬದಲಾಗಿದೆ ಎಂದು ಆಕಾಶ್‌ಗೆ ಅನಿಸಿದೆ. “ನೀವು ಯಾಕೆ ಬದಲಾಗಿದ್ದೀರಾ? ಏನಾಗಿದೆ ಸರ್‌ ನಿಮಗೆ? ನನ್ನ ಮಮ್ಮಿ ಹೇಗೆ ಹಗ್‌ ಮಾಡ್ತಾರೋ ಹಾಗೆ, ಎಷ್ಟು ಪ್ರೀತಿ ಮಾಡ್ತಾರೋ, ಹಾಗೆ ಪ್ರೀತಿ ಮಾಡ್ತೀರಾ” ಅಂತ ಅವನು ಗೌತಮ್‌ಗೆ ಹೇಳಿದ್ದಾನೆ. ಆಗ ಗೌತಮ್‌, “ನಾನು ಬದಲಾಗಿಲ್ಲ” ಅಂತ ಹೇಳಿದ್ದಾನೆ. ಆಕಾಶ್‌, “ನೀವು ನನ್ನನ್ನು ಎಷ್ಟು ಪ್ರೀತಿ ಮಾಡ್ತೀರಾ? ಇನ್ನು ನಿಮ್ಮ ನಿಜವಾದ ಮಗನನ್ನು ಎಷ್ಟು ಪ್ರೀತಿ ಮಾಡ್ತೀರಾ?” ಅಂತ ಆಕಾಶ್‌ ಹೇಳಿದ್ದಾನೆ. ಅದು ಭೂಮಿ ಕಣ್ಣಿಗೆ ಬಿದ್ದಿದೆ. ಆಕಾಶ್-ಗೌತಮ್‌ ಅಪ್ಪಿಕೊಂಡಿದ್ದನ್ನು ಭೂಮಿಕಾ ನೋಡಿದ್ದಾಳೆ. ಅಷ್ಟೇ ಅಲ್ಲದೆ ಕಣ್ಣೀರು ಹಾಕಿದ್ದಾಳೆ. ಅದಾದ ಬಳಿಕ ಭೂಮಿ ತನ್ನನ್ನು ನೋಡುತ್ತಿದ್ದಾಳೆ ಅಂತ ಭೂಮಿ ಕೂಡ ನೋಡಿದಳು. ಅಲ್ಲಿಗೆ ಆಕಾಶ್‌-ಗೌತಮ್‌ ಭೇಟಿಯಾಗೋದು ಕಷ್ಟ ಇದೆ. ಇದೇ ವಿಚಾರಕ್ಕೆ ಮತ್ತೆ ಗೌತಮ್‌ ಬಳಿ ಭೂಮಿ ಜಗಳ ಮಾಡಲೂಬಹುದು. ಇವರಿಬ್ಬರು ಒಂದಾಗೋದು ಮತ್ತೆ ಕಷ್ಟ ಇದೆ. ಒಟ್ಟಿನಲ್ಲಿ ಮುಂದೆ ಏನಾಗುವುದೋ ಏನೋ!

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಆಕಾಶ್-‌ ದುಷ್ಯಂತ್‌ ಚಕ್ರವರ್ತಿ