- Home
- Entertainment
- TV Talk
- Amruthadhaare Serial: ರೆಸಾರ್ಟ್ ರಾಜಕೀಯ ಮಾಡಲು ಮುಂದಾದ ಗೌತಮ್; ಮಲ್ಲಿ ಕೈಕೊಟ್ಟಳು, ಆಕಾಶ್ ಕಥೆ?
Amruthadhaare Serial: ರೆಸಾರ್ಟ್ ರಾಜಕೀಯ ಮಾಡಲು ಮುಂದಾದ ಗೌತಮ್; ಮಲ್ಲಿ ಕೈಕೊಟ್ಟಳು, ಆಕಾಶ್ ಕಥೆ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಬೇರೆ ಬೇರೆಯಾಗಿದ್ದಾರೆ. ಆದರೆ ಇವರ ಮಗನೇ ಇವರನ್ನು ಒಂದಾಗಿಸುವ ಹಾಗೆ ಕಾಣ್ತಿದೆ. ಈ ಎಪಿಸೋಡ್‌ಗಳನ್ನು ನೋಡಿ ವೀಕ್ಷಕರು ಕೂಡ ವಿಷ್ಣುವರ್ಧನ್‌ರ ಸಿನಿಮಾವೊಂದನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಗೌತಮ್, ಭೂಮಿ ಸೇತುವೆ ಆಗಿದ್ದಾರೆ
ಭೂಮಿ, ಗೌತಮ್‌ಗೆ ಮಗಳು ಹುಟ್ಟಿದ್ದಳು, ಕೆಲವೇ ಕ್ಷಣಗಳಲ್ಲಿ ಕಿಡ್ನ್ಯಾಪ್ ಆಗಿದ್ದಳು. ಈ ವಿಚಾರವನ್ನು ನಾನು ಮುಚ್ಚಿಟ್ಟಿದ್ದಕ್ಕೆ ಪತ್ನಿ ಭೂಮಿಕಾ ದ್ವೇಷ ಮಾಡುತ್ತಿದ್ದಾಳೆ ಎಂದು ಗೌತಮ್ ಭಾವಿಸಿದ್ದಾನೆ. ಈಗ ಮಲ್ಲಿ ಬಳಿ ಅವನು ಎಲ್ಲವನ್ನು ಕೇಳಿದರೂ ಕೂಡ ಅವನು, ಬಾಯಿಬಿಡಲಿಲ್ಲ. ಈಗ ಇವರಿಬ್ಬರು ಒಂದಾಗಲು ಗೌತಮ್, ಭೂಮಿ ಸೇತುವೆ ಆಗಿದ್ದಾರೆ.
ಈ ವಿಷಯ ಭೂಮಿಗೆ ಗೊತ್ತೇ ಇಲ್ಲ
ಭೂಮಿಗೆ ಹೆರಿಗೆ ಆಗುವಾಗ ಅವಳಿ ಮಕ್ಕಳು ಹುಟ್ಟಿದ್ದರು. ಮೊದಲು ಮಗಳು ಹುಟ್ಟಿದ್ದಳು, ಆದರೆ ಅವಳು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಆ ಮಗುವನ್ನು ಗೌತಮ್ ಮಲಸಹೋದರ ಜಯದೇವ್ ಯಾರಿಗೂ ಗೊತ್ತಿಲ್ಲದ ಹಾಗೆ ಕದ್ದೊಯ್ದನು. ಆಮೇಲೆ ಯಾವುದೋ ವಸ್ತು ಎಸೆಯುವಂತೆ ಕಾಡಿನಲ್ಲಿ ಬಿಸಾಕಿನು. ತನ್ನ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇರೋದು, ಮಗಳು ಹುಟ್ಟಿದ್ದು, ಆಮೇಲೆ ಕಿಡ್ನ್ಯಾಪ್ ಆಗಿದ್ದು, ಇದ್ಯಾವುದೂ ಗೌತಮ್ ಮಲತಾಯಿ ಶಕುಂತಲಾ, ಆನಂದ್, ಗೌತಮ್, ಜೊತೆಗೆ ಜಯದೇವ್ ಬಿಟ್ಟರೆ, ಉಳಿದವರಿಗೆ ಯಾರಿಗೂ ಗೊತ್ತಿರಲಿಲ್ಲ. ಆಮೇಲೆ ಮಗ ಹುಟ್ಟಿದನು.
ಆ ಮಗಳು ಎಲ್ಲಿ ಹೋದಳೋ?
ಸಾಕಷ್ಟು ಬಾರಿ ಭೂಮಿಕಾ, ಗೌತಮ್‌ನನ್ನು ದೂರ ಮಾಡಲು ಶಕುಂತಲಾ ಪ್ರಯತ್ನಪಟ್ಟಿದ್ದಳು. ಆಮೇಲೆ ಅವಳ ಮಗನನ್ನು ಕೂಡ ಟಾರ್ಗೆಟ್ ಮಾಡಿ ಸಾಯಿಸಬೇಕು ಅಂತಿದ್ದಳು. ಆಗೆಲ್ಲ ಭೂಮಿಕಾ ಸರಿಯಾಗಿ ತಿರುಗೇಟು ಕೊಡುತ್ತಿದ್ದಳು. ಶಕುಂತಲಾ ಮತ್ತೊಮ್ಮೆ ಕುತಂತ್ರ ಮಾಡಿದ್ದಳು. ಸರಿಯಾದ ಟೈಮ್ ನೋಡಿ ಈ ವಿಷಯವನ್ನು ಭೂಮಿಗೆ ಹೇಳಿದ್ದಳು. “ನಿನಗೆ ಮಗಳು ಹುಟ್ಟಿರುವ ವಿಷಯವನ್ನು ನಿನ್ನ ಗಂಡ ಗೌತಮ್ ನಿನ್ನಿಂದ ಬಚ್ಚಿಟ್ಟಿದ್ದಾನೆ. ನಾವೇ ಆ ಮಗುವನ್ನು ಕಾಡಿನಲ್ಲಿ ಬಿಸಾಕಿದ್ದೇವೆ. ಆ ಮಗುವನ್ನು ಆಗಲೇ ಯಾವುದೋ ಹುಲಿಯೋ, ಚಿರತೆ, ಸಿಂಹವೋ ತಿಂದಿರುತ್ತದೆ. ನಿನ್ನವರು ನಿಜವಾಗಿಯೂ ಚೆನ್ನಾಗಿರಬೇಕು ಅಂದರೆ ನೀನು ಮನೆ ಹಾಗೂ ಮನೆಯವರನ್ನು ಬಿಟ್ಟು ದೂರ ಹೋಗಬೇಕು” ಎಂದು ಶಕುಂತಲಾ ಬ್ಲ್ಯಾಕ್‌ಮೇಲ್ ಮಾಡಿದ್ದಳು.
ಆಕಾಶ್, ಗೌತಮ್ ಭೇಟಿ
ಹೀಗಾಗಿ ಭೂಮಿ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಐದು ವರ್ಷದ ಬಳಿಕ ಗೌತಮ್, ಭೂಮಿ ಭೇಟಿಯಾಗಿದ್ದಾರೆ. ಗೌತಮ್ ಚೆನ್ನಾಗಿರಬೇಕು ಅಂತ ಅವನ ಮುಂದೆ ಭೂಮಿ, ನಿಮ್ಮನ್ನು ನಾನು ದ್ವೇಷಸ್ತೀನಿ, ದಯವಿಟ್ಟು ದೂರ ಇರಿ ಅಂತ ಹೇಳಿದ್ದಾಳೆ.
ಭೂಮಿ ದ್ವೇಷ
ಹೀಗಾಗಿ ಭೂಮಿ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಐದು ವರ್ಷದ ಬಳಿಕ ಗೌತಮ್, ಭೂಮಿ ಭೇಟಿಯಾಗಿದ್ದಾರೆ. ಗೌತಮ್ ಚೆನ್ನಾಗಿರಬೇಕು ಅಂತ ಅವನ ಮುಂದೆ ಭೂಮಿ, ನಿಮ್ಮನ್ನು ನಾನು ದ್ವೇಷಸ್ತೀನಿ, ದಯವಿಟ್ಟು ದೂರ ಇರಿ ಅಂತ ಹೇಳಿದ್ದಾಳೆ.
ರೆಸಾರ್ಟ್ ರಾಜಕೀಯ
ರೆಸಾರ್ಟ್ ರಾಜಕೀಯ ಮಾಡಿ ಭೂಮಿಕಾಳ ಮನ ಒಲಿಸಲು ಗೌತಮ್ ರೆಡಿಯಾಗಿದ್ದಾನೆ. ಬೇರೆ ಯಾವುದೋ ಕಾರಣಕ್ಕೆ ಭೂಮಿಕಾ ಈ ರೀತಿ ಮಾಡಿದಳು ಅಂತ ಗೌತಮ್‌ಗೆ ಗೊತ್ತಾಗಿದೆ. ಈಗ ಇನ್ನೇನು ಆಗತ್ತೋ ಏನೋ!