Amruthadhaare Kannada Serial Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗೋ ಅಮೃತಘಳಿಗೆ ಬಂದರೂ ಕೂಡ ಏನೂ ಪ್ರಯೋಜನವಾಗಿಲ್ಲ, ಇನ್ನೊಂದು ಟ್ವಿಸ್ಟ್ ಸಿಕ್ಕಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ಹಾಗೂ ಭೂಮಿಕಾ ಭೇಟಿಯಾಗಿದೆ. ಐದು ವರ್ಷಗಳ ಬಳಿಕ ಈ ಜೋಡಿ ಒಂದಾಗಿದೆ. ಈ ಜೋಡಿ ಒಂದಾಗಲಿದೆ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ ಅವರ ಆಸೆ ಫಲಿಸಲೇ ಇಲ್ಲ.
ಗೌತಮ್ ಕಣ್ಣೀರು!
ಹೌದು, “ನನ್ನ ಯಾಕೆ ಬಿಟ್ಟು ಹೋದ್ರಿ? ನನ್ನನ್ನು ಒಬ್ಬಂಟಿ ಮಾಡಿದ್ರಿ. ಇಷ್ಟು ವರ್ಷಗಳಿಂದ ನಾನು ನಿಮಗೋಸ್ಕರ ಅಲೆದಾಡಿದ್ದೀನಿ. ನಿಮ್ಮನ್ನು ಹುಡುಕಿಕೊಂಡು ಊರೂರು ತಿರುಗಿದ್ದೀನಿ. ನನ್ನ ಪ್ರೀತಿಗೆ ನಿಮಗೆ ಕಾಣಿಸಲೇ ಇಲ್ವಾ? ನಾನು ನಿಮ್ಮನ್ನು ಪ್ರೀತಿಸಿದ್ದೇ ತಪ್ಪಾಯ್ತಾ?” ಎಂದು ಗೌತಮ್, ಭೂಮಿಗೆ ಹೇಳಿದ್ದನು.
ನೋ ಎಂದ ಭೂಮಿಕಾ
“ನನಗೆ ಮಗಳು ಹುಟ್ಟಿರೋ ವಿಷಯ ನೀವು ಹೇಳಲೇ ಇಲ್ಲ. ಮಗಳು ಕಿಡ್ನ್ಯಾಪ್ ಆಗಿರೋ ವಿಷಯವನ್ನು ನೀವು ಹೇಳಿ ಸಮಾಧಾನ ಮಾಡಬಹುದಿತ್ತು. ನಿಮ್ಮ ವಿಷಯದಲ್ಲಿ ನನ್ನ ಮನಸ್ಸು ಮುರಿದು ಹೋಗಿದೆ. ಈಗ ಉಳಿದಿರೋದು ದ್ವೇಷ ಮಾತ್ರ. ನಿಮ್ಮನ್ನು ಬಿಟ್ಟು ನಾನು ತುಂಬ ಮುಂದೆ ಬಂದಿದ್ದೀನಿ. ನಾನು ನನ್ನ ಮಗನನ್ನು ಕರೆದುಕೊಂಡು ತುಂಬ ದೂರ ಬಂದಿದ್ದೀನಿ. ನಮ್ಮಿಂದ ದೂರ ಹೋಗಿ, ಮತ್ತೆ ಭೇಟಿ ಮಾಡುವ ಪ್ರಯತ್ನ ಮಾಡಬೇಡಿ. ಇಲ್ಲ ಅಂದರೆ ನನ್ನ ನಿರ್ಧಾರ ಬೇರೆಯೇ ಆಗಿರುತ್ತೆ” ಎಂದು ಭೂಮಿ ತಿರುಗೇಟು ಕೊಟ್ಟಿದ್ದಾಳೆ.
ಗೌತಮ್ ಬಿಡಲು ಕಾರಣ ಏನು?
ಮನೆಗೆ ಬಂದ ಭೂಮಿಕಾ, ಮಲ್ಲಿ ಬಳಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾಳೆ. “ನಾನು ಆ ಮನೆಯಿಂದ ದೂರ ಇದ್ದರೆ ನನ್ನವರು ಚೆನ್ನಾಗಿ ಇರುತ್ತಾರೆ ಅಂತ ಶಕುಂತಲಾ ಅಂದು ಹೇಳಿದ್ದಳು. ಆ ಮಾತಿಗೋಸ್ಕರ ನಾನು ಆ ಮನೆಯಿಂದ ಹೊರಗಡೆ ಬಂದೆ. ಅವರು ಚೆನ್ನಾಗಿರುತ್ತಾರೆ ಅಂದ್ರೆ ನಾನು ಎಷ್ಟು ತಪ್ಪು ಮಾಡೋಕೆ ರೆಡಿ” ಎಂದು ಭೂಮಿ ಕಣ್ಣೀರು ಹಾಕಿದ್ದಾಳೆ.
ಹಿಂದೇಟು ಹಾಕ್ತಿರೋ ಭೂಮಿಕಾ!
ಭೂಮಿಗೆ ಗೌತಮ್ ಕಂಡರೆ ಇಷ್ಟ, ಗೌತಮ್ ಜೊತೆ ಬದುಕೋಕೆ ಇಷ್ಟ. ಆದರೆ ಅವಳು ಮಾತ್ರ ಶಕುಂತಲಾ, ಜಯದೇವ್‌ಗೆ ಹೆದರಿ ಮನೆ ಬಿಟ್ಟು ಹೋಗಿದ್ದಾಳೆ. ಈಗ ಅವಳ ಮನಸ್ಸು ಗೌತಮ್‌ನನ್ನು ಸೇರು ಅಂತ ಹೇಳಿದರೂ ಕೂಡ, ಶಕುಂತಲಾ ನೆನಪಾಗಿ ಹಿಂದೆ ಸರಿಯುತ್ತಾಳೆ.
ಮುಂದೆ ಏನಾಗಬಹುದು?
ಮಗನ ಮುಖ ನೋಡಿಲ್ಲ ಎಂದು ಗೌತಮ್ ಬೇಸರ ಮಾಡಿಕೊಂಡಿದ್ದನು. ಹೀಗಾಗಿ ಅವನು ಅವಳ ಮನೆಗೆ ರಾತ್ರಿ ಕಳ್ಳನ ಥರ ಹೋಗಿದ್ದಾನೆ. ಆಗ ಅವನಿಗೆ ಆಕಾಶ್ ಕಾಣಿಸುತ್ತಾನಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ನಾನು ನೋಡಿದ್ದ ಈ ಅಪ್ಪುನೇ ನನ್ನ ಮಗ ಅಂತ ಗೊತ್ತಾದರೆ ಗೌತಮ್, ಅವನ ಜೊತೆ ಇನ್ನಷ್ಟು ಹತ್ತಿರ ಆಗಲೂಬಹುದು. ಇದೇ ವಿಚಾರಕ್ಕೆ ಮುಂದೆ ಭೂಮಿಕಾ ಹಾಗೂ ಗೌತಮ್ ಒಂದಾಗಲೂಬಹುದು.
ಪಾತ್ರಧಾರಿಗಳು
ಗೌತಮ್- ರಾಜೇಶ್ ನಟರಂಗ
ಭೂಮಿಕಾ- ಛಾಯಾ ಸಿಂಗ್
ಶಕುಂತಲಾ- ವನಿತಾ ವಾಸು
ಜಯದೇವ್- ರಾಣವ್
