Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಬಳಿಕ ಗೌತಮ್‌, ಭೂಮಿಕಾ ಒಂದಾಗ್ತಾರೆ ಎಂದುಕೊಂಡರಿಗೆ ಬಿಗ್‌ ಟ್ವಿಸ್ಟ್‌ ಕಾದಿದೆ. ಎಲ್ಲವೂ ವೀಕ್ಷಕರು ಅಂದುಕೊಂಡ ಹಾಗೆ ನಡೆಯೋದಿಲ್ಲ. 

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗುವ ಘಳಿಗೆ ಬಂತು ಎಂದು ಪ್ರೋಮೋದಲ್ಲಿ ತೋರಿಸಲಾಗುತ್ತಿದೆ. ಆದರೆ ನಿಜಕ್ಕೂ ಇವರಿಬ್ಬರು ಒಂದಾಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ವಿಶೇಷ ಪ್ರೋಮೋದಲ್ಲಿ ಏನಿದೆ?

ಐದು ವರ್ಷಗಳ ಬಳಿಕ ಗೌತಮ್‌, ಭೂಮಿಕಾ ಮುಖಾಮುಖಿಯಾಗಿದ್ದಾರೆ. ಈಗ ಈ ಜೋಡಿ ಒಂದಾಗಲಿದೆಯಾ ಎನ್ನೋದು ಈಗ ಇರುವ ಟ್ವಿಸ್ಟ್.‌ “ಗೌತಮ್ ಗಾಢ ಪ್ರೀತಿಗಿದು ಶುಭ ಘಳಿಗೆ, ಮನದರಸಿ ಭೂಮಿ ಕಣ್ಣೆದುರು ಬಂದಾಯ್ತು” ಎಂದು ವಾಹಿನಿಯು ವಿಶೇಷವಾದ ಪ್ರೋಮೋ ಹಂಚಿಕೊಂಡಿದೆ. ಆದರೆ ಗೌತಮ್‌ ಜೊತೆ ಭೂಮಿ ಹೋಗ್ತಾಳಾ? 

ಆಕಾಶ್‌ನಲ್ಲಿ ಗೌತಮ್‌ನನ್ನು ಕಾಣೋ ಭೂಮಿ!

ಗೌತಮ್‌ ಶಾಲೆ ಬಳಿ ಭೂಮಿಯನ್ನು ನೋಡಿದ್ದಾನೆ, ಆದರೆ ಅವನು ಹೋಗಿ ಮಾತನಾಡಿಸುವಷ್ಟರಲ್ಲಿ ಅವಳು, ಆಟೋದಲ್ಲಿ ಹೊರಟುಹೋಗಿದ್ದಳು. ಗೌತಮ್‌ ಅಲ್ಲಿ ಇದ್ದಿದ್ದು ಅವಳಿಗೆ ಗೊತ್ತಾಗಲೇ ಇಲ್ಲ. ಪಸ್ಟ್‌ ಟೈಮ್‌ ಗೌತಮ್‌ನನ್ನು ಮೀಟ್‌ ಮಾಡಿದ್ದು, ಮದುವೆ ಆಗಿದ್ದು, ಪ್ರೀತಿ ಹಂಚಿಕೊಂಡಿದ್ದು ಎಲ್ಲವೂ ಭೂಮಿಗೆ ಸರಿಯಾಗಿ ನೆನಪಿದೆ. ಮಗ ಆಕಾಶ್‌ನಲ್ಲಿ ಅವಳು ಗೌತಮ್‌ನನ್ನು ಕಾಣುತ್ತಾಳೆ. ಅಪ್ಪನ ಥರ ಆಕಾಶ್‌ಗೆ ಊಟ ಅಂದ್ರೆ ಇಷ್ಟ, ಚಾಕೋಲೇಟ್‌ ಅಂದ್ರೆ ಪ್ರಾಣ, ಮಲ್ಲಿಯನ್ನು ಡಾರ್ಲಿಂಗ್‌ ಅಂತ ಕರೆಯುತ್ತಾನೆ.

ಭೂಮಿ ಏನು ಹೇಳಬಹುದು?

“ಬದುಕೋಕೆ ಸಾವಿರ ಕಾರಣ ಇತ್ತು, ಆದರೆ ನೀವು ನನ್ನನ್ನು ಒಂಟಿ ಮಾಡಿ ಯಾಕೆ ಬಿಟ್ಟು ಹೋದ್ರಿ?” ಅಂತ ಗೌತಮ್‌, ಭೂಮಿಕಾಳನ್ನು ಪ್ರಶ್ನೆ ಮಾಡಿದ್ದಾನೆ. ಗೌತಮ್‌ ನೋಡಿ ಭೂಮಿಕಾಗೆ ಖುಷಿಯಾಗಿದೆ. ಅವನ ಮಾತು ಕೇಳಿ ಅವಳು ಏನು ಹೇಳಬಹುದು ಎನ್ನೋ ಪ್ರಶ್ನೆ ಎದುರಾಗಿದೆ. “ನನಗೆ ಮಗಳು ಹುಟ್ಟಿದಳು, ಅವಳು ಕಿಡ್ನ್ಯಾಪ್‌ ಆಗಿರೋ ವಿಚಾರವನ್ನು ನನ್ನ ಬಳಿ ಮುಚ್ಚಿಟ್ರಿ. ನನ್ನ ಮಗಳು ಕಿಡ್ನ್ಯಾಪ್‌ ಆಗೋಕೆ ಶಕುಂತಲಾ, ಜಯದೇವ್ ಕಾರಣ. ಅವರ ಬಗ್ಗೆ ಹೇಳಿದ್ರೆ ನೀವು ನಂಬೋದಿಲ್ಲ. ಏನು ಮಾಡಲಿ? ನನ್ನ ಮಗನನ್ನು ಮುಗಿಸ್ತೀನಿ ಅಂತ ಹೇಳಿದ್ರು. ನನ್ನ ಮಗನನ್ನು ಉಳಿಸಿಕೊಳ್ಳೋಕೆ ನಿಮ್ಮನ್ನು ಬಿಟ್ಟು ದೂರ ಹೋಗೋದು ಬಿಟ್ಟು ಬೇರೆ ಯಾವ ದಾರಿಯೂ ಇರಲಿಲ್ಲ” ಎಂದು ಭೂಮಿ ಹೇಳಬಹುದು.

ಜಯದೇವ್‌ಗೆ ಗೌತಮ್‌ ಸಹಾಯ ಬೇಕು!

ಗೌತಮ್‌ ಪ್ರೀತಿಯ ಮಾತಿಗೆ ಭೂಮಿ ಒಪ್ಪಬಹುದು. ವಿನಾಃಕಾರಣ ದ್ವೇಷ ಮಾಡದೆ, ಮುನಿಸಿಕೊಳ್ಳದೆ ಭೂಮಿ, ಗೌತಮ್‌ನನ್ನು ಒಪ್ಪಲೂಬಹುದು, ಅವನ ಜೊತೆ ಜೀವನ ಮಾಡಲೂಬಹುದು. ಆದರೆ ಒಂದೇ ಸಲ ಇವರಿಬ್ಬರು ಒಂದಾಗುತ್ತಾರೆ ಎನ್ನೋದು ಕೂಡ ಡೌಟ್. ಅದೇ ಸಮಯಕ್ಕೆ ಜಯದೇವ್-ಶಕುಂತಲಾ ಎಂಟ್ರಿ ಆಗಬಹುದು. ಈಗಾಗಲೇ ಜಯದೇವ್‌ 600 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾರೆ. ಆ ಸಾಲವನ್ನು ತೀರಿಸಬೇಕು ಎಂದು ಬ್ಯಾಂಕ್‌ನವರು ನೋಟೀಸ್‌ ನೀಡಿದ್ದಾರೆ. ಈಗ ಸಾಲ ತೀರಿಸಲು ಜಯದೇವ್‌ಗೆ ಟೈಮ್‌ ಬೇಕು, ಗೌತಮ್‌ ಒಂದು ಮಾತು ಹೇಳಿದರೆ ಬ್ಯಾಂಕ್‌ನವರು ಸುಮ್ಮನಿರುತ್ತಾರೆ ಎಂದು ಅವನು ಅಂದುಕೊಂಡಿದ್ದಾನೆ. ಗೌತಮ್‌ ಎಲ್ಲಿದ್ದಾನೆ ಅಂತ ಜಯದೇವ್‌, ಗೌತಮ್‌ಗೆ ಗೊತ್ತಿಲ್ಲ. ಹೀಗಾಗಿ ಅವರು ಆನಂದ್‌ ಮನೆಗೆ ಬಂದು ಗೌತಮ್‌ ಫೋನ್‌ ನಂಬರ್‌ ಕೇಳಿದ್ದಾರೆ, ಆದರೆ ಆನಂದ್‌ ಹೇಳಿಲ್ಲ.

ಈಗ ಭೂಮಿ ಹಾಗೂ ಗೌತಮ್‌ ಇಬ್ಬರೂ ಒಂದಾಗಿ ಶಕುಂತಲಾ-ಜಯದೇವ್‌ ದ್ವೇಷಕ್ಕೆ, ಮಾಡಿದ ಮೋಸಕ್ಕೆ ಶಿಕ್ಷೆ ಕೊಟ್ಟರೂ, ಬುದ್ಧಿ ಕಲಿಸಿದರೂ ಕೂಡ ಆಶ್ಚರ್ಯವಿಲ್ಲ.