Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಸುಧಾರಾಣಿ ಅವರು ಬರುತ್ತಾರೆ ಎನ್ನಲಾಗಿದೆ. ಇದಕ್ಕೆ ನಟಿ ಏನು ಹೇಳಿದ್ದಾರೆ? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ( Bigg Boss Kannada Season 12 ) ದಿನಗಣನೆ ಶುರುವಾಗಿದೆ. ಈಗ ಯಾರೆಲ್ಲ ದೊಡ್ಮನೆಗೆ ಬರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಅಂದಹಾಗೆ ನಟಿ ಸುಧಾರಾಣಿ ಕೂಡ ಬಿಗ್‌ ಬಾಸ್‌ ಶೋ ಭಾಗ ಆಗಲಿದ್ದಾರೆ ಎನ್ನಲಾಗಿತ್ತು. ಇದಕ್ಕೀಗ ಸೋಶಿಯಲ್‌ ಮೀಡಿಯಾದಲ್ಲಿ ಸುಧಾರಾಣಿ ಉತ್ತರ ಕೊಟ್ಟಿದ್ದಾರೆ.

ಸುಧಾರಾಣಿ ಏನಂದ್ರು?

ನಟಿ ಮೇಘನಾ ರಾಜ್‌ ಕೂಡ “ನಾನು ಬಿಗ್‌ ಬಾಸ್‌ ಶೋಗೆ ಹೋಗ್ತಿಲ್ಲ, ಸುಳ್ಳು ಸುದ್ದಿ” ಎಂದು ಹೇಳಿದ್ದರು. ಇದರ ಬೆನ್ನಲ್ಲೇ ನಟಿ ಸುಧಾರಾಣಿ ಕೂಡ ಬಿಗ್‌ ಬಾಸ್‌ ಶೋಗೆ ಹೋಗ್ತಿರುವ ಸುದ್ದಿ ಕೇಳಿ ನಕ್ಕಿದ್ದಾರೆ. ಒಟ್ಟಿನಲ್ಲಿ ಅವರು ಕೂಡ ಬಿಗ್‌ ಬಾಸ್‌ ಮನೆಗೆ ಹೋಗಲ್ಲ ಅಂತಾಯ್ತು. ಯುಟ್ಯೂಬರ್‌ ಸಮೀರ್‌ ಸ್ಯಾಮ್‌ ಕೂಡ ಬಿಗ್‌ ಬಾಸ್‌ ಮನೆಗೆ ಹೋಗಲ್ಲ, ಅದು ನನಗಲ್ಲ, ಈ ಅವಕಾಶ ಬೇರೆಗೆ ಸಿಗಲಿ ಎಂದು ಹೇಳಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ನಟಿಸುತ್ತಿದ್ದರು. ಇತ್ತೀಚೆಗೆ ಈ ಸೀರಿಯಲ್‌ ಅಂತ್ಯವಾಗಿದೆ. ಹೀಗಾಗಿ ಸುಧಾರಾಣಿ ಅವರು ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎಂಬ ಗಾಸಿಪ್‌ ಸೃಷ್ಟಿಯಾಗಿತ್ತು. ಅಂದಹಾಗೆ ಈಗ ಸುಧಾರಾಣಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್‌ ನಿರೂಪಣೆ

ಸೆಪ್ಟೆಂಬರ್‌ 28ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರು ಆಗುವುದು. ಈಗಾಗಲೇ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡೋದು ಪಕ್ಕಾ ಆಗಿದೆ. ಮುಂದಿನ ನಾಲ್ಕು ಸೀಸನ್‌ಗಳನ್ನು ಅವರೇ ನಿರೂಪಣೆ ಮಾಡ್ತಾರಂತೆ. ಅಂದಹಾಗೆ ಕಿಚ್ಚ ಸುದೀಪ್‌ ಇರುವ ಎರಡು ಪ್ರೋಮೋಗಳು ಕೂಡ ರಿಲೀಸ್‌ ಆಗಿವೆ.

ಹೊಸ ಮನೆ

ಬಿಡದಿ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಬಿಗ್‌ ಬಾಸ್‌ ಕನ್ನಡ ಶೋನ ಕೆಲ ಸೀಸನ್‌ಗಳು ಶೂಟ್‌ ಆಗಿತ್ತು. ಮೊದಲ ಸೀಸನ್‌ ಮುಂಬೈನಲ್ಲಿ ಶೂಟ್‌ ಆಗಿತ್ತು. ಈ ಹಿಂದಿನ ಸೀಸನ್‌ ದೊಡ್ಡ ಆಲದಮರದ ಬಳಿ ಶೂಟ್‌ ಆಗಿತ್ತು. ಅಂದಹಾಗೆ ಈ ಬಾರಿ ಬಿಡದಿಯಲ್ಲಿ ಶೂಟ್‌ ಆಗಲಿದೆಯಂತೆ. ಪ್ರತಿ ಸೀಸನ್‌ಗೂ ಹೊಸ ಮನೆ ಮಾಡಲಾಗುವುದು, ಈ ಬಾರಿ ಮನೆಯಲ್ಲಿ ಏನು ವಿಶೇಷ ಇರಲಿದೆ ಎಂದು ಕಾದು ನೋಡಬೇಕಿದೆ.

ಸ್ಪರ್ಧಿಗಳು

ಡಾ ಬ್ರೋ, ಸ್ಪಂದನಾ ಸೋಮಣ್ಣ, ರಮೋಲಾ, ಸಾಗರ್‌ ಬಿಳಿಗೌಡ, ವರುಣ್‌ ಆರಾಧ್ಯ, ನಿರೂಪಕಿ ಜಾಹ್ನವಿ, ಗಿಲ್ಲಿ ನಟ, ಅಶೋಕ್‌ ಶರ್ಮಾ, ರಾಘವೇಂದ್ರ ಆಚಾರ್ಯ, ಕಾವ್ಯ ಶೈವ, ಆನಂದ್‌ ಗುರೂಜಿ ಮುಂತಾದವರು ಈ ಶೋನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳ ಆಯ್ಕೆಯಲ್ಲಿ ಮಧ್ಯ ಪ್ರವೇಶ ಮಾಡೋದಿಲ್ಲ ಎಂದು ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಬಾರಿ ಏನು ವಿಶೇಷ?

ಈ ಬಾರಿಯ ಬಿಗ್‌ ಬಾಸ್‌ ಶೋನಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂದು ಕಾದು ನೋಡಬೇಕಿದೆ. ಹೊಸ ಮನೆಯಲ್ಲಿ ವಿಶಿಷ್ಟ ರೀತಿಯ ಥೀಮ್‌ಗಳು ಇರಲಿವೆ ಎಂಬ ಕುತೂಹಲವೂ ಇದೆ.