ರಿಯಲ್ ಲೈಫ್‌ನಲ್ಲಿ ಅಣ್ಣ-ತಂಗಿಯಾಗಿದ್ದವರು ತೆರೆ ಮೇಲೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟುಹಾಕಿತ್ತು. ಹಾಗಾದರೆ ಆ ಜೋಡಿ ಯಾವುದು?
ತೆರೆ ಮೇಲೆ ಅಣ್ಣ-ತಂಗಿ ಪಾತ್ರ ಮಾಡಿದವರು ಲವ್ ಮಾಡಿ ಮದುವೆಯಾದ ಉದಾಹರಣೆ ಸಾಕಷ್ಟಿದೆ. ರಿಯಲ್ ಆಗಿ ಗಂಡ-ಹೆಂಡತಿ ಆದವರು ತೆರೆ ಮೇಲೆ ಅಣ್ಣ-ತಂಗಿ, ಅತ್ತಿಗೆ ಮೈದುನನ ಪಾತ್ರ ಮಾಡಿದ್ದೂ ಇದೆ. ಈಗ ಇಲ್ಲೋರ್ವ ಅಣ್ಣ-ತಂಗಿ ತೆರೆ ಮೇಲೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಭಾರೀ ವಿವಾದ ಆಗಿತ್ತು, ಪ್ರತಿಭಟನೆಗಳು ನಡೆದಿದ್ದವು.
ಕುಡಿತಕ್ಕೆ ದಾಸರಾದರು!
1942ರಲ್ಲಿ ಮಿನೂ ಮುಮ್ತಾಜ್ ಅವರು ಜನಿಸಿದ್ದರು. ಅವಳ ತಂದೆ ಮುಮ್ತಾಜ್ ಅಲಿ ಅವರು ಡ್ಯಾನ್ಸ್ ಟೀಚರ್ ಕೂಡ ಹೌದು. ಕುಡಿತಕ್ಕೆ ದಾಸರಾಗಿದ್ದ ಅವರು ಒಂದಿಷ್ಟು ಆರ್ಥಿಕ ಸಮಸ್ಯೆಗಳನ್ನು ಕೂಡ ಎದುರಿಸಿದರು. ಹೀಗಾಗಿ ಮಿನೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿ ತಗೊಂಡರು.
13ನೇ ವಯಸ್ಸಿಗೆ ಜನಪ್ರಿಯತೆ ಸಿಕ್ಕಿತ್ತು!
ಮಿನೂ ಮುಮ್ತಾಜ್ ಅವರ ಸಹೋದರ ಮೆಹಮೂದ್ ಕೂಡ ಅವರು ಖ್ಯಾತ ಕಾಮಿಡಿಯನ್ ಆಗಿದ್ದು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಮಗ ಲಕ್ಕಿ ಅಲಿ ಕೂಡ ಗಾಯಕ. ಮೆಹಮೂದ್ ಅವರು ನಟಿ ಮೀನಾ ಕುಮಾರಿ ಅವರ ಮಗಳು ಮಧುರನ್ನು ಮದುವೆಯಾಗಿದ್ದಾರೆ. ಮಿನೂ ಮುಮ್ತಾಜ್ ಅವರು ಮೊದಲು ಮಲಿಕುನ್ನಿಸ ಅಲಿ ಎಂದು ಹೆಸರು ಇಟ್ಟುಕೊಂಡಿದ್ದರು. 13ನೇ ವರ್ಷಕ್ಕೆ ನಿರ್ದೇಶಕ ನನುಭಾಯ್ ವಕಿಲ್ ಅವರ 'ಹಕೀಮ್' ಸಿನಿಮಾದಲ್ಲಿ ನಟಿಸಿದ್ದರು. 'ಚೌದ್ವಿನ್ ಕಾ ಚಂದ್', 'ಸಾಹೀಬ್ ಬೀಬಿ ಔರ್ ಗುಲಾಮ್', 'ಕಾಗಜ್ ಕೆ ಫೂಲ್' 'ಹೌರಾ ಬ್ರಿಡ್ಜ್' ಸಿನಿಮಾಗಳಲ್ಲಿ ನಟಿಸಿದ್ದಾರೆ.
ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ರು!
ಸಹೋದರ ಮಹಮೂದ್ ಜೊತೆಗೆ 'ಗೋರಾ ರಣಗ್ ಚುನಾರಿಯಾ ಕಾಲಿ' ಹಾಡಿನಲ್ಲಿ ಅವರು ಮಿನೂ ಮುಮ್ತಾಜ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಇಡೀ ರಾಷ್ಟ್ರವೇ ಶಾಕ್ ಆಗಿತ್ತು. ಈ ಹಾಡು ನೋಡಿ ಅನೇಕರು ಬೀದಿಗಳಲ್ಲಿ ಪ್ರತಿಭಟನೆ ಮಾಡಿದ್ದರು, ನೈತಿಕತೆ, ಮೌಲ್ಯಗಳನ್ನು ಹಾಳು ಮಾಡಿದರು ರಂದು ದೂರಿದರು. ಆ ಬಳಿಕ 1963ರಲ್ಲಿ ನಿರ್ದೇಶಕ ಎಸ್ ಅಲಿ ಅಕ್ಬರ್ ಅವರನ್ನು ಮದುವೆಯಾದರು. ಆ ಬಳಿಕ ಅವರು ಚಿತ್ರರಂಗದಿಂದ ದೂರವಾದರು.
ಬ್ರೇನ್ ಟ್ಯೂಮರ್
2003ರಲ್ಲಿ ಮೆಮೊರಿ ಲಾಸ್ ಆಗಿ ಒದ್ದಾಡಿದ್ದರು. ವೈದ್ಯರ ಬಳಿ ಹೋದಾಗ 15 ವರ್ಷಗಳಿಂದ ಬ್ರೇನ್ ಟ್ಯೂಮರ್ ಆಗಿರೋದು ಗೊತ್ತಾಗಿತ್ತು. ಟೊರಂಟೋದಲ್ಲಿ ಔಷಧಿ ಪಡೆದ ಬಳಿಕ ಅವರು ನೆನಪಿನ ಶಕ್ತಿಯನ್ನು ಮತ್ತೆ ಪಡೆದುಕೊಂಡರು. 2011ರಲ್ಲಿ ಅವರು ತೀರಿಕೊಂಡರು.
