ನಿರ್ಮಾಣ ಹಂತದ ಕಟ್ಟಡಕ್ಕೆ ಕಿಪಿ ಕೀರ್ತಿಯ ಫೋಟೋ ಅಳವಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅವಮಾನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಕಿಪಿ ಕೀರ್ತಿ ಅವರ ಫೋಟೋವನ್ನು ಅಳವಡಿಸಲಾಗಿದೆ. ಕಿಪಿ ಕೀರ್ತಿ ತಮ್ಮದೇ ಶೈಲಿಯಲ್ಲಿ ಜನರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ. ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದಿರುವ ಕಿಪಿ ಕೀರ್ತಿ ಕನ್ನಡ ಸಿನಿಮಾವೊಂದರಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ತಮ್ಮಲ್ಲಿಯ ನ್ಯೂನ್ಯತೆಗಳನ್ನು ಸವಾಲು ಆಗಿ ತೆಗೆದುಕೊಂಡಿರುವ ಕಿಪಿ ಕೀರ್ತಿ ಇಡೀ ಕರುನಾಡು ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಸಿ.ಎನ್.ಹಳ್ಳಿ ಮೀಮ್ಸ್ ಟ್ರೋಲ್ ಪೇಜ್‌ನಲ್ಲಿ ಕಿಪಿ ಕೀರ್ತಿಗೆ ಸಂಬಂಧಿಸಿದ ಈ ವಿಡಿಯೋವನ್ನು ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದು ಕಿಪಿ ಕೀರ್ತಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಮನೆ ಹೆಣ್ಣು ಮಕ್ಕಳ ಫೋಟೋ ಹೀಗೆ ಹಾಕಿದ್ರೆ ನೀವು ಸುಮ್ಮನೇ ಇರ್ತಿರಾ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಒಂದಿಷ್ಟು ಮಂದಿ ಇದನ್ನು ಸಹ ತಮಾಷೆಯಾಗಿ ತೆಗೆದುಕೊಂಡು ಕಮೆಂಟ್ ಮಾಡಿದ್ದಾರೆ. ಇದು ನೆಕ್ಷ್ಟ್ ಲೆವೆಲ್ ಗುರು, ಈ ಕಟ್ಟಡಕ್ಕೆ ನೂರು ವರ್ಷವಾದರೂ ಏನು ಆಗಲ್ಲ ಎಂದಿದ್ದಾರೆ. ಕಿಪಿ ಕೀರ್ತಿಯ ಇಂತಹ ಫೋಟೋ ತೋರಿಸಿದ್ರೆ ಮಕ್ಕಳು ಹೆದರಿಕೊಳ್ಳುತ್ತವೆ. ಹಾಗಾಗಿ ನಿಮ್ಮ ಕಟ್ಟಡಕ್ಕೆ ಯಾವುದೇ ದೃಷ್ಟಿ ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಪ್ ಸುದ್ದಿಗಳಿಂದ ಕಿಪಿ ಕೀರ್ತಿ ಫೇಮಸ್
ಇತ್ತೀಚೆಗೆ ಕಿಪಿ ಕೀರ್ತಿ ತಮ್ಮ ಲವ್ ಬ್ರೇಕಪ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು. ಮುತ್ತು ಜೊತೆಯಲ್ಲಿ ಬ್ರೇಕಪ್ ಮಾಡಿಕೊಂಡದ್ದೇನೆ. ನನ್ನ ಮತ್ತು ಮುತ್ತು ಜೊತೆ ಎಲ್ಲವೂ ಚೆನ್ನಾಗಿಯೇ ಇತ್ತು. ಸುನೀಲ್ ನನ್ನ ಒಳ್ಳೆಯ ಫ್ರೆಂಡ್. ಸ್ನೇಹ ಹೊರತುಪಡಿಸಿ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ. ಸುನೀಲ್ ಜೊತೆಗಿನ ಸ್ನೇಹವನ್ನು ಮುತ್ತು ಅನುಮಾನದಿಂದ ನೋಡಿದ್ದನು ಎಂದು ಕಿಪಿ ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಹೇಳಿಕೊಂಡಿದ್ದರು.
ಕಳೆದ ವರ್ಷ ವೈರಲ್ ಆಗಿತ್ತು ಮಹಿಳೆ ಫೋಟೋ
ಕಳೆದ ವರ್ಷವಷ್ಟೇ ಹಳೇ ಮೈಸೂರು ಭಾಗದಲ್ಲಿ ದೊಡ್ಡ ಕಣ್ಣಿನ ಮಹಿಳೆಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜನರು ನಿರ್ಮಾಣ ಹಂತದ ಕಟ್ಟಡ, ತೋಟಗಳಲ್ಲಿ, ಅಂಗಡಿಗಳಲ್ಲಿ ದೊಡ್ಡ ಕಣ್ಣಿನ ಮಹಿಳೆಯ ಫೋಟೋವನ್ನು ದೃಷ್ಟಿಗೊಂಬೆಯಾಗಿ ಬಳಸಿಕೊಂಡಿದ್ದರು. ಇಂದಿಗೂ ವಿಶೇಷವಾಗಿ ನಿರ್ಮಾಣ ಹಂತದ ಕಟ್ಟಡಗಳ ಮುಂದೆ ಈ ಮಹಿಳೆಯ ಫೋಟೋವನ್ನು ಹಾಕಲಾಗಿರುತ್ತದೆ. ಆದ್ರೆ ಈ ಪೋಟೋ ಕೇವಲ ಕಾಲ್ಪನಿಕ ಚಿತ್ರವಾಗಿತ್ತು. ಇದೀಗ ಕಿಪಿ ಕೀರ್ತಿಯ ಫೋಟೋ ಬಳಕೆಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದೃಷ್ಟಿ ಗೊಂಬೆ ಎಂದರೇನು?
ದಕ್ಷಿಣ ಭಾರತದಲ್ಲಿ ಕಂಡುಬರುವ ಒಂದು ಬೊಂಬೆಯಾಗಿದ್ದು, ಇದು ಕೆಟ್ಟ ದೃಷ್ಟಿ ಮತ್ತು ದುಷ್ಟ ಶಕ್ತಿಗಳನ್ನು ದೂರವಿಡಲು ಬಳಸುವ ತಾಲಿಮನ್ ಆಗಿದೆ. ಈ ಗೊಂಬೆಗಳು ತಮ್ಮ ಬೆದರಿಸುವ ನೋಟದಿಂದ ಕೆಟ್ಟ ಶಕ್ತಿಗಳನ್ನು ಹೆದರಿಸಲು, ಮನೆಗಳು, ನಿರ್ಮಾಣ ಸ್ಥಳಗಳು ಮತ್ತು ವಾಹನಗಳಲ್ಲಿ ಹಾಕಲ್ಪಡಲಾಗುತ್ತದೆ.
