ಧರ್ಮಸ್ಥಳ ಷಡ್ಯಂತ್ರ ಆರೋಪದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಶಶಿಕಾಂತ್ ಸೆಂಥಿಲ್ ನಿರ್ಧರಿಸಿದ್ದಾರೆ. ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ನಾಪತ್ತೆ ನಾಟಕವಾಡಿದ ತಾಯಿಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.

1.ಧರ್ಮಸ್ಥಳ ಷಡ್ಯಂತ್ರ ಕೇಸ್ ; ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ಹಾಕಲು ಸಸಿಕಾಂತ್ ಸೆಂಥಿಲ್ ನಿರ್ಧಾರ 

ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಮತ್ತು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಸಂಸದ ಶಶಿಕಾಂತ್ ಸೆಂಥಿಲ್ ಅವರು ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಮಾನನಷ್ಟ ಅರ್ಜಿ ಸಲ್ಲಿಸಲು ಸೆಂಥಿಲ್ ಮುಂದಾಗಿದ್ದಾರೆ.

2.ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ನಾಪತ್ತೆ ನಾಟಕ : ತಾಯಿಗೆ ಹೈಕೋರ್ಟಿಂದ 2 ಲಕ್ಷ ದಂಡ!

ಮಗ ನಿಗೂಢವಾಗಿ ನಾಪತ್ತೆಯಾಗಿದ್ದು, ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಇಂದಿರಾನಗರದ ನಿವಾಸಿ ಎಂ.ಮಹೇಶ್ವರಿ (72) ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನಿರ್ದೇಶನದಂತೆ ಹುಡುಕಾಟ ನಡೆಸಿದ್ದ ಪೊಲೀಸರು ಅರ್ಜಿದಾರೆಯ ಪುತ್ರ ಕೃಪಲಾನಿಯನ್ನು ಪತ್ತೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಜೊತೆಗೆ, ಕೃಪಲಾನಿ ನಾಪತ್ತೆಯಾಗಿಲ್ಲ. ಯಾರಿಂದಲೂ ಬಂಧನಕ್ಕೂ ಒಳಗಾಗಿಲ್ಲ. ತಾನೇ ಚೆನ್ನೈನಲ್ಲಿ ಬಚ್ಚಿಟ್ಟುಕೊಂಡು ನಾಪತ್ತೆ ನಾಟಕವಾಡಿದ್ದಾನೆ ಎಂದು ವರದಿ ಸಲ್ಲಿಸಿದ್ದರು.

3.ಇವಿಎಂನಿಂದ ಗೆದ್ದ 136 ಸ್ಥಾನ ತ್ಯಜಿಸಿ ಎಲೆಕ್ಷನ್‌ಗೆ ಬನ್ನಿ : ಬಿಜೆಪಿ

ಇವಿಎಂ(ಮತಯಂತ್ರ) ಮುಖಾಂತರವೇ ಚುನಾಯಿತವಾದ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆಇದೀಗ ಅದೇ ಇವಿಎಂ ಬಗ್ಗೆ ಸಂಶಯ ಇದ್ದಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಪ್ರತಿಪಕ್ಷ ಬಿಜೆಪಿ ಸವಾಲು ಎಸೆದಿದೆ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲೂ ಕೃತಕ ಅಜ್ಞಾನದಿಂದ ಕೂಡಿದ ನಿರ್ಧಾರಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರದ ಕ್ಯಾಬಿನೆಟ್‌ ಕೈಗೊಂಡಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ ಬಳಸುವ ಸಂಬಂಧ ಸಚಿವ ಸಂಪುಟ ಸಭೆ ಕೈಗೊಂಡ ನಿರ್ಣಯವನ್ನು ಬಲವಾಗಿ ಖಂಡಿಸಿದ್ದಾರೆ.

4.ಕ್ಯಾಶ್‌ಲೆಸ್ ವ್ಯವಸ್ಥೆ, ವೈ-ಫೈ, ಸಿಸಿ ಕ್ಯಾಮೆರಾ ಸೌಲಭ್ಯಗಳೊಂದಿಗೆ ಕೆ.ಆರ್.ಮಾರುಕಟ್ಟೆ ಸ್ಮಾರ್ಟ್‌ ಪಾರ್ಕಿಂಗ್

ಕೆ.ಆರ್‌. ಮಾರುಕಟ್ಟೆ ಕಟ್ಟಡದ ವಾಹನ ಪಾರ್ಕಿಂಗ್‌ ಸ್ಥಳವನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಯೋಜನೆ ರೂಪಿಸಿದೆ. 1928ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಕಟ್ಟಡವು ಇದೀಗ ನಗರದ ಪ್ರಮುಖ ವ್ಯಾಪಾರಿ ತಾಣಗಳಲ್ಲಿ ಒಂದಾಗಿದೆ.

ತರಕಾರಿ, ಹಣ್ಣು, ಹೂ, ಸೊಪ್ಪು ಸೇರಿದಂತೆ ಎಲ್ಲ ವಸ್ತುಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆ. ಹಾಗಾಗಿ, ಪ್ರತಿ ದಿನ ನಗರದ ವಿವಿಧ ಭಾಗದಿಂದ ಲಕ್ಷಾಂತರ ಗ್ರಾಹಕರು ಬಂದು ಹೋಗುತ್ತಾರೆ. ಕೆ.ಆರ್‌. ಮಾರುಕಟ್ಟೆ ಕಟ್ಟಡವು ಐದು ಮಹಡಿ ಹೊಂದಿದೆ. ಅದರಲ್ಲಿ ನಾಲ್ಕು ಮಹಡಿಯಲ್ಲಿ ಮಳಿಗೆಗಳಿದ್ದು, ನೆಲ ಮಹಡಿಯಲ್ಲಿ ವಾಹನ ನಿಲುಗಡೆಗೆ ಮೀಸಲಿಡಲಾಗಿದೆ. ಸದ್ಯ ವ್ಯವಸ್ಥಿತ ನಿರ್ವಹಣೆ ಇಲ್ಲದೇ ಗಬ್ಬುನಾರುವ ಸ್ಥಿತಿಯಲ್ಲಿದೆ. ಇದೀಗ ವಾಹನ ನಿಲುಗಡೆ ಸ್ಥಳವನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾದರಿಯಲ್ಲಿ ಖಾಸಗಿ ಸಂಸ್ಥೆಗೆ ನೀಡುವುದಕ್ಕೆ ತೀರ್ಮಾನಿಸಿದೆ.

5.ಉಚ್ಛಾಟನೆ ಬಳಿಕ ಜನಪ್ರಿಯತೆ ಹೆಚ್ಚಿತು, 2028ರಲ್ಲಿ ಸಿಎಂ ಆಗುವ ವಿಶ್ವಾಸ: ಶಾಸಕ ಯತ್ನಾಳ್

ಸಿಎಂ ಅವರು ಸದನದಲ್ಲಿ ನನಗೆ ಯತ್ನಾಳ್ ನೀವು ಉಚ್ಚಾಟಿತರಾಗಿದ್ದೀರಿ ಎಂದು ತಿಳಿಸಿದಾಗ, ನಿಮ್ಮನ್ನೂ ದೇವೇಗೌಡ ಉಚ್ಚಾಟಿಸಿದ್ದರು ಸಿಎಂ ಆದಿರಿ. ಯಡಿಯೂರಪ್ಪ ಅವರನ್ನೂ ಉಚ್ಛಾಟಿಸಿದ್ದರು ಸಿಎಂ ಆದರು. ಒಮ್ಮೆ ಕುಮಾರಸ್ವಾಮಿಯನ್ನು ಉಚ್ಛಾಟಿಸಲಾಗಿತ್ತು, ಸಿಎಂ ಆದರು. ಈಗ ನನ್ನ ಸರದಿ ನನ್ನನ್ನೂ ಉಚ್ಛಾಟಿಸಲಾಯ್ತು