ಕ್ಯಾಬಿನೆಟ್‌ನಲ್ಲಿ ಸಬ್ಜೆಕ್ಟ್ ಇರಲಿಲ್ಲ. ಇವಿಎಂ ಮೇಲೆ ಸಾಕಷ್ಟು ಸಂದೇಶ ಇವೆ. ಅಮೆರಿಕಾದಲ್ಲಿ ಬ್ಯಾಲೆಟ್ ಇದೆ ಎಂದು ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರು (ಸೆ.05): ಕ್ಯಾಬಿನೆಟ್‌ನಲ್ಲಿ ಸಬ್ಜೆಕ್ಟ್ ಇರಲಿಲ್ಲ. ಇವಿಎಂ ಮೇಲೆ ಸಾಕಷ್ಟು ಸಂದೇಶ ಇವೆ. ಅಮೆರಿಕಾದಲ್ಲಿ ಬ್ಯಾಲೆಟ್ ಇದೆ ಎಂದು ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಂತರ ಮಾತನಾಡಿದ ಅವರು, ಅದಕ್ಕೆ ನಾವು ಅದನ್ನ ಬೇಡ ಅನ್ನುತ್ತಿದ್ದೇವೆ. ನಾವು ತಂದಿದ್ದು ಒಳ್ಳೆಯ ಉದ್ದೇಶದಿಂದ. ಬ್ಯಾಲೆಟ್ ಈಸ್ ಬೆಟರ್. ವ್ಯತಿರಿಕ್ತ ಪರಿಣಾಮ ಬಂದ್ರೆ ಒಪ್ತೀರಾ ಎಂಬ ಪ್ರಶ್ನೆಗೆ ಬ್ಯಾಲೆಟ್ ಆದರೆ ಪಾರದರ್ಶಕ ಬರುತ್ತೆ. ನಿಶ್ಚಿತವಾಗಿ ನಾವು ಬಹಳಷ್ಟು ಗೆಲ್ಲುತ್ತೇವೆ. ಬ್ಯಾಲೆಟ್ ತರಲು ರಾಜ್ಯಕ್ಕೆ ಅಧಿಕಾರ ಇದೆ. ಮತದಾರ ಪಟ್ಟಿಯ ಪರಿಷ್ಕರಣೆಗೆ ಶಿಫಾರಸು ವಿಚಾರವಾಗಿ ಮನ್ಸೂರ್ ಖಾನ್ ಎಲ್ಲಾ ಕಡೆ ಲೀಡ್ ಇತ್ತು. ಮಹದೇವಪುರ ಚುನಾವಣೆ ನೋಡಿದ್ರಲ್ಲ ಏನಾಯ್ತು ಅಂತ, ಒಂದೊಂದೇ ಮನೆಯಲ್ಲಿ 70 ವೋಟ್ ಇರ್ತಾವೆ ಅಂದ್ರೆ. ನಗರ ಪ್ರದೇಶದಲ್ಲೇ ಇದು ಆಗೋದು. ಗ್ರಾಮೀಣ ಭಾಗದಲ್ಲಿ ಅಂತಾದ್ದೂ ಯಾವುದು ಇಲ್ಲ ಎಂದರು.
ಧರ್ಮಸ್ಥಳ ಪ್ರಕರಣ NIA ಗೆ ವಹಿಸಲು ಸ್ವಾಮೀಜಿಗಳ ನಿಯೋಗದಿಂದ ಅಮಿತ್ ಶಾ ಭೇಟಿ ವಿಚಾರವಾಗಿ, ಎಸ್‌ಐಟಿಯನ್ನ ಮೊದಲು ಸ್ವಾಗತ ಮಾಡಿದ್ರು. ಎಸ್‌ಐಟಿ ಒಳ್ಳೆಯ ಕೆಲಸ ಮಾಡ್ತಿದೆ. ಸರ್ಕಾರ ಹಸ್ತಕ್ಷೇಪ ಮಾಡಲಿಲ್ಲ. ಇದರಲ್ಲೂ ರಾಜಕೀಯ ಮಾಡ್ತಿದ್ದಾರೆ. ಸ್ವಾಮೀಜಿಗಳಿಗೆ ಸ್ಪಾನ್ಸರ್ ಮಾಡಿರ್ತಾರೆ ಬಿಡಿ. ಅದರಲ್ಲಿ ಬಿಜೆಪಿ ಸ್ಪಾನ್ಸರ್ ಇರುತ್ತೆ ಬಿಡಿ ಎಂದರು. ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲು ವಿಚಾರವಾಗಿ ಈ ಕ್ವಾರ್ಟರ್ ವರ್ಷದಲ್ಲಿ ಮಹಾರಾಷ್ಟ್ರ ಹಿಂದಿಕ್ಕಿದ್ದೇವೆ. ಎರಡರಿಂದ ಒಂದನೇ ಸ್ಥಾನಕ್ಕೆ ಬಂದಿದ್ದೇವೆ. ಟ್ರಂಪ್ ಟಾರಿಫ್ ಇದರ ಮೇಲೆ ಪರಿಣಾಮ ಬೀರುತ್ತೆ. ಎಲೆಕ್ಟ್ರಾನಿಕ್ ಮೇಲೆ ಪರಿಣಾಮ ಬೀರಲ್ಲ ಎಂದರು.
ಸೇವಾ ವಲಯದಲ್ಲೂ ನಾವು ಮುಂದಿದ್ದೇವೆ. 50% ಮಾಡಿರೋದನ್ನ 20 ಕ್ಕೆ ಇಳಿಸಬೇಕು. ಟ್ರಂಪ್ ಅಂತ ಮೋದಿ ಹೋಗ್ತಿದ್ರು. ಅಬ್ ಕೀ ಬಾರ್ ಟ್ರಂಪ್ ಸರ್ಕಾರ ಅಂತಿದ್ರು. ಬೇರೆ ದೇಶಗಳಿ ರಾಜಕೀಯಕ್ಕೆ ನಾವು ಹೋಗಬಾರದು. ಆದರೆ ಪ್ರಧಾನಿಯವರು ಹೋದ್ರು. ಅದೇ ಟ್ರಂಪ್ ನಮ್ಮ ಮೇಲೆ ಸೇಡು ತೀರಿಸಿಕೊಳ್ತಿದ್ದಾರೆ. ಇದಕ್ಕೆ ಪ್ರಧಾನಿಯೇ ನೇರ ಹೊಣೆಯಾಗ್ತಾರೆ. ಜಿಎಸ್‌ಟಿ ತಂದವರು ನಾವು, ಆದರೆ ಅನುಷ್ಠಾನ ಸರಿಯಾಗಿಲ್ಲ. ಇದನ್ನ ಮೊದಲಿನಿಂದ ನಾವು ಹೇಳ್ತಿದ್ದೇವೆ. ರಾಹುಲ್ ಗಾಂಧಿ ಇದನ್ನೇ ಹೇಳ್ತಿದ್ದಾರೆ. ಕಳೆದ 9 ವರ್ಷದಿಂದ ಜನ ಸಫರ್ ಆಗಿದ್ದಾರೆ. ರಷ್ಯಾದಿಂದ ಆಯಿಲ್ ಖರೀದಿಸ್ತಿದ್ದೇವೆ. ಕ್ರೂಡ್ ಆಯಿಲ್ ಹಿಂದೆ 140 ಡಾಲರ್ ಇತ್ತು. ಆಗ 59-60 ರೂ ಪೆಟ್ರೋಲ್ ಇತ್ತು. ಗ್ಯಾಸ್ ಸಿಲಿಂಡರ್ ಬೆಲೆ 400 ರೂ ಇತ್ತು.
ಇವತ್ತು ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದೆ. ಆದ್ರೂ ಪೆಟ್ರೋಲ್ ಡಿಸೇಲ್ ಕಡಿಮೆ ಮಾಡಿಲ್ಲ. ಕಡಿಮೆ ಆದ್ಮೇಲೆ ಜನರಿಗೆ ಲಾಭ ಸಿಗಬೇಕಲ್ಲ. ಗ್ರಾಹಕರಿಗೆ ಲಾಭ ಆಗಬೇಕು. ಹೆಚ್ಚಾದಾಗ ಹೆಚ್ಚು,ಕಡಿಮೆ ಆದಾಗ ಕಡಿಮೆ ಮಾಡಬೇಕು. ಆದರೆ ಇವರು ಕಡಿಮೆ ಮಾಡಲಿಲ್ಲ. ಕೋಟ್ಯಂತರ ಬಿಲಿಯನ್ ಡಾಲರ್ ಹಣ ಬಂದಿದೆ. ಇದರ ಲಾಭ ಜನರಿಗೆ ಕೊಟ್ರಾ? ಅಷ್ಟೊಂದು ಹಣ ಎಲ್ಲಿಗೆ ಹೋಗಿದೆ ಕೇಳಬೇಕಲ್ಲ. 9 ವರ್ಷದಿಂದ ಜನ ಸಫರ್ ಆಗ್ತಿದ್ದಾರೆ. ಟ್ಯಾಕ್ಸ್ ಸ್ಲಾಬ್ ಹಾಕಿದ್ದು ಸರಿಯಲ್ಲ. ಇದನ್ನ ರಾಹುಲ್ ಹೇಳ್ತಾನೇ ಇದ್ದಾರೆ ಎಂದು ಜಿಎಸ್‌ಟಿ ಇಳಿಕೆ ಬಗ್ಗೆ ಎಂಬಿಪಿ ತಿಳಿಸಿದರು.
ಮೂಡಾ ಪ್ರಕರಣದ ದೇಸಾಯಿ ಆಯೋಗದಿಂದ ಸಿಎಂಗೆ ಕ್ಲಿನ್ ಚಿಟ್ ವಿಚಾರವಾಗಿ ಮೂಡಾದಲ್ಲಿ ಮೊದಲಿನಿಂದ ಒಂದೇ ಅಭಿಪ್ರಾಯ. ಸಿಎಂ ಮೇಲೆ ಯಾವ ಪಾತ್ರವಿಲ್ಲ. ಅವರ ಪತ್ನಿಯವರ ಮೇಲೂ ಏನೂ ಇಲ್ಲ. ಇದರಲ್ಲಿ ಸುಮ್ನೆ ಕಳಂಕ ತರುವ ಕೆಲಸ ಆಯ್ತು. ಕಮಿಷನ್ ಕೂಡ ಏನೂ ಇಲ್ಲ ಅಂತ ಕೊಟ್ಟಿದೆ. ಕೋರ್ಟ್‌ಗಳಲ್ಲೂ ಸಿಎಂದು ತಪ್ಪಿಲ್ಲ ಅಂದಿದೆ. ಅಧಿಕಾರಿಗಳ ತಪ್ಪಿದ್ದರೆ ಕ್ರಮ ಆಗಲಿದೆ. ಕೋರ್ಟ್ ಹೇಳಿದ ಮೇಲೆ ಮುಗಿದೋಯ್ತು. ನಾವು ಪ್ರಶ್ನಿಸುವಂತಿಲ್ಲ ನೀವು ಕೇಳುವಂತಿಲ್ಲ. ಅದು ಕೋರ್ಟ್ ಗೆ ವ್ಯತಿರಿಕ್ತವಾಗಿ ಆಗುತ್ತದೆ ಎಂದು ಎಂಬಿಪಿ ಸಿಎಂರನ್ನು ಸಮರ್ಥನೆ ಮಾಡಿಕೊಂಡರು.
ಕ್ರಿಮಿನಲ್ ಕೇಸ್ ವಾಪಸ್ ಪಡೆದ ವಿಚಾರವಾಗಿ, ಡಿಕೆಶಿ ಬೆಂಬಲಿಗರ ಕೇಸ್ ಹೆಚ್ಚು ಎಂಬ ಮಾತು. ಆ ರೀತಿ ಸಬ್ಜೆಕ್ಟ್ ಏನೂ ಇರಲಿಲ್ಲ. ಅದರ ಬಗ್ಗೆ ನಾನು ನೋಡಿಲ್ಲ. ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಗೊಂದಲ ವಿಚಾರವಾಗಿ ಈಗ ಒಂದು ಹಂತಕ್ಕೆ ಬಂದಿದೆ. ಸಿಎಂ, ಉಪಮುಖ್ಯಮಂತ್ರಿ ಸಭೆ ನಡೆಸಿದ್ರು. ಎಲ್ಲರೂ ಸಭೆಮಾಡಿ ಚರ್ಚೆ ನಡೆಸಿದ್ದೆವು. ಒಂದು ನಿರ್ಣಯಕ್ಕೆ ನಾವು ಬಂದಿದ್ದೇವೆ. 75 ಸಾವಿರ ಎಕರೆ ಮುಳುಗಡೆ ಆಗ್ತಿದೆ. ಪರಿಹಾರ 2 ಲಕ್ಷ ಕೋಟಿ ಅಲ್ಲ. 75 ಸಾವಿರ ಎಕರೆಗೆ ಸ್ವಾಧೀನ ಆಗಬೇಕು. ಎಕರೆಗೆ 50 ಲಕ್ಷ ಕೇಳ್ತಿದ್ದಾರೆ. ಇದು ಎಲ್ಲಾ ಸೇರಿ 25 ಸಾವಿರ ಕೋಟಿ ಆಗುತ್ತೆ. ಕೆನಾಲ್‌ಗೆ 15 ಸಾವಿರ ಕೋಟಿ ಆಗಬಹುದು ಎಂದರು.
ವಿಜಯಪುರದಲ್ಲಿ ಎಕರೆಗೆ 11 ಕೋಟಿ ಇದೆ. ಬಾಗಲಕೋಟೆಯಲ್ಲಿ 20 ಕೋಟಿ ಇದೆ. ನಗರದ ವ್ಯಾಪ್ತಿಯಲ್ಲಿ ಎಕರೆಗೆ ಹೆಚ್ಚಿದೆ. ಇದೆಲ್ಲವನ್ನೂ ಕನ್ವೀನ್ಸ್ ಮಾಡ್ತಿದ್ದೇವೆ. ಒಟ್ಟು ಯೋಜನೆಗೆ 95 ಸಾವಿರ ಕೋಟಿ ಆಗಬಹುದು. ರೈತರು ಕನ್ವೀನ್ಸ್ ಆಗಿದ್ದಾರೆ. ನೀರಾವರಿ ಜಾಗಕ್ಕೆ ಹೆಚ್ಚು ಕೇಳ್ತಿದ್ದಾರೆ. ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಕನ್ಸಲ್ಟ್ ಆಗ್ಲಿಲ್ಲ ಅಂತ ಹೋಗಿದ್ದಾರೆ. ಕನ್ಸಲ್ಟ್ ಆದ್ರೆ 70, 80ರಷ್ಟು ರೈತರು ಒಪ್ತಾರೆ. ಮೇಜರ್ ಪುನರ್ವಸತಿಯಲ್ಲು ಸಮಸ್ಯೆ ಆಗಿದೆ. ಸರ್ಕಾರ ಏನೂ ದಡ್ಡರಲ್ಲ. ಉಪಮುಖ್ಯಮುಖ್ಯಮಂತ್ರಿ ಬುದ್ಧಿವಂತರಿದ್ದಾರೆ, ಎಲ್ಲವನ್ನೂ ಸರಿಮಾಡ್ತಾರೆ ಎಂದು ಹೇಳಿದರು.
ದೇವನಹಳ್ಳಿ ಭೂಸ್ವಾದೀನ ವಿವಾದ ವಿಚಾರವಾಗಿ, ನಾವು ನಿರ್ಣಯ ತೆಗೆದುಕೊಂಡಿದ್ದೇವೆ. ಒಂದೇ ಒಂದು ಎಕರೆ ತೆಗೆದುಕೊಳ್ಳಲ್ಲ. ಸ್ವಯಂ ಇಚ್ಚೆಯಿಂದ ಯಾರು ಕೊಡ್ತಾರೆ ಪಡೆಯುತ್ತೇವೆ. ಡಿನೊಟಿಫಿಕೇಶನ್ ಮಾಡ್ತೇವೆ. ತಗೊಳ್ಳಿ ಅಂತ ಸ್ವಯಂ ಇಚ್ಚೆಯಿಂದ ಕೊಡುವವರು ಇದ್ದಾರೆ. ವರ್ಷದ ನಂತರ ಭೂಮಿ ಬೆಲೆ ಹೆಚ್ಚಾಗಲಿದೆ. ಆರು ತಿಂಗಳೊಳಗೆ ನೋಟ್ ಹಾಕ್ತೇವೆ. ಯಾರು ಕೊಡ್ತಾರೆ ಅದನ್ನ ತೆಗೆದುಕೊಳ್ತೇವೆ. ಕೊಡದವರನ್ನ ಸ್ವಾಧೀನದಿಂದ ಕೈಬಿಡ್ತೇವೆ. ಅದು ಗ್ರೀನ್ ಬೆಲ್ಟ್ ಆಗಿ ಮುಂದುವರಿಯುತ್ತೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
