ಸುಪ್ರೀಂ ಕೋರ್ಟ್ ತೀರ್ಮಾನದ ಬಗ್ಗೆ ನನಗೆ ಮಿಕ್ಸ್ ಫೀಲ್ ಇತ್ತು. ಒಂದು ಕಡೆ ಬೇಜಾರು ಯಾಕಂದ್ರೆ ಅವರು ನಂಗೆ ಗೊತಿರೋರು, ಅವರ ಜೀವನ ಅವರೇ ಹಾಳ್ ಮಾಡಿಕೊಂಡ್ರು. ಇತ್ತೀಚೆಗೆ ಅವರ ನಡವಳಿಕೆ ನೋಡಿ ಬೇಜಾರ್ ಆಗಿದೆ. ಅವರ ಅಕ್ಕ ಪಕ್ಕ ಒಳ್ಳೆಯವರು ಇಲ್ಲವೇನೋ, ಗೊತ್ತಿಲ್ಲ. 

ಕನ್ನಡದ ಸ್ಟಾರ್ ಹೀರೋ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದು ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ಕೊಟ್ಟಿದ್ದ ಬೇಲ್ ರದ್ದು ಮಾಡಿ ಸುಪ್ರೀಂ ಕೋರ್ಟ್ ಮತ್ತೆ ಜೈಲಿಗೆ ಸೇರಿಸಿದೆ. ಇದೀಗ, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟೂ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಬಗ್ಗೆ ಕನ್ನಡದ ನಟಿ, ಮೋಹಕ ತಾರೆ ಖ್ಯಾತಿಯ ನಟಿ ರಮ್ಯಾ ಏಷ್ಯಾನೆಟ್ ಸುವರ್ಣ ಜೊತೆ ಮಾತನ್ನಾಡಿದ್ದಾರೆ.

ದರ್ಶನ್ ಅರೆಸ್ಟ್ ಬಗ್ಗೆ ರಮ್ಯಾ ರಿಯಾಕ್ಷನ್: 'ನಟ ದರ್ಶನ್ ಹಳೆಯ ದಿನಗಳು ಚೆನ್ನಾಗಿದ್ವು. ದರ್ಶನ್ ಇಂಡಸ್ಟ್ರಿಗೆ ಲೈಟ್ ಮ್ಯಾನ್ ಆಗಿ ಬಂದು ಬೆಳೆದರು. ನಾನು ಅವರ ಜೊತೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ದರ್ಶನ್ ಅರೆಸ್ಟ್ ಆದಾಗ ಮಿಶ್ರ ಪ್ರತಿಕ್ರಿಯೆ ಬಂತು. ಒಂದು ಕಡೆ ನನಗೆ ಬೇಸರವೂ ಆಯ್ತು. ಅವರು ಸಿನಿಮಾ ಇಂಡಸ್ಟ್ರಿಗೆ ಬಂದ ವಿಚಾರವನ್ನ ನನ್ನ ಜೊತೆ ಹಂಚಿಕೊಂಡಿದ್ದರು. ಆದರೆ, ಅವರೇ ತಮ್ಮ ಲೈಫ್ ಹಾಳು ಮಾಡಿಕೊಂಡರು..' ಎಂದಿದ್ದಾರೆ ನಟಿ ರಮ್ಯಾ.

ಅಷ್ಟೇ ಅಲ್ಲ, ಪವಿತ್ರ ಗೌಡ ಬಗ್ಗೆಯೂ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. 'ಪವಿತ್ರಗೌಡ ನನಗೆ ಯಾರು ಅಂತ ಗೊತ್ತಿರಲಿಲ್ಲ. ಈ ಕೇಸ್ ಆದ ಮೇಲೆ ಗೊತ್ತಾಗಿದ್ದು. ಅವರು ಒಬ್ಬ ತಾಯಿ, ಅವರಿಗೆ ಮಗಳಿದ್ದಾರೆ. ಆದರೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಅನಿಸುತ್ತೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಹೋಗಿದೆ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಬಾರೋ ಹಾಗಾಗಿದೆ.

ಸುಪ್ರೀಂ ಕೋರ್ಟ್ ತೀರ್ಮಾನ ನನಗೆ ಮಿಕ್ಸ್ ರೆಯಕ್ಷನ್ ಇತ್ತು. ಒಂದು ಕಡೆ ಬೇಜಾರು ಯಾಕಂದ್ರೆ ಅವರು ನಂಗೆ ಗೊತಿರೋರು,

ಅವರ ಜೀವನ ಅವರೇ ಹಾಳ್ ಮಾಡಿಕೊಂಡ್ರು. ಇತ್ತೀಚೆಗೆ ಅವರ ನಡವಳಿಕೆ ನೋಡಿ ಬೇಜಾರ್ ಆಗಿದೆ. ಅವರ ಅಕ್ಕ ಪಕ್ಕ ಒಳ್ಳೆಯವರು ಇಲ್ಲವೇನೋ, ಗೊತ್ತಿಲ್ಲ. ಸೆಲೆಬ್ರೇಟಿ ಅದ ಮೇಲೆ ಸ್ವಲ್ಪ ಜವಾಬ್ದಾರಿ ಇರಬೇಕು.' ಎಂದಿದ್ದಾರೆ ನಟಿ ರಮ್ಯಾ.

ಇನ್ನು ಈ ಬಗ್ಗೆ ನಿರ್ಮಾಪಕ ಕೆ. ಮಂಜು ಕೂಡ ಮಾತನ್ನಾಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ನಿರ್ಮಾಪಕ ಕೆ ಮಂಜು 'ದರ್ಶನ್ ಬಗ್ಗೆ ಏನೇನೊ ಮಾತಾಡ್ತಿದ್ದಾರೆ, ಸಾರ್ವಜನಿಕ ವಾಗಿ ಓಡಾಡುವಾಗ ಬೆನ್ನು ನೋವು ತೋರಿಸೋಕೆ ಆಗಲ್ಲ.. ದರ್ಶನ್ ಗೆ ಯಾವ ಬೆನ್ನು ನೋವು ಇಲ್ಲ ಅಂತ ಕೆಲವ್ರು ಹೇಳಿದ್ರು.. ಆದರೆ ಅವರ ನೋವು ಅವರಿಗೆ ಗೊತ್ತು. ಕಾನೂನು ಗೌರವಿಸಬೇಕು ದರ್ಶನ್ ಅದನ್ನ ಮಾಡಿದ್ದಾರೆ ತುಂಬಾ ಖುಷಿ ಅಯ್ತು . ದರ್ಶನ್ ಒಳ್ಳೆ ಕಲಾವಿದ ಅವರಿಗೆ ಒಳ್ಳೆಯದಾಗಬೇಕು..

ದರ್ಶನ್ ಊಟ ಮಾಡೋದು ಕುಳಿತುಕೊಳ್ಳೋದು ತಪ್ಪು ಅಂತ ಹೇಳಬಾರದು. ಚಿಕ್ಕಣ್ಣ ಜೊತೆ ಸಿನಿಮಾ ನೋಡಿದ್ದು ತಪ್ಪು ಅಂತ ಗೊತಿದ್ರೆ ದರ್ಶನ್ ಹಾಗೆ ಮಾಡುತ್ತಿರಲಿಲ್ಲ. ಈಗ ನಟ ದರ್ಶನ್ ಅಭಿಮಾನಿಗಳು ತಾಳ್ಮೆಯಿಂದ ಇರಬೇಕು. ಕೆಟ್ಟದಾಗಿ ನಡೆದುಕೊಂಡರೆ ಅದರಿಂದ ಸಮಾಜಕ್ಕೆ, ಸರ್ಕಾರಕ್ಕೆ ಕೆಟ್ಟ ಸಂದೇಶ ಹೋಗುತ್ತೆ. ಇದ್ರಿಂದ ದರ್ಶನ್ ಅವರಿಗೇ ತೊಂದ್ರೆ ಆಗುತ್ತೆ.

ಚಿತ್ರರಂಗದಿಂದ ದರ್ಶನ್ ಅವರನ್ನ ದೂರ ಇಡೊ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ದರ್ಶನ್ ಹೆಸರು ತೆಗೆದ್ರೆ ಕೇಸ್ ಏನು ಇರಲ್ಲ.' ಎಂದಿದ್ದಾರೆ ಕೆ ಮಂಜು.