ವೈಫೈ ಕನೆಕ್ಷನ್ ಸರ್ಚಿಂಗ್ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶ ವಿರೋಧಿ ಯೂಸರ್ ಐಡಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ (ಅ.30): ವೈಫೈ ಕನೆಕ್ಷನ್ ಸರ್ಚಿಂಗ್ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶ ವಿರೋಧಿ ಯೂಸರ್ ಐಡಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ನಡೆದಿದ್ದು, ಇದರಿಂದ ಆತಂಕಗೊಂಡಿರುವ ಸ್ಥಳೀಯರು, ದೇಶದ್ರೋಹಿಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಜಿಗಣಿ ಬಳಿಯ ಕಲ್ಲುಬಾಳು ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ವೈಫೈ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಉಂಟಾಗಿತ್ತು. ಈ ವೇಳೆ ಕೆಲವರು ಮೊಬೈಲ್‌ನಲ್ಲಿ ವೈಫೈ ಕನೆಕ್ಷನ್ ಸರ್ಚಿಂಗ್ ಮಾಡಿದ್ದಾರೆ. ಆಗ ಪಾಕಿಸ್ತಾನ ಜಿಂದಾಬಾದ್ ಎಂಬ ಯೂಸರ್ ಐಡಿ ನೇಮ್ ತೋರಿಸಿದೆ. ಇದನ್ನು ಕಂಡ ಜನರು ಶಾಕ್‌ ಆಗಿದ್ದು, ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಯಾವುದೋ ದೇಶ ವಿರೋಧಿ ಭಯೋತ್ಪಾದಕ ಶಕ್ತಿ ಇದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಭಜರಂಗದಳ ಕಾರ್ಯಕರ್ತರು ಜಿಗಣಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಎನ್‌ಸಿಆರ್ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಸ್ಲಿಂ ವ್ಯಕ್ತಿ ಮೇಲೆ ಅನುಮಾನ

ಬ್ಯಾಂಕ್‌ ವೈಫೈ ಸಮಸ್ಯೆಗೆ ಸರ್ವಿಸ್ ಮಾಡಲು ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ನೀಡಲಾಗಿತ್ತು. ಈ ದೇಶದ್ರೋಹಿ ಐಡಿ ಕಂಡ ಬಳಿಕ ಅನುಮಾನಗೊಂಡು ಆ ವ್ಯಕ್ತಿಗೆ ಕರೆ ಮಾಡಲಾಗಿದ್ದು, ಆತನ ಫೋನ್ ಸ್ವಿಚ್ಡ್‌ಆಫ್ ಆಗಿದೆ. ಈ ಕಾರಣದಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.