ನಾನು ಸವಿತಾ ಸಮಾಜಕ್ಕೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸಮಾಜದವರು ಕೂಡ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಆದರೂ ನನ್ನಿಂದ ಸಮುದಾಯಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಬೆಳಗಾವಿ (ಅ.30): ನಾನು ಸವಿತಾ ಸಮಾಜಕ್ಕೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸಮಾಜದವರು ಕೂಡ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಆದರೂ ನನ್ನಿಂದ ಸಮುದಾಯಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಅ.25ರಂದು ಸಿ.ಟಿ.ರವಿ ಅವರು ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿದ್ದಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ಸವಿತಾ ಸಮುದಾಯದವರನ್ನು ನಿಂದಿಸಿದ್ದಾರೆ ಎನ್ನಲಾದ ವೈರಲ್‌ ವಿಡಿಯೋ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸವಿತಾ ಸಮಾಜಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾಗಿ ಕೆಲವರು ಬಿಂಬಿಸುತ್ತಿದ್ದಾರೆ. ಆದರೆ, ನಾನು ಆ ರೀತಿ ಹೇಳಿಲ್ಲ. ತಪ್ಪು ಗ್ರಹಿಕೆಗೆ ಅವಕಾಶ ಮಾಡಿಕೊಡಬೇಡಿ. ಸವಿತಾ ಸಮಾಜಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ತನಿಖೆಗೆ ನಾನು ಆಗ್ರಹಿಸುತ್ತೇನೆ. ಸಮಾಜದವರು ಕೂಡ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಹಿಂದೂ ಸಮಾಜ ಒಡೆಯುವ ಸಂಚು: ಹಿಂದೂ ಸಮಾಜವನ್ನು ಒಡೆಯುವುದು ಮುಂದೊಂದು ದಿನ ರಾಷ್ಟ್ರ ವಿರೋಧಿ ಸಂಚು ಮಾಡುವವರಿಗೆ ದಾರಿ ಆಗುತ್ತದೆ. ಯಾರೂ ಹಿಂದೂ ಸಮಾಜವನ್ನು ಬಿಡಬಾರದು. ಬದಲಾಗಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯಂತ ದೋಷಗಳನ್ನು ತೊಡೆದುಹಾಕಿ ಹಿಂದೂ ಸಮಾಜವನ್ನು ಸಶಸ್ತ್ರಗೊಳಿಸಬೇಕು. ನಮಗೆ ಬಸವಣ್ಣನವರು ಬೇಕು, ಅಂಬೇಡ್ಕರ್ ಕೂಡ ಬೇಕು. ಹಿಂದುಗಳನ್ನು ಒಗ್ಗಟ್ಟಾಗಿ ಇಡುವ ಕೆಲಸ ಮಾಡಬೇಕು ಎಂದರು.

ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪೋಷಿಸುವ ಕಾರ್ಯ ನಡೆಯಬೇಕು

ಆಧುನಿಕ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳನ್ನು ಯಂತ್ರಗಳಂತೆ ಸಿದ್ಧಪಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪೋಷಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು. 1999 ರಲ್ಲಿ 70,000 ಕ್ಕಿಂತ ಹೆಚ್ಚು ಯುವಕರ ಸಂಘಗಳಿದ್ದವು, ಆದರೆ, ಇದೀಗ 2-3 ಸಾವಿರ ಯುವಕ ಸಂಘಗಳಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಕಾಯ್ದೆ ಕಡ್ಡಾಯ ಮಾಡಿದ ಪರಿಣಾಮ ಯುವ ಸಂಘಗಳು ಕ್ಷೀಣಿಸಿವೆ. ಸ್ಥಿರ ನಿಧಿಯನ್ನು ನೀಡದಿರುವ ಕಾರಣ ಸಂಘಗಳಿಗೆ ಯಾವ ಪ್ರಯೋಜನವಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.

ಕಲೆಯನ್ನೇ ಆರಾಧಿಸಿ ಬದುಕಿದ ಹಲವಾರು ಕಲಾವಿದರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಕೂಡಲೇ ಇದರತ್ತ ಗಮನಹರಿಸಿ ಅವರ ವೃದ್ಧಾಪ್ಯ ಕಾಲದಲ್ಲಿ ಸರ್ಕಾರ ಮಾಶಾಸನ ನೀಡಿ ನೆರವಾಗಬೇಕು. ಕಲೆ ಯನ್ನು ನಂಬಿಕೊಂಡು ಬದುಕು ಸಾಗಿಸುವ ಕಲಾವಿದರಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ಶಕ್ತಿ ತುಂಬಲು ಮಾಶಾಸನದ ಅವಶ್ಯಕತೆಯಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಯುವ ಜನ ಮೇಳಗಳು, ರಾಜ್ಯ ಜಿಲ್ಲಾ ಯುವ ಪ್ರಶಸ್ತಿಗಳು, ಯುವ ಸಂಪರ್ಕ ಸಭೆಗಳು, ಸಂಘಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಮಗ್ರಿಗಳ ಯೋಜನೆ, ಗರುಡಿ ಮನೆ ಉಪಕರಣಗಳು ನೀಡುವುದನ್ನು ಸರ್ಕಾರ ಪುನರಾರಂಭಿಸಬೇಕು ಎಂದು ಹೇಳಿದರು.