ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಮಂಗಳವಾರದಿಂದ ತೆಲಂಗಾಣ ಮಾದರಿಯ ಹೊಸ ‘ಪಿ ಕ್ಯಾಪ್’ ಧರಿಸಲಿದ್ದಾರೆ. ತನ್ಮೂಲಕ ದಶಕಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಚೋಚ್ ಕ್ಯಾಪ್‌ಗೆ ಪೊಲೀಸ್‌ ಇಲಾಖೆ ಅಂತಿಮ ವಿದಾಯ ಹೇಳಲಿದೆ.

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಮಂಗಳವಾರದಿಂದ ತೆಲಂಗಾಣ ಮಾದರಿಯ ಹೊಸ ‘ಪಿ ಕ್ಯಾಪ್’ ಧರಿಸಲಿದ್ದಾರೆ. ತನ್ಮೂಲಕ ದಶಕಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಚೋಚ್ ಕ್ಯಾಪ್‌ಗೆ ಪೊಲೀಸ್‌ ಇಲಾಖೆ ಅಂತಿಮ ವಿದಾಯ ಹೇಳಲಿದೆ.

ವಿಧಾನಸೌಧ ಬಾಕ್ವೆಂಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಂಕೇತಿಕವಾಗಿ ಕೆಲ ಪೊಲೀಸರಿಗೆ ಹೊಸ ಕ್ಯಾಪ್ ವಿತರಿಸಲಿದ್ದಾರೆ. ಇದೇ ವೇಳೆ ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೂ ಅವರು ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಗಣ್ಯರು

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಸೇರಿ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್

ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯೆಯಲ್ಲಿ ಅಚ್ಚೊತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಎಸ್‌ಐ, ಪಿಎಸ್‌ಐ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೇಲಧಿಕಾರಿಗಳು ಈ ಹಿಂದಿನಂತೆಯೇ ಖಾಕಿ ಬಣ್ಣದ ಕ್ಯಾಪ್‌ ಧರಿಸಲಿದ್ದಾರೆ.

ಕೆಲ ತಿಂಗಳ ಹಿಂದೆ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಹೊಸ ಪಿ ಕ್ಯಾಪ್ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದರು.