ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅನಾರೋಗ್ಯದ ನಡುವೆಯೂ ಅವರು ಆಸ್ಪತ್ರೆಯಲ್ಲೇ ಮಹಿಳಾ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿ ಗಮನ ಸೆಳೆದಿದ್ದಾರೆ.

ದಾವಣಗೆರೆ, (ನ. 3): ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಬಳಲುತ್ತಿರುವ ಎಂಪಿ ರೇಣುಕಾಚಾರ್ಯ ಅವರು ನಿನ್ನೆ ರಾತ್ರಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅನಾರೋಗ್ಯದ ನಡುವೆ ಮಹಿಳಾ ಕ್ರಿಕೆಟ್ ಪಂದ್ಯ ವೀಕ್ಷಿಸಿ ರೇಣುಕಾಚಾರ್ಯ:

ಅನಾರೋಗ್ಯ ನಡುವೆಯೂ ಕ್ರಿಕೆಟ್ ಪ್ರೀತಿ

ಅನಾರೋಗ್ಯದ ನಡುವೆಯೂ ರೇಣುಕಾಚಾರ್ಯ ಅವರ ಉತ್ಸಾಹ ಕ್ಷೀಣಿಸಿಲ್ಲ. ನಿನ್ನೆ ನಡೆದ ಭಾರತ-ಸೌತ್ ಆಫ್ರಿಕಾ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಅವರು ಬೆಂಬಲಿಗರ ಮೊಬೈಲ್ ಮೂಲಕ ವೀಕ್ಷಿಸಿದರು. ಆಸ್ಪತ್ರೆಯ ವಾರ್ಡ್‌ನಲ್ಲಿ, ಚಿಕಿತ್ಸೆಯ ಒತ್ತಡದಲ್ಲೂ ಕ್ರಿಕೆಟ್‌ ಬಗ್ಗೆ ತಮ್ಮ ಅಭಿಮಾನ ತೋರಿಸಿದರು. ಸದ್ಯ ಎಂಪಿ ರೇಣುಕಾಚಾರ್ಯರ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿ ಲಭಿಸಿದೆ.