ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಸೋನಿಯಾ ಗಾಂಧಿ ನಿರ್ದೇಶನದಂತೆ ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ ಎಂಬ ಹೊಸ ಜಾತಿಗಳನ್ನು ಸೃಷ್ಟಿಸಿ,ದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು..
ವಿಜಯಪುರ (ಸೆ.21): ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಣತಿಯಂತೆ ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದ್ದು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಎನ್ನುವುದು ಪಕ್ಷದ ಹೈಕಮಾಂಡ್ ಕೊಟ್ಟಿರುವ ಹೊಸ ಹೊಸ ನಾಮಗಳು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ಕ್ರಿಶ್ಚಿಯನ್ ರಾಷ್ಟ್ರ, ಕೆಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆಂದು ಹೇಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾತಿ ವರ್ಗೀಕರಣ ಮಾಡಿದ್ದಾರೆ. ಈ ರೀತಿಯ ಹೊಸ ಜಾತಿಗಳು ನಮ್ಮ ದೇಶದಲ್ಲಲ್ಲ, ವಿಶ್ವದಲ್ಲೇ ಇಲ್ಲ. ಸೋನಿಯಾ ಗಾಂಧಿ ನಿರ್ದೇಶನದ ಮೇಲೆ ಸಿಎಂ ಸಿದ್ದರಾಮಯ್ಯ ಕೀಳುಮಟ್ಟದ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ದಸರಾ ವಿವಾದದ ಪಿಎಲ್ಐ ವಜಾ, ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ!
ಜಾತಿಗಣತಿ ಮಾಡಲು ರಾಜ್ಯಕ್ಕೆ ಅಧಿಕಾರವಿಲ್ಲ:
ಈ ಕುರಿತು ಅವರದ್ದೆ ಸಚಿವ ಸಂಪುಟದಲ್ಲಿ ಗೊಂದಲವಾಗಿದೆ. ಸಿದ್ದರಾಮಯ್ಯ ಇದನ್ನೆಲ್ಲ ಕೈಬಿಡಬೇಕು. ಜಾತಿಗಣತಿ ಮಾಡುವುದಕ್ಕೆ ರಾಜ್ಯಕ್ಕೆ ಅಧಿಕಾರವಿಲ್ಲ. ಕೇಂದ್ರಕ್ಕೆ ಇದೆ. ಲಿಂಗಾಯತರು ಹಾಗೂ ಒಕ್ಕಲಿಗರು ಕಡಿಮೆ ಇದ್ದಾರೆಂದು, ಮುಸ್ಲಿಮರು ಹೆಚ್ಚಿದ್ದಾರೆ ಎಂದು ತೋರಿಸುವ ನಾಟಕ ನಡೆದಿದೆ ಎಂದು ಕಿಡಿಕಾರಿದರು.
ಬಾನು ಮುಷ್ತಾಕ್ ವಿರುದ್ಧ ಕೋರ್ಟ್‌ಗೆ ಹೋಗಿದ್ದೇ ತಪ್ಪು:
ಬಾನು ಮುಷ್ತಾಕ ದಸರಾ ಉದ್ಘಾಟನೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ, ಇದು ಧಾರ್ಮಿಕ ಮನೋಭಾವನೆಗೆ ಸಂಬಂಧಿಸಿದ್ದು. ಕೋರ್ಟಿಗೆ ಹೋಗಿದ್ದು ತಪ್ಪು, ಕೋರ್ಟಿನಲ್ಲಿ ಪ್ರಶ್ನೆ ಮಾಡಬಾರದಾಗಿತ್ತು ಎಂದರು.
ಇದನ್ನೂ ಓದಿ: ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದ, ಪ್ರತಾಪ್ ಸಿಂಹ ಸೇರಿ ಹಲವರು ಸಲ್ಲಿಸಿದ್ದ ಪಿಐಎಲ್ ಹೈಕೋರ್ಟ್ ವಜಾ
ದಸರಾ ಉದ್ಘಾಟನೆಗೆ ದಲಿತರಿಗೆ ಅವಕಾಶ ನೀಡಬಾರದು ಎಂದು ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿ, ಕೆಲವೊಂದು ಎಡಿಟರ್ ಇದ್ದಾರೆ. ಪ್ರಿಯಾಂಕ್ ಖರ್ಗೆ, ವಿಜಯೇಂದ್ರ ಕೂಡಿಕೊಂಡು ಹೇಳಿಕೆಯನ್ನು ಎಡಿಟ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
