ಮಹೇಶ್ ಶೆಟ್ಟಿ ತಿಮರೋಡಿ ಪತ್ನಿ ಬ್ಯಾಂಕ್ ಖಾತೆಯಲ್ಲಿ ಹಣದ ವಹಿವಾಟು ಪತ್ತೆ, ಇದೀಗ ತನಿಖೆಗೆ ಮಹತ್ವದ ಸುಳಿವು ನೀಡಿದೆ. ಎಸ್‌ಐಟಿ ಅಧಿಕಾರಿಗಳು ತಿಮರೋಡಿ ಮನೆಗೆ ಭೇಟಿ ನೀಡಿ ತಿಮರೋಡಿ ಪತ್ನಿ ಹೇಳಿಕೆ ಪೆಡೆದಿದ್ದರು. ಈ ವೇಳೆ ಬ್ಯಾಂಕ್ ಖಾತೆ ವಿವರದಲ್ಲಿ ಈ ಮಾಹಿತಿ ಪತ್ತೆಯಾಗಿದೆ.

ಬೆಳ್ತಂಗಡಿ (ಸೆ.24) ಧರ್ಮಸ್ಥಳ ಪ್ರಕರಣದ ತನಿಖೆ ಹಲವು ಆಯಾಮಗಳಲ್ಲಿ ನಡೆಯುತ್ತಿದೆ. ಬುರುಡೆ ತಂದು ಗಂಭೀರ ಆರೋಪ ಮಾಡಿದ ಚಿನ್ನಯ್ಯ ಹೇಳಿದ ಕಡೆ ಉತ್ಖನನ ಮಾಡಿದ್ದ ಎಸ್‌ಐಟಿ ತಂಡ, ಬಳಿಕ ಸೌಜನ್ಯ ಮಾವ ವಿಠಲ ಗೌಡ ಹೇಳಿದ ಕಡೆ ಉತ್ಖನನ ಮಾಡಿದೆ. ಹಲವರ ವಿಚಾರಣೆಗೆ ಒಳಪಡಿಸಿದೆ. ಇದರ ನಡುವೆ ಬರುಡೆ ಷಡ್ಯಂತ್ರದ ಸೂತ್ರಧಾರಿ ಎಂದೇ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡದಿಂದ ಗಡೀಪಾರು ಆದೇಶ ನೀಡಲಾಗಿದೆ. ಇದೀಗ ಎಸ್‌ಐಟಿ ಅಧಿಕಾರಿಗಳ ತಂಡ ಮಹೇಶ್ ಶೆಟ್ಟಿ ತಮರೋಡಿ ಮನೆಗೆ ಭೇಟಿ ನೀಡಿ ತಿಮರೋ ಪತ್ನಿಯ ಹೇಳಿಕೆ ಪಡೆದಿದೆ. ಈ ವೇಳೆ ತಿಮರೋಡಿ ಪತ್ನಿಯ ಬ್ಯಾಂಕ್ ಖಾತೆಯಲ್ಲಿ ಹಣದ ವ್ಯವಹಾರ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಬುರುಡೆ ಪ್ರಕರಣದ ತನಿಖೆ ಹಿನ್ನಲೆಯಲ್ಲಿ ತಿಮರೋಡಿ ಮನೆಗೆ ಭೇಟಿ

ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ಇಂದು ದಿಢೀರ್ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬೇಟಿ ನೀಡಿದ್ದಾರೆ. ಸಂಜೆ ತಿಮರೋಡಿಗೆ ಮನೆಗೆ ತೆರಳಿದ ಎಸ್ಐಟಿ ಅಧಿಕಾರಿಗಳ ಹಲವು ಮಾಹಿತಿ ಕಲೆ ಹಾಕಿದ್ದಾರೆ. ತಿಮರೋಡಿ ಪತ್ನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ತಿಮರೋಡಿ ಪತ್ನಿ ಬ್ಯಾಂಕ್ ಖಾತೆ ವಿವರ

ತಿಮರೋಡಿ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದಾರೆ. ತಿಮರೋಡಿ ಪತ್ನಿ ಬ್ಯಾಂಕ್ ಖಾತೆಯಲ್ಲಿ ಭಾರಿ ಹಣದ ವಹಿವಾಟು ಪತ್ತೆಯಾಗಿದೆ. ಪತ್ನಿ ಖಾತೆಯಿಂದ ಹಣ ವರ್ಗಾವಣೆ ಕುರಿತು ತಿಮರೋಡಿ ಪತ್ನಿಯಿಂದ ಹೇಳಿಕೆ ಪಡೆಯಲಾಗಿದೆ.

ಮನೆಯಲ್ಲಿರದ ಮಹೇಶ್ ಶೆಟ್ಟಿ ತಿಮರೋಡಿ

ಪುತ್ತೂರು ಸಹಾಯಕ ಪೊಲೀಸ್ ಆಯಕ್ತರು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಹೊರಡಿಸುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆಯಾಗಿದ್ದಾರೆ. ಹೊರಗಡೆ ಎಲ್ಲೂ ಕಾಣಿಸಿಕೊಂಡಿಲ್ಲ.ಇಂದು ಎಸ್ಐಟಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ವೇಳೆಯೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ.

ರಾಯಚೂರಿನ ಸಾನ್ವಿಗೆ ಗಡೀಪಾರು ಆದೇಶ

ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಲ್ಲಿ ಪ್ರಮುಖವಾಗಿ ಬೆಳ್ತಂಗಡಿಯ ಧರ್ಮಸ್ಥಳದಲ್ಲಿ ಅಶಾಂತಿ ಸೃಷ್ಟಿಸಿದ, ಪ್ರಚೋದನಕಾರಿ ಭಾಷಣ ಮಾಡಿದ, ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಹಲವು ಆರೋಪ ಹೊತ್ತಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರಿನ ಸಾನ್ವಿಗೆ ಗಡೀಪಾರು ಮಾಡುವಂತೆ ಆದೇಶ ನೀಡಲಾಗಿದೆ. ಆದರೆ ಮಹೇಶ್ ಶೆಟ್ಟಿ ತಿಮರೋಡಿ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾರೆ.