ಚಾಮರಾಜನಗರದ ಯಳಂದೂರಿನ ಎಸ್‌ಡಿವಿಎಸ್ ಶಾಲೆಯಲ್ಲಿ, ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ ವಿದ್ಯಾರ್ಥಿಗೆ ಶಿಕ್ಷಕಿ ಭಾನುಮತಿ ಮನಸೋಇಚ್ಛೆ ಥಳಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಯ ಮೈಮೇಲೆ ಬಾಸುಂಡೆಗಳಾಗಿದ್ದು, ಪಾಲಕರ ಆಕ್ರೋಶದ ಹಿನ್ನೆಲೆಯಲ್ಲಿ ಶಾಲಾಡಳಿತ ಮಂಡಳಿ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿದೆ.
ಚಾಮರಾಜನಗರ (ಸೆ.17): ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಪ್ರಕರಣದಲ್ಲಿ ಶಿಕ್ಷಕಿಯನ್ನ ಶಾಲಾಡಳಿತ ಮಂಡಳಿ ವಜಾಗೊಳಿಸಿದೆ ಯಳಂದೂರಿನ ಎಸ್‌ಡಿವಿಎಸ್ ಶಾಲೆಯಲ್ಲಿ ಘಟನೆ ನಡೆದಿತ್ತು. ಶಿಕ್ಷಕಿ ಭಾನುಮತಿ ಎಂಬುವವರು ವಿದ್ಯಾರ್ಥಿಯೊರ್ವನ ಮೇಲೆ ಮನಸೋಇಚ್ಛೆ ಥಳಿತ ನಡೆಸಿದ್ದರು.
ಈ ಘಟನೆಯಿಂದ ಪಾಲಕರು ಆಕ್ರೋಶಗೊಂಡಿದ್ದರು. ಶಿಕ್ಷಕಿಯ ಪೈಶಾಚಿಕ ಕೃತ್ಯ ನಡೆಸಿದ ಹಿನ್ನೆಲೆ ಶಾಲಾಡಳಿತ ಮಂಡಳಿ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿದ್ದು, ಕಾನೂನು ಕ್ರಮಕ್ಕೆ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: ಬೀದರ್: ಊಟದಲ್ಲಿ ಹುಳು ಪ್ರತ್ಯಕ್ಷ, ಪ್ರಶ್ನೆ ಮಾಡಿದ ವಿದ್ಯಾರ್ಥಿಗೆ ಥಳಿತ!
ಶಿಕ್ಷಕಿಯ ರೌದ್ರಾವತಾರಕ್ಕೆ ವಿದ್ಯಾರ್ಥಿ ಮೈಮೇಲೆಲ್ಲ ಬಾಸುಂಡೆ!
ವಿದ್ಯಾರ್ಥಿ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಶಿಕ್ಷಕಿ ಭಾನುಮತಿಯವರ ಬಳಿ ಎರಡು-ಮೂರು ಬಾರಿ ಅನುಮತಿ ಕೇಳಿದ್ದಾನೆ. ಆದರೆ, ಶಿಕ್ಷಕಿಯು 'ಮೊದಲು ನೋಟ್ಸ್ ಬರೆದುಕೋ' ಎಂದು ಹೇಳಿ, ವಿದ್ಯಾರ್ಥಿಯ ಅವಸರವನ್ನು ನಿರ್ಲಕ್ಷಿಸಿದ್ದಾರೆ. ವಿದ್ಯಾರ್ಥಿಯು ಪದೇಪದೇ ಕೇಳಿಕೊಂಡಾಗ, ಶಿಕ್ಷಕಿ ದೊಣ್ಣೆಯಿಂದ ವಿದ್ಯಾರ್ಥಿಯ ಕೈ, ಭುಜ ಮತ್ತು ತಿಕದ ಭಾಗದ ಮೇಲೆ ಥಳಿಸಿದ್ದಾರೆ. ವಿದ್ಯಾರ್ಥಿಯ ಮೈಮೆಲೆಲ್ಲಾ ಬಾಸುಂಡೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
