ಬುರುಡೆ ಗ್ಯಾಂಗ್ ಬುರುಡೆ ಬಿಟ್ಟಿದ್ದು ಜಗತ್ತಿಗೆ ಗೊತ್ತಾಗಿದೆ. ಬುರುಡೆ ಗ್ಯಾಂಗ್ ಬಂಡವಾಳವನ್ನು ಅಣ್ಣಪ್ಪನೇ ಬಯಲು ಮಾಡಿದ್ದಾನೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಬೆಂಗಳೂರು (ಅ.30): ಬುರುಡೆ ಗ್ಯಾಂಗ್ ಬುರುಡೆ ಬಿಟ್ಟಿದ್ದು ಜಗತ್ತಿಗೆ ಗೊತ್ತಾಗಿದೆ. ಬುರುಡೆ ಗ್ಯಾಂಗ್ ಬಂಡವಾಳವನ್ನು ಅಣ್ಣಪ್ಪನೇ ಬಯಲು ಮಾಡಿದ್ದಾನೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ಕೋರ್ಟ್ ಮೆಟ್ಟಿಲಲ್ಲಿ ಅಣ್ಣಪ್ಪ ತೀರ್ಪು ನೀಡ್ತಾನೆ. ನಾನು ಅಣ್ಣಪ್ಪನನ್ನು ತುಂಬಾ ನಂಬಿದ್ದೇನೆ. ಬುರುಡೆ ಗ್ಯಾಂಗ್ ಸಮಾಜದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿತ್ತು. ಮಾಧ್ಯಮಗಳು ಕೆದಕಿ ಸುದ್ದಿ‌ ಬಿತ್ತರಿಸುತ್ತಿದ್ದಂತೆ ನಿಜ ಬಯಲಿಗೆ ಬಂತು. ಹೋರಾಟದ ಉದ್ದಕ್ಕು ಗಳಿಸಿದ ಹಣ ಉಳಿಸಿಕೊಂಡು ಹೋಗ್ಬೇಕು ಅಂದ್ರೆ ಜೈಲಿಗೆ ಹೋಗದೆ ಇರ್ಬೇಕು ಅಂತಾ ಕೇಸ್ ವಾಪಾಸ್ ತಗೋತಿದ್ದಾರೆ ಎಂದರು.

ಕೇಸ್ ವಾಪಾಸ್ ತಗೊಂಡು ಮತ್ತೊಂದು ಷಡ್ಯಂತ್ರ ಕೂಡ ಮಾಡುವ ಸಾಧ್ಯತೆ ಇದೆ. ಇಷ್ಟು ದಿನ ಧರ್ಮಸ್ಥಳ ಹಿಂದೂ ಸಮಾಜ ಸರಿ ಇಲ್ಲ ಅಂತಾ ಬಿಂಬಿಸಿದ್ರು. ಜೈನರು ಹಾಗೂ ಇತರೆ ಹಿಂದೂ ಸಮಾಜದ ಮೇಲೆ ಬೆಂಕಿ ಹತ್ತಿಸುವ ಕೆಲಸ ಮಾಡಿದ್ರು. ಕೇಸ್ ವಾಪಾಸ್ ತಗೊಂಡ ಕೂಡಲೆ ಸಮಾಜ ಬಿಡುವಂತಿಲ್ಲ. ಸೌಜನ್ಯಳ ಪರ ನಾವಿದ್ದೇವೆ ಆಕೆಗೆ ನ್ಯಾಯ ಸಿಗ್ಬೇಕು. ಇಷ್ಟು ದಿನ ಬುರುಡೆ ಬಿಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇನ್ವೆಸ್ಟಿಗೇಷನ್‌ಗೆ ಆದ ಖರ್ಚು ವೆಚ್ಚವನ್ನು ಬುರುಡೆ ಗ್ಯಾಂಗ್ ಭರಿಸ್ಬೇಕು. ಬುರುಡೆ ಗ್ಯಾಂಗ್ ವೆಚ್ಚವನ್ನು ಸರ್ಕಾರಕ್ಕೆ ವಾಪಾಸ್ ನೀಡ್ಬೇಕು ಎಂದು ಸೂಲಿಬೆಲೆ ಆಗ್ರಹಿಸಿದರು.

ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ ಚಿಂತನೆ ಮೂಡಿಸಬೇಕು

ಹಿಂದಿನ ಕಾಲದ ವಿದ್ಯಾರ್ಥಿಗಳಿಗೆ ಹಾಗೂ ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಹಲವು ವ್ಯತ್ಯಾಸಗಳಿವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹಲವು ಕೊರತೆಗಳಿದ್ದವು. ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ರೀತಿಯ ಅನುಕೂಲತೆಗಳಿದ್ದರೂ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಈ ಕಾಲಘಟ್ಟದ ವಿದ್ಯಾರ್ಥಿಗಳಲ್ಲಿ ಕಾಣಸಿಗುವ ಎರಡು ಬಹುಮುಖ್ಯ ಸಮಸ್ಯೆಗಳೆಂದರೆ ಏಕಾಗ್ರತೆ ಹಾಗೂ ಸೂಕ್ಷ್ಮ ಸಂವೇದನೆಗಳ ಕೊರತೆ. ಇವುಗಳನ್ನು ನಿವಾರಿಸಲು ವಿವಿಧ ಮೌಲ್ಯಯುತ ಸನ್ನಿವೇಶಗಳನ್ನು ಸೃಷ್ಟಿಸುವ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕರದ್ದು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ‘ವಿವೇಕ ವಿಜಯ’ ಉಪನ್ಯಾಸ ಕಾರ್ಯಕ್ರಮದ ಎರಡನೇ ಅವಧಿಯ ‘ರಾಷ್ಟ್ರ ರಕ್ಷಣಾ-ವಿವೇಕ ಶಿಕ್ಷಣ’ ಎಂಬ ಶೀರ್ಷಿಕೆಯಡಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ಉಪನ್ಯಾಸದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.ಶಿಕ್ಷಕರು ಪಠ್ಯ ಚಟುವಟಿಕೆಗಳಿಂದ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮೌಲ್ಯಗಳನ್ನು ಕಳೆದುಕೊಂಡು ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ಶಿಕ್ಷಕನಾದವನು ಮೌಲ್ಯಗಳನ್ನು ಪುನರ್ ಸ್ಥಾಪಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.