ಕ್ಯಾಡ್‌ಬರೀಸ್ ಡೈರಿ ಮಿಲ್ಕ್ ತನ್ನ ಚಾಕೊಲೇಟ್ ಪ್ಯಾಕಿಂಗ್‌ನಲ್ಲಿ ಕನ್ನಡ ಪದಗಳನ್ನು ಬಳಸಿ, ಕನ್ನಡಿಗರ ಮನ ಗೆದ್ದಿದೆ. ಧನ್ಯವಾದಗಳು, ಹೇಗಿದ್ದೀಯಾ ಮುಂತಾದ ಪದಗಳನ್ನು ಮುದ್ರಿಸಿ, ಕನ್ನಡಕ್ಕೆ ಗೌರವ ಸಲ್ಲಿಸಿದೆ. ಈ ವಿಶಿಷ್ಟ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು: ಕ್ಯಾಡ್‌ಬರೀಸ್ ಡೈರಿ ಮಿಲ್ಕ್ ಚಾಕೊಲೇಟ್ ಪ್ಯಾಕಿಂಗ್ ವಿಧಾನವನ್ನು ಕನ್ನಡಿಗರು ಖುಷ್ ಆಗಿದ್ದಾರೆ. ಕನ್ನಡಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಕ್ಯಾಡ್‌ಬರೀಸ್ ಕಂಪನಿಯ ವಿಶಿಷ್ಟ ಪ್ರಯತ್ನಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಡ್‌ಬರೀಸ್ ಕಂಪನಿಯ ಚಾಕೊಲೇಟ್ ಪ್ಯಾಕಿಂಗ್ ಫೋಟೋಗಳು ವೈರಲ್ ಆಗುತ್ತಿವೆ. ಧನ್ಯವಾದ, ಏನು, ಹೇಗಿದ್ದೀಯಾ, ಹಗಲು, ರಾತ್ರಿ ಸೇರಿದಂತೆ ಮುಂತಾದ ಕನ್ನಡ ಪದಗಳನ್ನು ಪ್ಯಾಕ್ ಮೇಲೆ ಮುದ್ರಣ ಮಾಡಲಾಗಿದೆ. ಸ್ವಲ್ಪ ಸ್ವಲ್ಪ ಕನ್ನಡ ವೇರಿ ವೇರಿ ಸ್ವೀಟ್ ಎಂಬ ಸಾಲುಗಳನ್ನು ಸಹ ಪ್ರಿಂಟ್ ಮಾಡಲಾಗಿದೆ.
ಪದಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಕನ್ನಡದಲ್ಲಿ ಪ್ರತಿನಿತ್ಯ ಬಳಸುವ ಸರಳ ಪದಗಳನ್ನು ಇಂಗ್ಲಿಷ್‌ನಲ್ಲೇ ಮುದ್ರಣ ಮಾಡಲಾಗಿದೆ. ನಂತರ ಆ ಪದಗಳನ್ನು ಕನ್ನಡದಲ್ಲಿ ಏನು ಅಂತಾರೆ ಅನ್ನೋದನ್ನು ಆಂಗ್ಲಭಾಷೆಯಲ್ಲಿಯೇ ಮುದ್ರಿಸಿರೋದನ್ನು ಕಾಣಬಹುದು. ಈ ಮೂಲಕ ಕನ್ನಡ ಬಾರದವರಿಗೆ ಕನ್ನಡ ಕಲಿಸಲು ಮುಂದಾದ ಡೈರಿ ಮಿಲ್ಕ್ ಬಗ್ಗೆ ಕನ್ನಡಿಗರು ಫಿದಾ ಆಗಿದ್ದಾರೆ.
ಏನೆಲ್ಲ ಕನ್ನಡ ಪದಗಳ ಪಾಠ?
- ಧನ್ಯವಾದ (dhanyavada)
- ಏನು? (enu)
- ಕ್ಷಮಿಸಿ (kshamisi)
- ಹೇಗಿದ್ದೀಯಾ? (hegiddiya?)
- ಸ್ವಲ್ಪ (swalpa)
- ಸಹಾಯ ಬೇಕಾ? (sahaya beka)
- ಸಂಜೆ (sanje)
- ಬೆಳಿಗ್ಗೆ (beligge)
- ರಾತ್ರಿ (ratri)
