ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರೇ ತಪ್ಪಿತಸ್ಥರಾದರೂ, ಸರ್ಕಾರ ಹಿಂದೂಗಳ ಮೇಲೆ ಕ್ರಮ ಜರುಗಿಸಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. 

ಬೆಂಗಳೂರು (ಸೆ.11): ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮುಸ್ಲಿಂ ಗೂಂಡಗಳು ಕಲ್ಲು ತೂರಾಟ ಮಾಡಿದ್ದಾರೆ. ಮಕ್ಕಳಿಂದ ಉಗಿಸೋದು ಮಾಡಿದ್ದಾರೆ ಇಷ್ಟಾದರೂ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಗಣೇಶ ಮೆರವಣಿಗೆ ಕಲ್ಲು ತೂರಾಟ ನಡೆಸಿದ್ದೇ ಮುಸ್ಲಿಮರು. ತಪ್ಪು ಅವರದ್ದು ಆದ್ರೂ ಈ ಸರ್ಕಾರ ಹಿಂದೂಗಳ ಮೇಲೆ ಕ್ರಮ ಜರುಗಿಸಿದೆ ಎಂದು ಕಿಡಿಕಾರಿದರು.

ನಾನು ಮದ್ದೂರಿಗೆ ಹೋಗಬೇಕು ಎಂಬ ಉತ್ಸುಕತೆ ಹೆಚ್ಚಾಗಿದೆ. ಇಂದು ಮದ್ದೂರಿಗೆ ಹೋಗುತ್ತೇನೆ. ರಾಜ್ಯದಲ್ಲಿ ಔರಂಗಜೇಬನ ಸರ್ಕಾರ ಇದೆ. ಸದ್ಯದಲ್ಲೇ ಪತನವಾಗಲಿದೆ ಎಂದರು. ಒಂದು ಕೋಮುವನ್ನು ಖುಷಿಪಡಿಸಲು ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಇದು ಎಲ್ಲಿವರೆಗೆ ನಡೆಯುತ್ತದೆ ನೋಡೋಣ ಎಂದರು.

ನಾವು ಕೇಸ್‌ಗಳಿಗೆ ಹೆದರುವುದಿಲ್ಲ: ಯತ್ನಾಳ್

ಸಿಟಿ ರವಿ ವಿರುದ್ಧದ ಕೇಸ್‌ಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಸಿಟಿ ರವಿ ಅವರ ಮೇಲೆ ಹಾಕಿದ ಕೇಸ್‌ಗೆ ನಾವು ಹೆದರೋಲ್ಲ. ನನ್ನ ಮೇಲೆ 70 ಕೇಸ್ ದಾಖಲಾಗಿದೆ. ಇದಕ್ಕೆಲ್ಲ ನಾವು ಅಂಜುವುದಿಲ್ಲ ಎಂದರು. ಇದೇ ವೇಳೆ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ನಾವ ಮನುಷ್ಯರ ಹೇಳಿಕೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತೇವೆ ಕಾಂಜಿಪಿಂಜಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಅಪ್ಪ-ಮಕ್ಕಳ ಹೊಂದಾಣಿಕೆ ರಾಜಕಾರಣ ವಿರುದ್ಧ ಯತ್ನಾಳ್ ಕಿಡಿ:

ಕರ್ನಾಟಕದ ಜನತೆ ಬಿಜೆಪಿಯವರ ಹೊಂದಾಣಿಕೆ ರಾಜಕಾರಣ ಒಪ್ಪುತ್ತಿಲ್ಲ. ಹಾಗಾಗಿ ನಾನು ಮದ್ದೂರಿಗೆ ಹೋಗುತ್ತಿದ್ದೇನೆ. ಕರ್ನಾಟಕ ಜನತೆ ಯಾರನ್ನ ಒಪ್ಪಿಕೊಳ್ಳುತ್ತಾರೆ ಅನ್ನೋದನ್ನ ನೋಡಬೇಕು. ಜನರು ಪೂಜ್ಯ ತಂದೆಯವ್ರು ಹಾಗೂ ಅವರ ಮಗನ ಜೊತೆ ಇದ್ದಾರೆ ಅಂತಾ ಅಂದುಕೊಂಡಿದ್ದಾರೆ. ಅದನ್ನ ಬಟಾಬಯಲು ಮಾಡುವುದೇ ನನ್ನ ಹೋರಾಟ. ಈಗ ಜನರು ಅವರ ಹಿಂದೆ ಇಲ್ಲ ಅನ್ನೋದು ಹೈಕಮಾಂಡ್‌ಗೆ ಅರ್ಥವಾಗಿದೆ. 

ಸದಸನದಲ್ಲಿ ಆರ್ ಸಿಬಿ ಚರ್ಚೆಯಾದಾಗದ ಪೂಜ್ಯ ತಂದೆಯವ್ರ ಮಗ ಮಾತನಾಡಲಿಲ್ಲ. ಆರ್ ಅಶೋಕ್ ಮಾತನಾಡಿದ್ರು. ಕರಿಬಸವ, ಬಿಳಿಬಸವ ಅಂತಾ ಏನೇನೋ ಮಾತಾನಾಡಿದರು. ಆದ್ರೆ ಸಿಎಂ ಡಿಸಿಎಂ ಅವರನ್ನ ಟಾರ್ಗೆಟ್ ಮಾಡಿ ಮಾತನಾಡಲಿಲ್ಲ. ನಿಮ್ಮನ್ನು ಜನರು ಒಪ್ಪುತ್ತಿಲ್ಲ. ಹೊಂದಾಣಿಕೆ ರಾಜಕಾರಣವನ್ನು ಬಿಡಿ ಎಂದು ಪರೋಕ್ಷವಾಗಿ ಬಿವೈ ವಿಜಯೇಂದ್ರ ಕುಟುಂಬದ ವಿರುದ್ಧ ಮತ್ತೆ ಹರಿಹಾಯ್ದರು.